ಯುನೈಟೆಡ್ ಏರ್‌ಲೈನ್ಸ್ ಜೆಟ್‌ಲೈನರ್ ವಿಮಾನವು ಹವಾಯಿ ದ್ವೀಪವಾದ ಮಾಯಿಯಲ್ಲಿ ಇಳಿದ ನಂತರ ಅದರ ‘ವೀಲ್ ವೆಲ್’ (ಚಕ್ರದ ಮೇಲ್ಭಾಗ) ನಲ್ಲಿ ಮೃತದೇಹ ಪತ್ತೆಯಾಗಿದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.
ಮಂಗಳವಾರ ಮಧ್ಯಾಹ್ನ ಚಿಕಾಗೋ ಓ’ಹೇರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಯುನೈಟೆಡ್ ಫ್ಲೈಟ್ ಕಹುಲುಯಿ ವಿಮಾನ ನಿಲ್ದಾಣದಲ್ಲಿ ಇಳಿದಾಗ ವಿಮಾನದ ಲ್ಯಾಂಡಿಂಗ್ ಗೇರ್ ಹೊಂದಿರುವ ಕಂಪಾರ್ಟ್‌ಮೆಂಟ್‌ಗಳಲ್ಲಿ ಶವ ಪತ್ತೆಯಾಗಿದೆ ಎಂದು ಏರ್‌ಲೈನ್‌ನ ವೆಬ್‌ಸೈಟ್ ತಿಳಿಸಿದೆ.
ಇದನ್ನು ಓದಿದ್ದೀರಾ? ಮೃತದೇಹದೊಂದಿಗೆ ಸಂಭೋಗ ಅತ್ಯಾಚಾರವಲ್ಲ: ಛತ್ತೀಸ್‌ಗಢ ಹೈಕೋರ್ಟ್
ಮೃತ ವ್ಯಕ್ತಿಯ ಬಗ್ಗೆ ಹೆಚ್ಚಿನ ವಿವರ ಲಭ್ಯವಾಗಿಲ್ಲ. “ವೀಲ್ ವೆಲ್ ಅನ್ನು ವಿಮಾನದ ಹೊರಗಿನಿಂದ ಮಾತ್ರ ಪ್ರವೇಶಿಸಬಹುದು. ವ್ಯಕ್ತಿ ಯಾವಾಗ ಈ ಕಂಪಾರ್ಟ್‌ಮೆಂಟ್‌ಗೆ ಬಂದ ಎಂಬುದು ಸ್ಪಷ್ಟವಾಗಿಲ್ಲ” ಎಂದು ವಿಮಾನಯಾನ ಸಂಸ್ಥೆ ಹೇಳಿದೆ. ಈ ಬಗ್ಗೆ ಅಧಿಕ ತನಿಖೆ ನಡೆಯುತ್ತಿದೆ.
ಕಳೆದ ವರ್ಷ ಪ್ಯಾರಿಸ್‌ನಲ್ಲಿ ವಿಮಾನದ ಅಂಡರ್‌ಕ್ಯಾರೇಜ್‌ನಲ್ಲಿ ವ್ಯಕ್ತಿಯೊಬ್ಬರು ಜೀವಂತವಾಗಿ ಪತ್ತೆಯಾಗಿದ್ದರು. 2022ರ ಜನವರಿಯಲ್ಲಿ ಆಫ್ರಿಕಾದಿಂದ ಆಮ್‌ಸ್ಟರ್‌ಡ್ಯಾಮ್‌ನ ಶಿಪೋಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಕಾರ್ಗೋಲಕ್ಸ್ ಸರಕು ಸಾಗಣೆ ವಿಮಾನದ ಮುಂಭಾಗದ ಚಕ್ರದ ಭಾಗದಲ್ಲಿ ವ್ಯಕ್ತಿಯೊಬ್ಬರು ಜೀವಂತವಾಗಿ ಪತ್ತೆಯಾಗಿದ್ದರು.
