ಮೈಸೂರು-ಬೆಂಗಳೂರು-ಮೈಸೂರು ಮಾರ್ಗದಲ್ಲಿ ಕಾರ್ಯಾಚರಣೆ ಮಾಡುತ್ತಿರುವ ನಿಗಮದ ಸಾರಿಗೆಗಳನ್ನು ಬಿಡದಿ ಗ್ರಾಮದ ಮುಖೇನ ಕಾರ್ಯಾಚರಣೆ ಮಾಡದೇ ಬೈಪಾಸ್ ಮೂಲಕ ಕಾರ್ಯಾಚರಣೆ ಮಾಡುತ್ತಿದ್ದವು. ಇದರಿಂದ ಸಾರ್ವಜನಿಕರಿಗೆ ಬಹಳ ತೊಂದರೆ ಆಗುತ್ತಿತ್ತು.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ಸುಗಳು ಬಿಡದಿ ಪಟ್ಟಣಕ್ಕೆ ಬಾರದೇ ಬೈಪಾಸ್ ಮುಖಾಂತರ ಹಾದು ಹೋಗುತ್ತಿದ್ದವು. ಬಿಡದಿ ಹೋಗುವುದಿಲ್ಲವೆಂದು ಬೆಂಗಳೂರು ನಗರದಲ್ಲಿನ ಮೈಸೂರು ರಸ್ತೆ ಬಸ್ ನಿಲ್ದಾಣ ಹಾಗೂ ಕೆಂಗೇರಿ ಮತ್ತು ಚನ್ನಪಟ್ಟಣ ಹಾಗೂ ರಾಮನಗರ ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳುತ್ತಿರಲಿಲ್ಲ. ಇದರಿಂದ ಪ್ರಯಾಣಿಕರಿಗೆ ತುಂಬಾ ತೊಂದರೆ ಉಂಟಾಗುತ್ತಿತ್ತು. ಬಿಡದಿ ಗ್ರಾಮದ ಮುಖೇನ ಬಸ್ಸುಗಳನ್ನು ಆಚರಣೆ ಮಾಡಲು ಕ್ರಮ ವಹಿಸುವಂತೆ ಸಾರ್ವಜನಿಕರ ಒತ್ತಾಯ ಕೇಳಿ ಬಂದಿತ್ತು.
ಸಾರ್ವಜನಿಕರಿಗೆ ಆಗುತ್ತಿರುವ ಆನಾನುಕೂಲ ತಪ್ಪಿಸುವ ಸಲುವಾಗಿ ಮುಖ್ಯ ಸಂಚಾರ ವ್ಯವಸ್ಥಾಪಕರು, ಬೆಂಗಳೂರಿನ ಶಾಂತಿನಗರ ಕೇಂದ್ರ ಕಚೇರಿ ರವರಿಗೆ ರಾಜ್ಯ ಮಾಹಿತಿ ಹಕ್ಕು ಹಾಗೂ ಸಾಮಾಜಿಕ ಕಾರ್ಯಕರ್ತರ ವೇದಿಕೆಯ ಜಿಲ್ಲಾಧ್ಯಕ್ಷರಾದ ಆರ್.ಹೆಚ್.ರಾಜಶೇಖರ್ ದೂರು ನೀಡಿದ್ದರು.
ಸದರಿ ಸಂಘಟನೆಯ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಅಧಿಕಾರಿಗಳು, ವಿಭಾಗೀಯ ನಿಯಂತ್ರಾಧಿಕಾರಿಗಳಿಗೆ ಸುತ್ತೋಲೆಯನ್ನು ಹೊರಡಿಸಿ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ.
ಇದನ್ನು ಓದಿದ್ದೀರಾ? ಮಂಡ್ಯ | ಸಂವಿಧಾನ ಉಳಿಯಬೇಕಾದರೆ ಮನು ಸಿದ್ಧಾಂತ ಸಂಪೂರ್ಣ ನಶಿಸಬೇಕು: ‘ಮನುಸ್ಮೃತಿ’ ಸುಟ್ಟು ಪ್ರತಿಭಟನೆ
ವಿವಿಧ ಸ್ಥಳಗಳಿಂದ ಬಿಡದಿ ಮುಖೇನ ಬೆಂಗಳೂರಿಗೆ ಹಾಗೂ ಬೆಂಗಳೂರಿನಿಂದ ಬಿಡದಿ ಮುಖೇನ ವಿವಿಧ ಸ್ಥಳಗಳಿಗೆ ಕಾರ್ಯಾಚರಣೆ ಮಾಡುತ್ತಿರುವ ಎಲ್ಲಾ ಸಾರಿಗೆಗಳನ್ನು (ಪ್ರತಿಷ್ಠಿತ ಹಾಗೂ ತಡೆರಹಿತ ಸಾರಿಗೆಗಳನ್ನು ಹೊರತುಪಡಿಸಿ) ಬಿಡದಿ ಗ್ರಾಮದ ಮೂಲಕ ಕಾರ್ಯಾಚರಿಸಿ, ಬಿಡದಿ ಗ್ರಾಮದಲ್ಲಿ ನಿಲುಗಡೆ ನೀಡಿ ಪ್ರಯಾಣಿಕರನ್ನು ಇಳಿಸಿ/ಹತ್ತಿಸಿ ಸಾರಿಗೆಗಳನ್ನು ಕಾರ್ಯಾಚರಿಸಲು ಅಗತ್ಯ ಕ್ರಮವಹಿಸುವಂತೆ ಸಂಬಂಧಪಟ್ಟ ವಿಭಾಗಗಳ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಲಾಗಿದೆ ಎಂಬ ವಿಷಯವನ್ನು ತಿಳಿಸಬಯಸುತ್ತೇನೆ ಎಂದು ಮುಖ್ಯ ಸಂಚಾರ ವ್ಯವಸ್ಥಾಪಕರು ಡಿ.13ರ ತಮ್ಮ ಸತ್ತೋಲೆಯಲ್ಲಿ ನಿರ್ದೇಶಿದ್ದಾರೆ.