- ಐಪಿಸಿ ಸೆಕ್ಷನ್ 392 (ದರೋಡೆ) ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲು
- ಟೆಕ್ಕಿ ಮುಶೀರ್ ಶೇಖ್ಗೆ ಚಾಕು ತೋರಿಸಿ ಬೆದರಿಕೆ ಹಾಕಿದ ದರೋಡೆಕೋರರು
ಬೆಂಗಳೂರಿನ ಮಾರತಹಳ್ಳಿಯ ಹೊರ ವರ್ತುಲ ರಸ್ತೆಯ ಬಳಿ ಬೈಕ್ನಲ್ಲಿ ಬಂದ ಇಬ್ಬರು ದರೋಡೆಕೋರರು ಟೆಕ್ಕಿಯೊಬ್ಬರ ಲೆನೊವೊ ಐಡಿಯಾಪ್ಯಾಡ್ ಮತ್ತು ಆಪಲ್ ಮ್ಯಾಕ್ಬುಕ್ ಅನ್ನು ದೋಚಿರುವ ಘಟನೆ ನಡೆದಿದೆ.
ಮೇ 24 ರಂದು ಮಧ್ಯರಾತ್ರಿ 12:30 ರ ಸುಮಾರಿಗೆ ಟೆಕ್ಕಿ ಮುಶೀರ್ ಶೇಖ್ (22) ಅವರು ಅಹಮದಾಬಾದ್ನಿಂದ ಬೆಂಗಳೂರಿಗೆ ಬಂದಿದ್ದರು. ಬಳಿಕ ಬಿಎಂಟಿಸಿ ಬಸ್ನಲ್ಲಿ ಕಾರ್ತಿಕನಗರಕ್ಕೆ ತೆರಳಿ, ಮಾರುತಿನಗರಕ್ಕೆ ಹೋಗಲು ಮಾರತಹಳ್ಳಿಯ ಹೊರ ವರ್ತುಲ ರಸ್ತೆಯ ಬಳಿ ಕ್ಯಾಬ್ಗಾಗಿ ಕಾಯುತ್ತಿದ್ದಾರೆ. ಈ ವೇಳೇಗಾಗಲೇ ಸಮಯ ರಾತ್ರಿ 2 ಗಂಟೆ ಆಗಿತ್ತು.
ಈ ವೇಳೆ ಬೈಕ್ನಲ್ಲಿ ಬಂದ ಇಬ್ಬರು ದರೋಡೆಕೋರರು ಟೆಕ್ಕಿ ಮುಶೀರ್ ಶೇಖ್ಗೆ ಚಾಕು ತೋರಿಸಿ, ಅವರ ಬಳಿ ಇರುವ ವಸ್ತುಗಳನ್ನು ನೀಡುವಂತೆ ಬೆದರಿಕೆ ಹಾಕಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಕೂಲಿ ಕಾರ್ಮಿಕನ ಕತ್ತು ಸೀಳಿ ಬರ್ಬರ ಕೊಲೆ
ಟೆಕ್ಕಿ ಮುಶೀರ್ ಶೇಖ್ ಭಯಭೀತರಾಗಿ ಲೆನೊವೊ ಐಡಿಯಾಪ್ಯಾಡ್ ಮತ್ತು ಆಪಲ್ ಮ್ಯಾಕ್ಬುಕ್ ಸೇರಿದಂತೆ ಅವರು ಬ್ಯಾಗ್ನಲ್ಲಿದ್ದ ಮೊಬೈಲ್ ಫೋನ್, ಆಧಾರ್ ಕಾರ್ಡ್, ಪಾಸ್ಪೋರ್ಟ್, ಕ್ರೆಡಿಟ್ ಕಾರ್ಡ್ ಮತ್ತು ಎರಡು ಡೆಬಿಟ್ ಕಾರ್ಡ್ ಅನ್ನು ದರೋಡೆಕೋರರು ದೋಚಿದ್ದಾರೆ.
ಐಪಿಸಿ ಸೆಕ್ಷನ್ 392 (ದರೋಡೆ) ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.