ಆ್ಯಂಬುಲೆನ್ಸ್‌ನಲ್ಲಿ ತಾಮ್ರ ಸಾಗಾಟ ಮಾಡುತ್ತಿದ್ದ ಮೂವರು ಖದೀಮರನ್ನು ಚಿಕ್ಕಮಗಳೂರು ಟೌನ್ ಸ್ಟೇಷನ್ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಚಿಕ್ಕಮಗಳೂರು ನಗರದ ರಾಂಪುರ ಬಳಿಯಿರುವ ತಾಮ್ರ ತಯಾರಿಕಾ ಘಟಕದಲ್ಲಿ ಕೆಲಸ ಮಾಡುತ್ತಿದ್ದ ಮೂವರು ಖದೀಮರು ಸುಮಾರು ₹88 ಲಕ್ಷ ಮೌಲ್ಯದ 16,320 ಕೆಜಿ ತಾಮ್ರ(ಕಾಪರ್) ಸ್ಕ್ಯಾಪ್ ಕಳವು ಮಾಡಿದ್ದರು. ಬಳಿಕ ಈ ಕುರಿತು ಪ್ರಭಾಕರ್ ಎಂಬುವವರು ಟೌನ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಈ ಸುದ್ದಿ ಓದಿದ್ದೀರಾ? ಹಾಸನ | ಡಿ.29 ರಿಂದ 31ರವರೆಗೆ ಸಿಪಿಐಎಂ 24ನೇ ರಾಜ್ಯ ಸಮ್ಮೇಳನ
ಈ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡ ಪೊಲೀಸರು, ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ದೇವರನವದಗಿ ಗ್ರಾಮದ ರಾಜಕುಮಾರ್, ಗೌರೀಶ್ ಹಾಗೂ ಚಿಕ್ಕಮಗಳೂರಿನ ಉಪ್ಪಳ್ಳಿ ನಿವಾಸಿ ಮಹಮ್ಮದ್ ಜುನೈದ್ ಎಂಬ ಮೂವರು ಆರೋಪಿಗಳನ್ನು ಬಂಧಿಸಿ ₹88.21 ಲಕ್ಷ ಮೌಲ್ಯದ 12,425 ಕೆಜಿ ತಾಮ್ರದ ಸ್ಕ್ಯಾಪ್ ಮತ್ತು ಕೃತ್ಯಕ್ಕೆ ಬಳಸಿದ ಮಾರುತಿ ಓಮ್ನಿ ಆ್ಯಂಬುಲೆನ್ಸ್ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಪೊಲೀಸರ ಕಾರ್ಯಕ್ಕೆ ಚಿಕ್ಕಮಗಳೂರು ಎಸ್‌ಪಿ ವಿಕ್ರಂ ಅಮಟೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.