ಸರಣಿ ಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ(ಎನ್ ಆರ್ ಪುರ) ತಾಲೂಕಿನ ಬಾಳೆಹೊನ್ನೂರಿನ ಪೊಲೀಸರು ಬಂಧಿಸಿದ್ದಾರೆ.
ವೈನ್ ಶಾಫ್ ಸೇರಿದಂತೆ ಒಟ್ಟು ನಾಲ್ಕು ಅಂಗಡಿಗಳಲ್ಲಿ ಕರುಣ ಆರ್(25) ಹಾಗೂ ಹಸೈನ್(22) ಬಂಧಿತ ಆರೋಪಿಗಳು. ಕಳೆದ ಒಂದು ವಾರದ ಹಿಂದೆ ಪವನ್ ಪ್ರಾವಿಷನ್ ಸ್ಟೋರ್, ಎನ್ ಆರ್ ಪುರ ರಸ್ತೆಯ ಕಲ್ಮಕ್ಕಿ ವೈನ್ಸ್, ಪ್ರಭು ಪ್ರಾವಿಷನ್ ಸ್ಟೋರ್ ಹಾಗೂ ಬಾಳೆಹೊನ್ನೂರು ಕಾಫಿ ಲಿಂಕ್ಸ್ ಎಂಬ 4 ಅಂಗಡಿಗಳಲ್ಲಿ ಬೀಗ ಒಡೆಯದೆ ಬಾಗಿಲನ್ನು ಆಯುಧದಿಂದ ಮೀಟಿ ಒಳ್ಳ ನುಗ್ಗಿ ನಗದು ಸೇರಿದಂತೆ ಸಿಸಿಟಿವಿ, ಡಿವಿಆರ್ ಹಾಗೂ ಮತ್ತಿತರ ವಸ್ತುಗಳನ್ನು ಕಳ್ಳತನ ಮಾಡಿದ್ದರು.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ಆ್ಯಂಬುಲೆನ್ಸ್‌ನಲ್ಲಿ ತಾಮ್ರ ಸಾಗಾಟ; ಮೂವರ ಬಂಧನ
ಈ ಕಾರ್ಯಾಚರಣೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಎಸ್‌ಪಿ ವಿಕ್ರಂ ಅಮಟೆ, ಚಿಕ್ಕಮಗಳೂರು ಜಿಲ್ಲೆಯ ಹೆಚ್ಚುವರಿ ಅಧೀಕ್ಷಕ ಕೃಷ್ಣಮೂರ್ತಿ, ಕೊಪ್ಪ ಉಪ ವಿಭಾಗ ಡಿವೈಎಸ್‌ಪಿ ಬಾಲಾಜಿ ಸಿಂಗ್ ಮಾರ್ಗದರ್ಶನದಲ್ಲಿ ಬಾಳೆಹೊನ್ನೂರು ಠಾಣೆಯ ಪಿಎಸ್‌ಐ ರವೀಶ್ ಹಾಗೂ ಸಿಬ್ಬಂದಿಗಳಾದ ಶಂಕರ್ ಕೆ ಜೆ, ಜಯರಾಮ್, ಮಂಜುನಾಥ, ವಿನಾಯಕ, ಮನು ಮಂಜುನಾಥ ಗುಗ್ಗರಿ, ಕಿರಣ್, ಭೀಮಸೇನಾ, ಚನ್ನಯ್ಯ, ಚಾಲಕ ಕಾರ್ತಿಕ್ ಸೇರಿದಂತೆ ಇತರರು ಇದ್ದರು.
