ಕುವೆಂಪು ಕನ್ನಡ ನಾಡಿಗೆ ಕೀರ್ತಿ ಕಳಶ. ಅವರು ಸಾಹಿತ್ಯ ಕೃಷಿಯ ಜೊತೆಗೆ ಸಾಮಾಜಿಕ ಕಳಕಳಿ ಇಟ್ಟು ಕೊಂಡವರಾಗಿದ್ದರು. ಯಾರು ಮುಖ್ಯರಲ್ಲ, ಯಾರು ಅಮುಖ್ಯರಲ್ಲ ಎಂದು ತಮ್ಮ ಕೃತಿಗಳಲ್ಲಿ ಶ್ರೀಸಾಮಾನ್ಯನಿಗೆ ಮಾನ್ಯತೆ ಕೊಟ್ಟಿದ್ದರು ಎಂದು ಶ್ರೀರಂಗಪಟ್ಟಣದ ಪ್ರಜ್ಞಾವಂತರ ವೇದಿಕೆಯ ವಕೀಲರಾದ ವೆಂಕಟೇಶ್ ಹೇಳಿದರು.

ಅವರು ಶ್ರೀರಂಗಪಟ್ಟಣದಲ್ಲಿ ವಿವಿಧ ಪ್ರಗತಿಪರ ಸಂಘಟನೆಗಳ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಕುವೆಂಪು ಜಯಂತಿಯಂದು ಕುವೆಂಪು ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ನೆರೆದಿದ್ದವರನ್ನು ಉದ್ದೇಶಿಸಿ ಮಾತನಾಡಿ, ನಮ್ಮ ನಾಡಿನ ಹಿರಿಮೆಯನ್ನು ತಮ್ಮ ಕಾವ್ಯಗಳ ಮೂಲಕ ಕಟ್ಟಿಕೊಟ್ಟಿದ್ದಾರೆ ಎಂದರು.
ರೈತರ ಬದುಕು ಹೇಗಿದೆ. ಯಾವ ರೀತಿಯಲ್ಲಿ ವಂಚನೆ ಇಲ್ಲದೆ ರೈತರು ತನ್ನ ಕಾಯಕ ಮಾಡಿಕೊಂಡು ಬರುತ್ತಾರೆ ಎಂದು ರೈತ ಗೀತೆ ಮೂಲಕ ಕುವೆಂಪು ಬಹಳ ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ. ಈ ರೈತ ಗೀತೆ, ರೈತ ಹೋರಾಟಗಾರರಿಗೆ ಸ್ಪೂರ್ತಿ ಕೊಡುವ ಹಾಡಾಗಿದೆ ಎಂದು ನೆನೆದರು.
ಇದನ್ನು ಓದಿದ್ದೀರಾ? ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಈದಿನ ವಿಶೇಷ ಸಂಚಿಕೆ, ನ್ಯೂಸ್ ಆ್ಯಪ್ ಬಿಡುಗಡೆ
ಕಡತನಾಳು ಜಯಶಂಕರ್ ಮಾತನಾಡಿ, ಶ್ರೀರಂಗಪಟ್ಟಣ ಕುವೆಂಪುರವರ ಆಶಯದಂತೆ ಸರ್ವ ಜನಾಂಗದ ಶಾಂತಿಯ ತೋಟದಂತಿದೆ. ಕುವೆಂಪು ವಿಶ್ವ ಮಾನವ ಸಂದೇಶ ಕೊಟ್ಟ ಕಾರಣ ವಿಕ್ಕೆಲ್ಲಾ ಕವಿಗಳಿಗಿಂತ ಹೆಚ್ಚಾಗಿ ನೆನೆಸುತ್ತೆವೆ. ಸಮಾಜದಲ್ಲಿ ನಡೆಯುತ್ತಿರುವ ಅನಿಷ್ಟಗಳನ್ನಲ್ಲಾ ತಮ್ಮ ಸಾಹಿತ್ಯದ ಮೂಲಕ ಖಂಡಿಸಿ ತಿದ್ದಿ ತೀಡಿದರು. ಆ ಕಾರಣಕ್ಕಾಗಿ ವಿಶ್ವ ಮಾನ್ಯರಾದರು ಎಂದರು.
ಇದನ್ನು ನೋಡಿದ್ದೀರಾ? 100 ಮೀಟರ್ ರಸ್ತೆಗೆ ₹55 ಲಕ್ಷ ಖರ್ಚು!
ಕುವೆಂಪು ದಿನಾಚರಣೆಯ ಸಂದರ್ಭದಲ್ಲಿ ಪ್ರಜ್ಞಾವಂತರ ವೇದಿಕೆ ಸಂಚಾಲಕರಾದ ಸಿ.ಎಸ್. ವೆಂಕಟೇಶ್, ಅಪ್ಪಾಜಿ ಶೆಟ್ಟಹಳ್ಳಿ, ಜಯಶಂಕರ, ಬೌದ್ಧ ಮಹಾಸಭಾದ ಸುರೇಂದ್ರ, ಮಾನವ ಹಕ್ಕು ಸಂಘಟನೆಯ ವಿಜೇಂದ್ರ ಕುಮಾರ್, ಪುಟ್ಟು, ವೆಂಕಟಮ್ಮ, ರೈತ ಸಂಘದ ಚಿಕ್ಕತಮ್ಮೇಗೌಡ ಇನ್ನೂ ಮುಂತಾದವರು ಉಪಸ್ಥಿತರಿದ್ದರು.