ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ, ಯುಎಸ್‌ನ ಮಾಜಿ ಅಧ್ಯಕ್ಷ ಶತಾಯುಷಿ ಜಿಮ್ಮಿ ಕಾರ್ಟರ್ ನಿಧನರಾಗಿದ್ದಾರೆ. ಅಮೆರಿಕದ 39ನೇ ಅಧ್ಯಕ್ಷರಾಗಿದ್ದ ಜಿಮ್ಮಿ ಕಾರ್ಟರ್ 1977ರ ಜನವರಿಯಿಂದ 1981ರ ಜನವರಿವರೆಗೆ ಸೇವೆ ಸಲ್ಲಿಸಿದ್ದರು.
2023ರಿಂದ ವಯೋಸಂಬಂಧಿ ಅಸ್ವಸ್ಥತೆಗಳಿಗೆ ಚಿಕಿತ್ಸೆ ಪಡೆಯುತ್ತಿದ್ದ ನೂರು ವರ್ಷದ ಜಿಮ್ಮಿ ಕಾರ್ಟರ್ ಯಕೃತ್ತು ಮತ್ತು ಮೆದುಳಿಗೆ ಹರಡುವ ಮೆಲನೋಮಾ ಸೇರಿದಂತೆ ಹಲವು ಆರೋಗ್ಯ ಸಮಸ್ಯೆ ಹೊಂದಿದ್ದರು ಎಂದು ಹೇಳಲಾಗಿದೆ.
ಇದನ್ನು ಓದಿದ್ದೀರಾ? ‘ಮೋದಿ ಮತ್ತೆ ಪ್ರಧಾನಿಯಾದರೆ ಪಿಒಕೆ 6 ತಿಂಗಳಲ್ಲಿ ಭಾರತದ ತೆಕ್ಕೆಗೆ’ ಎಂದಿದ್ದ ಯೋಗಿ; ಕಾಲೆಳೆದ ಟ್ರೋಲಿಗರು
ಇಸ್ರೇಲ್ ಮತ್ತು ಈಜಿಪ್ಟ್ ನಡುವೆ ಶಾಂತಿಗೆ ಮಧ್ಯಸ್ಥಿಕೆ ವಹಿಸಿದ ಹಾಗೂ ಅವರ ಮಾನವೀಯ ಕಾರ್ಯಕ್ಕಾಗಿ ಜಿಮ್ಮಿಗೆ 2002ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿಯನ್ನು ನೀಡಲಾಗಿತ್ತು. 1978ರಲ್ಲಿ ಇಸ್ರೇಲ್ ಮತ್ತು ಈಜಿಪ್ಟ್ ನಡುವೆ ಒಪ್ಪಂದಕ್ಕೆ ಮಧ್ಯಸ್ಥಿಕೆ ವಹಿಸಿದ್ದರು.
ಎಂಜಿನಿಯರಿಂಗ್ ಪದವೀಧರರಾಗಿ ಬಳಿಕ ಜಾರ್ಜಿಯಾದ ಗವರ್ನರ್ ಆದ ಕಾರ್ಟರ್ 1976ರ ಅಧ್ಯಕ್ಷೀಯ ಚುನಾವಣೆಯಲ್ಲಿ ಬಹುತೇಕ ಹೊರಗಿನವರು ಎನಿಸಿಕೊಂಡಿದ್ದರು. “ನಾನು ಎಂದಾದರೂ ನಿಮಗೆ ಸುಳ್ಳು ಹೇಳಿದರೆ, ತಪ್ಪುದಾರಿಗೆ ಎಳೆಯುವಂತ ಹೇಳಿಕೆಗಳನ್ನು ನೀಡಿದರೆ ನನಗೆ ಮತ ನೀಡಬೇಡಿ” ಎಂದು ಹೇಳುವ ಮೂಲಕವೇ ಪ್ರಚಾರ ಮಾಡಿದ್ದರು.
ಜಿಮ್ಮಿ ಪತ್ನಿ ರೊಸಾಲಿನ್ ಕಾರ್ಟರ್ 2023ರ ನವೆಂಬರ್ 19ರಂದು ತನ್ನ 96 ನೇ ವಯಸ್ಸಿನಲ್ಲಿ ನಿಧನರಾದರು. ಅದಾದ ಬಳಿಕ ಜಿಮ್ಮಿ ಮತ್ತಷ್ಟು ಕುಗ್ಗಿದರು ಎಂದು ವರದಿಯಾಗಿದೆ.
