ಉಡುಪಿ | ‘ನಮ್ಮ ಕರ್ನಾಟಕ (ನಡೆದ 50 ಹೆಜ್ಜೆ…ಮುಂದಿನ ದಿಕ್ಕು)’ ವಿಶೇಷ ಸಂಚಿಕೆ, ಈ ದಿನ ನ್ಯೂಸ್‌ ಆ್ಯಪ್‌ ಬಿಡುಗಡೆ

Date:

Advertisements

ಸಮಗ್ರ ಕರ್ನಾಟಕದ ಐವತ್ತು ವರ್ಷಗಳ ಇತಿಹಾಸವನ್ನು ತಿಳಿಸುವಂತಹ ಮತ್ತು ಸಮಸ್ತ ಕನ್ನಡಿಗರಿಗೆ ನ್ಯಾಯ ದೊರಕಿಸಿ ಕೊಡುವಂತಹ ಸಂಗ್ರಹ ಯೋಗ್ಯ ಪುಸ್ತಕವನ್ನು ಈ ದಿನ ಡಾಟ್ ಕಾಮ್ ತಂಡ ಹೊರತಂದಿದೆ ಎಂದು ಕರ್ನಾಟಕ ಸರ್ಕಾರದ ನಿವೃತ್ತ ಜಂಟಿಕಾರ್ಯದರ್ಶಿ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಗೌರವ ಕಾರ್ಯದರ್ಶಿ ಡಾ ಗಣನಾಥ ಶೆಟ್ಟಿ ಎಕ್ಕಾರು ಹೇಳಿದರು.

ಉಡುಪಿ ನಗರದ ಅವೇ ಮರಿಯಾ ಹಾಲ್‌ನಲ್ಲಿ ಈ ದಿನ ಡಾಟ್ ಕಾಮ್‌ನಿಂದ ಹಮ್ಮಿಕೊಂಡಿದ್ದ ‘ನಮ್ಮ ಕರ್ನಾಟಕ (ನಡೆದ 50 ಹೆಜ್ಜೆ…ಮುಂದಿನ ದಿಕ್ಕು)’ ವಿಶೇಷ ಸಂಚಿಕೆಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

“ಕರ್ನಾಟಕದ ಇತಿಹಾಸಕ್ಕೆ ಸಂಬಂಧಿಸಿದ ಕೆಲವೊಂದು ಲೇಖನಗಳು ಪ್ರಕಟವಾಗಿರಬಹುದು. ಆದರೆ ಸಮಗ್ರ ಕರ್ನಾಟಕದ ಆಗುಹೋಗುಗಳ ಬಗ್ಗೆ ಈ ಪುಸ್ತಕದಲ್ಲಿ ಸಂಪೂರ್ಣ ಮಾಹಿತಿ ಲಭ್ಯವಿದೆ. ಕರ್ನಾಟಕ ಕಳೆದ ಐವತ್ತು ವರ್ಷಗಳ ಆರ್ಥಿಕ ಕ್ಷೇತ್ರ, ರಾಜಕೀಯ, ಸಾಮಾಜಿಕ, ಚಳವಳಿಗಳು ಸೇರಿದಂತೆ ಎಲ್ಲ ರಂಗದ ಲೇಖನಗಳು ಇದರಲ್ಲಿವೆ” ಎಂದು ಹೇಳಿದರು.

Advertisements

“ಈ ದಿನ ನ್ಯೂಸ್ ಓದುಗರಲ್ಲಿ ನಾನೂ ಒಬ್ಬ. ಅದರಲ್ಲಿ ಬರುವ ವಿಮರ್ಶಾತ್ಮಕ ಲೇಖನಗಳು, ವರದಿಗಳು, ವೀಡಿಯೋಗಳು ಬಹಳಷ್ಟು ಅರ್ಥಗರ್ಭಿತವಾಗಿ ಬರುತ್ತಿವೆ. ಎರಡು ವರ್ಷ ಪೂರೈಸಿದ ಈ ದಿನ.ಕಾಮ್ ಇನ್ನೂ ಎತ್ತರಕ್ಕೆ ಬೆಳೆಯಲಿ” ಎಂದು ಶುಭ ಹಾರೈಸಿದರು.

ಕಾರ್ಯನಿರತ ಪತ್ರಕರ್ತರ ಸಂಘದ ಉಡುಪಿ ಜಿಲ್ಲಾಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು ಈ ದಿನ.ಕಾಮ್ ಹೊರತಂದ ನ್ಯೂಸ್ ಆ್ಯಪ್‌ ಮತ್ತು ಸಹಾಯ ವಾಣಿಯನ್ನು ಬಿಡುಗಡೆಗೊಳಿಸಿ ಮಾತನಾಡಿ, “ಪತ್ರಕರ್ತರು ಸಮಾಜನ್ನು ತಿದ್ದುವ ಕೆಲಸ ಮಾಡುತ್ತಿದ್ದಾರೆ. ಸಮಾಜದ ಶೋಷಿತರ, ಮರ್ದಿತರ ಪರ ಧ್ವನಿ ಎತ್ತಿ ಅವರಿಗೆ ನ್ಯಾಯವನ್ನು ಒದಗಿಸುವ ಕೆಲಸಗಳನ್ನು ಪತ್ರಿಕೆಗಳು ಮಾಡುತ್ತಿವೆ. ಕೆಲವೊಂದು ಪತ್ರಕರ್ತರಿಗೆ ಅವರದೇ ಆದ ಚೌಕಟ್ಟಿರುತ್ತದೆ. ಅದನ್ನು ಮೀರಲು ಸಾಧ್ಯವಾಗುವುದಿಲ್ಲ. ಸ್ವತಂತ್ರ ಪತ್ರಿಕೋದ್ಯಮ ಈ ದಿನ.ಕಾಮ್‌ ಈ ನಿಟ್ಟಿನಲ್ಲಿ ಉತ್ತಮ ಕಾರ್ಯ ನಿರ್ವಹಿಸಲಿ” ಎಂದು ಶುಭಹಾರೈಸಿದರು.

ಸಹಬಾಳ್ವೆ ಉಡುಪಿ ಸಂಚಾಲಕ ಪ್ರೊ ಪಣಿರಾಜ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, “ಈ ದಿನ ಮಾಧ್ಯಮ ಇದೊಂದು ಆಂದೋಲನವಾಗಿ ಕಳೆದ ಎರಡು ವರ್ಷಗಳಿಂದ ಸ್ವತಂತ್ರವಾಗಿ ನೈಜ ಪತ್ರಿಕಾ ಧರ್ಮವನ್ನು ಪಾಲಿಸುತ್ತ ಬಂದಿದೆ. ಇನ್ನೂ ಸಾವಿರಾರು ಹೆಜ್ಜೆಗಳು ಬಾಕಿಯಿವೆ. ಎಲ್ಲ ಸಮಸ್ಯೆಗಳಿಗೆ ಕೈಲಾದಷ್ಟು ಪರಿಹಾರ ನೀಡುವ ಜತೆಗೆ ಪತ್ರಿಕೋದ್ಯಮ ಮಾಡದೆ ನೈಜ ಪತ್ರಿಕಾ ಧರ್ಮವನ್ನು ಪಾಲಿಸುತ್ತಿದೆ. ಇದು ಜನಸಾಮಾನ್ಯರ ಮಾಧ್ಯಮ, ಇಲ್ಲಿ ಓದುಗರೇ ನಮ್ಮ ಬೆಂಬಲಿಗರು” ಎಂದು ಹೇಳಿದರು ‌

ಈ ಸುದ್ದಿ ಓದಿದ್ದೀರಾ? ಚಿಕ್ಕಬಳ್ಳಾಪುರ | ʼಈ ದಿನ ವಿಶೇಷ ಸಂಚಿಕೆʼ ಬಿಡುಗಡೆ

ರಾಷ್ಟ್ರಕವಿ ಕುವೆಂಪುರವರ ಜನ್ಮದಿನದ ಪ್ರಯುಕ್ತ ನಾಡಗೀತೆ ಹಾಡುವ ಮೂಲಕ ಕಾರ್ಯಕ್ರಮ ಪಾರಂಭ ಮಾಡಲಾಯಿತು. ‌
ಈ ದಿನ‌‌.ಕಾಮ್ ಉಡುಪಿ ಜಿಲ್ಲಾ ಸಂಯೋಜಕ ಶಾರೂಕ್ ತೀರ್ಥಹಳ್ಳಿ ಪ್ರಾಸ್ತಾವಿಕ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು.

ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಯೋಜಕರಾದ ಸುಂದರ್ ಮಾಸ್ಟರ್, ಜಮಾಅತೆ ಇಸ್ಲಾಮೀ ಹಿಂದ್ ಮಹಿಳಾ ವಿಭಾಗದ ಹುಮೈರಾ ಕಾರ್ಕಳ, ಈ ದಿನ‌.ಕಾಮ್ ಸೆಂಟರ್ ಕೋ-ಆರ್ಡಿನೇಟರ್ ಸಂತೋಷ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಮಾಜ ಸೇವಕ ನಾಗೇಶ್ ಉದ್ಯಾವರ್, ಪೀರು ಸಾಹೇಬ್, ರಾಬರ್ಟ್ ಮೆನೇಜಸ್ ಅವರಿಗೆ ಗೌರವ ಸಂಚಿಕೆಯನ್ನು ನೀಡಲಾಯಿತು.
ಡಾ ಜಿ ಶಂಕರ್ ಮಹಿಳಾ ಕಾಲೇಜಿನ ಪಾಂಶುಪಾಲರಾದ ಡಾ ನಿಕೇತನ, ಪ್ರೊ ಶಾರದ, ವಕೀಲರಾದ ಅಸದ್ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

Download Eedina App Android / iOS

X