ಸುಮಾರು 10 ದಿನಗಳ ಹಿಂದೆ ರಾಜಸ್ಥಾನದ ಕೋಟ್‌ಪುಟ್ಲಿಯಲ್ಲಿ ಬೋರ್‌ವೆಲ್‌ಗೆ ಬಿದ್ದಿದ್ದ ಮೂರು ವರ್ಷದ ಬಾಲಕಿಯನ್ನು ರಕ್ಷಣೆ ಮಾಡಲಾಗಿದೆ. ಮಗು ಚೇತನಾಳನ್ನು ತಕ್ಷಣವೇ ಸಮೀಪದಲ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸದ್ಯ ಬಾಲಕಿ ಸ್ಥಿತಿ ಸ್ಥಿರವಾಗಿದ್ದು, ಆಕೆಯ ಮೇಲೆ ನಿಗಾ ವಹಿಸಲಾಗುವುದು ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ. ಕೊಟ್‌ಪುಟ್ಲಿಯ ಕಿರಾತ್‌ಪುರ ಗ್ರಾಮದ ಬದಿಯಾಲಿ ಧಾನಿ ಎಂಬಲ್ಲಿ 700 ಅಡಿ ಆಳದ ಬೋರ್‌ವೆಲ್‌ನಲ್ಲಿ ಚೇತನಾ ಸಿಲುಕಿಕೊಂಡಿದ್ದಳು. ಮಣ್ಣು ಕುಸಿತದ ಕಾರಣ ರಕ್ಷಣಾ ಕಾರ್ಯಾಚರಣೆ ವಿಳಂಬವಾಗಿದೆ ಎಂದು ಅಧಿಕಾರಿಗಳು ಹೇಳಿಕೊಂಡಿದ್ದಾರೆ.
ಇದನ್ನು ಓದಿದ್ದೀರಾ? ರಾಜಸ್ಥಾನ | ಮೂರು ದಿನ ಬೋರ್‌ವೆಲ್‌ನಲ್ಲಿ ಸಿಲುಕಿದ್ದ ಮಗು; ರಕ್ಷಣಾ ಕಾರ್ಯಾಚರಣೆಯ ನಂತರ ಸಾವು
ನೀರಿಲ್ಲದ ಕೊಳವೆ ಬಾವಿಯನ್ನು ಮುಚ್ಚದೆ ಹಾಗೆಯೇ ಬಿಡಲಾಗಿತ್ತು. ಇದರ ಪಕ್ಕದಲ್ಲಿ ಗಿಡ ಗಂಟೆಗಳು, ಹುಲ್ಲುಗಳು ಬೆಳೆದುಕೊಂಡಿತ್ತು. ಡಿಸೆಂಬರ್ 23ರಂದು ಈ ಬೋರ್‌ವೆಲ್ ಸಮೀಪದಲ್ಲಿ ಆಟವಾಡುತ್ತಿದ್ದ ಮಗು ತಪ್ಪಿ ಬಿದ್ದಿದ್ದಾಳೆ ಎಂದು ಹೇಳಲಾಗಿದೆ.
ಪೈಪ್ ಮೂಲಕ ಬಾಲಕಿಗೆ ಆಮ್ಲಜನಕವನ್ನು ಪೂರೈಸಲಾಗಿತ್ತು. ಬಾಲಕಿಯನ್ನು ಮೇಲಕ್ಕೆ ಎತ್ತುವ ಆರಂಭಿಕ ಪ್ರಯತ್ನ ವಿಫಲವಾದ ಬಳಿಕ ರಕ್ಷಣಾ ತಂಡಗಳು ಸಮೀಪದಲ್ಲಿ ಸುರಂಗ ಅಗೆದು ರಕ್ಷಿಸುವ ನಿರ್ಧಾರ ಮಾಡಿದರು. ಆದರೆ ಸುರಂಗ ತಪ್ಪು ದಿಕ್ಕಿನಲ್ಲಿ ಕೊರೆಯಲಾಗಿತ್ತು.
ಕಳೆದ ಕೆಲವು ಗಂಟೆಗಳಿಂದ ಬಾಲಕಿಗೆ ಆಮ್ಲಜನಕ ಮತ್ತು ಆಹಾರವನ್ನು ನೀಡಿರಲಿಲ್ಲ. ಬಾಲಕಿ ಬದುಕುಳಿದಿರುವ ಸಾಧ್ಯತೆಗಳು ಕಡಿಮೆ ಎಂದು ಹೇಳಲಾಗಿತ್ತು. ಆದರೆ ಕೊನೆಗೂ ಬಾಲಕಿಯ ರಕ್ಷಣೆ ಮಾಡಲಾಗಿದೆ.
