2024ರ ಏಪ್ರಿಲ್-ಡಿಸೆಂಬರ್ ಅವಧಿಯಲ್ಲಿ ರಾಜ್ಯದಲ್ಲಿ ಮದ್ಯ ಮಾರಾಟದ ಆದಾಯವು ವರ್ಷದಿಂದ ವರ್ಷಕ್ಕೆ ಶೇಕಡ 4.63ರಷ್ಟು ಹೆಚ್ಚಾಗಿದೆ ಎಂದು ರಾಜ್ಯ ಅಬಕಾರಿ ಇಲಾಖೆಯ ಅಂಕಿಅಂಶಗಳು ಹೇಳುತ್ತವೆ. ಅದರಲ್ಲೂ ಕೇವಲ ನಾಲ್ಕು ದಿನಗಳಲ್ಲಿ 716.58 ಕೋಟಿ ರೂ. ಮೌಲ್ಯದ ಮದ್ಯ ಮಾರಾಟವಾಗಿದೆ ಎಂದು ವರದಿಯಾಗಿದೆ.
ಜುಲೈ ಮತ್ತು ಡಿಸೆಂಬರ್‌ನಲ್ಲಿ ಮದ್ಯ ಮಾರಾಟದ ಆದಾಯವು ಕ್ರಮವಾಗಿ ಶೇಕಡ 9.86 ಮತ್ತು ಶೇಕಡ 11.78ರಷ್ಟು ಕಡಿಮೆಯಾಗಿದೆ. ಆದರೆ ಮೇ ಮತ್ತು ಸೆಪ್ಟೆಂಬರ್‌ನಲ್ಲಿ ತಲಾ ಶೇಕಡ 27ರಷ್ಟು ಮದ್ಯ ಮಾರಾಟ ಪ್ರಮಾಣ ಏರಿಕೆಯಾಗಿದೆ. 2024ರಲ್ಲಿ ಹೊಸ ವರ್ಷದ ಮುನ್ನಾದಿನವು ವಾರದ ಮಧ್ಯದ ದಿನವಾದ ಕಾರಣದಿಂದಾಗಿ 2023ರಷ್ಟು ಮದ್ಯ ಮಾರಾಟವಾಗಿಲ್ಲ ಎಂದು ವರದಿಯಾಗಿದೆ. 2023ರಲ್ಲಿ ಹೊಸ ವರ್ಷದ ಮುನ್ನ ದಿನ ಭಾನುವಾರವಾಗಿತ್ತು.
ಇದನ್ನು ಓದಿದ್ದೀರಾ? ಹಾಸನ l ಅಕ್ರಮ ಮದ್ಯ ಮಾರಾಟ ನಿಲ್ಲಿಸುವಂತೆ ಮಹಿಳಾ ಸಂಘದಿಂದ ಮನವಿ
ಅಬಕಾರಿ ಇಲಾಖೆಯು 2024-2025ರ ಆರ್ಥಿಕ ವರ್ಷದಲ್ಲಿ ಏಪ್ರಿಲ್‌ನಿಂದ ಡಿಸೆಂಬರ್ ಅವಧಿಯಲ್ಲಿ ತನ್ನ ಅಂದಾಜು ಆದಾಯದ ಶೇಕಡ 69.13ರಷ್ಟು ಆದಾಯವನ್ನು ಸಂಗ್ರಹಿಸಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಶೇಕಡ 73.78ರಷ್ಟು ಆದಾಯ ಸಂಗ್ರಹವಾಗಿತ್ತು.
ಇಲಾಖೆಯು ಈ ವರ್ಷ 38,525 ಕೋಟಿ ರೂಪಾಯಿ ಸಂಗ್ರಹಿಸುವ ಗುರಿಯನ್ನು ಹೊಂದಿದೆ. ಕಳೆದ ವರ್ಷ ಇಲಾಖೆಯು 34,628.98 ಕೋಟಿ ರೂ.ಗಳನ್ನು ಸಂಗ್ರಹಿಸಿದೆ. ಇದರಿಂದಾಗಿ ಅಂದಾಜು ಆದಾಯವು 128.98 ಕೋಟಿ ರೂ. ಆಗಿದೆ.
ಇದನ್ನು ಓದಿದ್ದೀರಾ? ದಕ್ಷಿಣ ಕನ್ನಡ | ಹೊಸವರ್ಷದ ಸಂಭ್ರಮ-2025; ಮದ್ಯ, ಬಿಯರ್ ಮಾರಾಟದಲ್ಲಿ ಅನಿರೀಕ್ಷಿತ ಕುಸಿತ
2024ರಲ್ಲಿ ಏಪ್ರಿಲ್ ಮತ್ತು ಡಿಸೆಂಬರ್ ನಡುವೆ 3.51 ಕೋಟಿ ಕಾರ್ಟನ್ ಬಾಕ್ಸ್ ಬಿಯರ್ ಮತ್ತು 5.28 ಕೋಟಿ ಕಾರ್ಟನ್ ಬಾಕ್ಸ್ ಐಎಂಎಲ್ ಕರ್ನಾಟಕದಲ್ಲಿ ಮಾರಾಟವಾಗಿದೆ. ಇದರಿಂದ ಅಬಕಾರಿ ಇಲಾಖೆಗೆ 26,633 ಕೋಟಿ ರೂಪಾಯಿ ಆದಾಯ ಲಭಿಸಿದೆ. ಅಂದರೆ ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಅಬಕಾರಿ ಇಲಾಖೆಯು ತನ್ನ ಆದಾಯವನ್ನು ಶೇಕಡ 4.63ರಷ್ಟು (1177.54 ಕೋಟಿ ರೂ.) ಹೆಚ್ಚಿಸಿಕೊಂಡಿದೆ.
ನಾಲ್ಕು ದಿನಗಳಲ್ಲಿ ಭಾರೀ ಮದ್ಯ ಮಾರಾಟ
ಕೇವಲ ನಾಲ್ಕು ದಿನಗಳಲ್ಲಿ 716.58 ಕೋಟಿ ರೂಪಾಯಿ ಮೌಲ್ಯದ ಮದ್ಯ ಮಾರಾಟವಾಗಿದೆ ಎಂದು ಫೆಡರೇಶನ್ ಆಫ್ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ ಮಾಹಿತಿ ನೀಡಿದೆ. 28ರಿಂದ ಡಿಸೆಂಬರ್ 31ರ ಮಧ್ಯಾಹ್ನದ ನಡುವೆ ಇಷ್ಟೊಂದು ಪ್ರಮಾಣದ ಮದ್ಯ ಮಾರಾಟವಾಗಿದೆ.
ಇದಲ್ಲದೆ, ಒಟ್ಟು 6.97 ಲಕ್ಷ ಕಾರ್ಟನ್ ಬಾಕ್ಸ್ ಬಿಯರ್ ಮತ್ತು 11.05 ಲಕ್ಷ ಕಾರ್ಟನ್ ಬಾಕ್ಸ್ ಐಎಂಎಲ್, ಒಟ್ಟು 18.03 ಲಕ್ಷ ಬಾಕ್ಸ್ ಮದ್ಯ ಮಾರಾಟವಾಗಿದೆ. ಐಎಂಎಲ್ ಮಾರಾಟವು ಒಟ್ಟು 577.75 ಕೋಟಿ ರೂ.ಗಳಾಗಿದ್ದರೆ ಬಿಯರ್ ಮಾರಾಟವು 138.33 ಕೋಟಿ ರೂ. ಆಗಿದೆ.
