ರಾಯಚೂರು | ಬಿಜೆಪಿ‌ ಅವಧಿಯಲ್ಲಿ ಆತ್ಮಹತ್ಯೆ ಪ್ರಕರಣ ಸಂಬಂಧ ಹೆಸರಿದ್ದರೂ ಯಾಕೆ ರಾಜೀನಾಮೆ ನೀಡಿಲ್ಲ?: ರಜಾಕ್ ಉಸ್ತಾದ್

Date:

Advertisements

ರಾಜ್ಯದಲ್ಲಿ ಬಿಜೆಪಿ ಜನರ ಸಮಸ್ಯೆಗಳ ಬಗ್ಗೆ ಹೋರಾಟ ಮಾಡುವುದನ್ನು ಬಿಟ್ಟು ಕೇವಲ ಪ್ರಿಯಾಂಕ್ ಖರ್ಗೆಯವರ ರಾಜೀನಾಮೆ ನೀಡಬೇಕೆನ್ನುವದು ಹಾಸ್ಯಾಸ್ಪದ. ಸಂತೋಷ ಪಾಟೀಲ್ ಆತ್ಮಹತ್ಯೆ ಪ್ರಕರಣದ ಡೆತ್‌ನೋಟ್‌ನಲ್ಲಿ ಈಶ್ವರಪ್ಪ ಹೆಸರು ಉಲ್ಲೇಖವಾಗಿತ್ತು. ಯಾಕೆ ಬಿಜೆಪಿಯವರು ರಾಜೀನಾಮೆ ಬಗ್ಗೆ ಮಾತನಾಡಿಲ್ಲ ಎಂದು ಕೆಪಿಸಿಸಿ ಮಾಧ್ಯಮ ವಕ್ತಾರ ರಜಾಕ್ ಉಸ್ತಾದ್ ಹೇಳಿದರು.

ರಾಯಚೂರು ನಗರದಲ್ಲಿ ಪತ್ರಿಕಾ ಹೇಳಿಕೆ ನೀಡಿರುವ ಅವರು, “ಸಚಿನ್ ಪ್ರಕರಣದಲ್ಲಿ ಪ್ರಿಯಾಂಕ್ ಖರ್ಗೆ ಆಪ್ತರು ಎಂದಿರುವುದು ಬಿಜೆಪಿಯವರಿಗೆ ಅರ್ಥವಾಗಿಲ್ಲ. ಹಿಂದೆ ಸ್ವಂತ ಸಹೋದರನ ವಂಚನೆ ಪ್ರಕರಣ ಹೊರಬಂದಾಗ “ನನಗೆ ಸಂಬಂಧವೇ ಇಲ್ಲ” ಎಂದಿದ್ದ ಪ್ರಹ್ಲಾದ್ ಜೋಶಿಯವರ ರಾಜೀನಾಮೆಯನ್ನು ಬಿಜೆಪಿಯವರು ಕೇಳಿದ್ದರೇ?‌. ನೇರವಾಗಿ ಜೋಶಿಯವರ ಹೆಸರಿನಲ್ಲೇ ವಂಚನೆ ನಡೆದಿತ್ತಲ್ಲವೇ, ಆಗ ಯಾಕೆ ರಾಜೀನಾಮೆ ಕೇಳಿಲಿಲ್ಲ” ಎಂದು ಕಿಡಿಕಾರಿದರು.

“ಬಿಜೆಪಿ ಆಡಳಿತದ ಕೆಲವೊಂದು ವಿಷಯಗಳನ್ನು ಬಯಲಿಗೆಳೆಯುವೆ. ಬಿಜೆಪಿ ಅಧಿಕಾರದ ಸಂದರ್ಭದಲ್ಲಿ ಡ್ರಗ್ಸ್ ದಂಧೆಯ ಪ್ರಕರಣದಲ್ಲಿ ಚಿತ್ರನಟಿಯೊಂದಿಗೆ ವಿರೋಧ ಪಕ್ಷದ ನಾಯಕರ ಆಪ್ತನ ಬಂಧನವಾಗಿತ್ತಲ್ಲವೇ? ಆಗ ಅವರು ತಮ್ಮ ಆಪ್ತನ ಹಗರಣದ ಹೊಣೆ ಹೊತ್ತು ರಾಜೀನಾಮೆ ಕೊಟ್ಟಿದ್ದರೇ? ಸ್ವಂತ ತಂದೆಯೇ ಪೋಕ್ಸೊ ಪ್ರಕರಣ ಎದುರಿಸುತ್ತಿರುವಾಗ ವಿಜಯೇಂದ್ರ ರಾಜೀನಾಮೆ ಕೊಡಬೇಕಲ್ಲವೇ? ತಂದೆಯ ಮೇಲೆ ಕೋವಿಡ್ ಹಗರಣದಲ್ಲಿ ಲೂಟಿಗೈದ ಆರೋಪವಿರುವಾಗ ವಿಜಯೇಂದ್ರ ಯಾವ ಮುಖ ಹೊತ್ತುಕೊಂಡು ತಿರುಗುತ್ತಿದ್ದಾರೆ?. ಬಿಜೆಪಿ ನಿಯೋಗವು ಸತ್ಯಶೋಧನೆಗಾಗಿ ಭೇಟಿ ನೀಡುವ ಜಾಗಗಳು ಬೇರೆಯೇ ಇವೆ. ಬಿಜೆಪಿಯ ಸತ್ಯಶೋಧನಾ ನಿಯೋಗ ಮುನಿರತ್ನನವರ ಮನೆಗೆ ಹಾಗೂ ಅವರಿಂದ ಸಂತ್ರಸ್ತರಾದ ಮಹಿಳೆಯರ ಮನೆಗೆ ಹೋಗಿ ಸತ್ಯಶೋಧನೆ ಮಾಡಲಿ” ಎಂದು ಕುಟುಕಿದರು.

Advertisements

“ಕೋವಿಡ್ ಹಗರಣದ ಬಗ್ಗೆ ನ್ಯಾ.ಕುನ್ಹಾ ಅವರ ವರದಿಯ ಅಂಶಗಳ ಬಗ್ಗೆ ಬಿಜೆಪಿಯ ನಿಯೋಗ ಸತ್ಯಶೋಧನೆ ಮಾಡಲಿ. ವಿಜಯೇಂದ್ರ ವಿರುದ್ಧ ಇ.ಡಿಯಲ್ಲಿ ದಾಖಲಾಗಿರುವ ಅಕ್ರಮ ಹಣ ವರ್ಗಾವಣೆಯ ಬಗ್ಗೆ ಸತ್ಯಶೋಧನೆ ಮಾಡಲಿ. ವಿಜಯೇಂದ್ರ ಮಾರಿಷಸ್, ಮಾಲ್ಡಿವ್ಸ್‌ನಲ್ಲಿ ಅಕ್ರಮ ಹಣ ಹೂಡಿಕೆ ಮಾಡಿದ್ದಾರೆಂಬ ಯತ್ನಾಳ್ ಅವರ ಹೇಳಿಕೆಯ ಬಗ್ಗೆ ಸತ್ಯಶೋಧನೆ ಮಾಡಲಿ” ಎಂದು ತಾಕೀತು ಮಾಡಿದರು.

ಈ ಸುದ್ದಿ ಓದಿದ್ದೀರಾ? ಧಾರವಾಡ | ಪ್ರತ್ಯೇಕ ಮಹಾನಗರ ಪಾಲಿಕೆ ರಚನೆಗೆ ಸಂಪುಟ ನಿರ್ಧಾರ: ಹೋರಾಟ ಸಮಿತಿ ಸಂಭ್ರಮ

“ಸರ್ಕಾರ ಉರುಳಿಸಲು ಒಂದೂವರೆ ಸಾವಿರ ಕೋಟಿ ಹಣ ಸಂಗ್ರಹಿಸಿ ಇಡಲಾಗಿದೆಯೆಂಬ ಬಿಜೆಪಿ ಶಾಸಕರ ಹೇಳಿಕೆಯ ಬಗ್ಗೆ, ಆ ಹಣದ ಮೂಲದ ಬಗ್ಗೆ ಸತ್ಯಶೋಧನೆ ಮಾಡಲಿ. ಕಲ್ಯಾಣ ಕರ್ನಾಟಕ ಸಾಂಸ್ಕೃತಿಕ ಸಂಘದಲ್ಲಿ ನೂರಾರು ಕೋಟಿ ಹಗರಣ ನಡೆಸಿದ್ದಾರಲ್ಲ, ಅದರ ಬಗ್ಗೆ ಸತ್ಯಶೋಧನೆ ಮಾಡಲಿ. ದೇವರಾಜ್ ಅರಸ್ ಟ್ರಕ್ ಟರ್ಮಿನಲ್ ಹಗರಣ, ಭೋವಿ ಅಭಿವೃದ್ಧಿ ನಿಗಮ ಹಾಗೂ ನೀರಾವರಿ ಹಗರಣದ ಬಗ್ಗೆ ಸತ್ಯಶೋಧನೆ ಮಾಡಲಿ” ಎಂದರು.

“ಸುಳ್ಳಿನ ಶೂರರು ಸತ್ಯಶೋಧನೆ ಮಾಡುತ್ತೇವೆ ಎನ್ನುವುದು ದೊಡ್ಡ ಜೋಕ್, ಬಿಜೆಪಿಯವರಿಗೆ ಸುಳ್ಳಿನ ಶೋಧನೆ ಮಾಡುವುದು ಮಾತ್ರ ತಿಳಿದಿದೆ. ರಾಜ್ಯಾಧ್ಯಕ್ಷ ಹಾಗೂ ವಿರೋದ ಪಕ್ಷದ ನಾಯಕರ ಮಾತಿಗೆ ಸ್ವಂತ ಪಕ್ಷದಲ್ಲಿ ಕವಡೆ ಕಾಸಿನ ಕಿಮ್ಮತ್ತಿಲ್ಲ. ಹೀಗಿರುವಾಗ ಬಿಜೆಪಿಗರು ರಾಜೀನಾಮೆ ಕೊಡು ಎಂದಾಕ್ಷಣ ಪ್ರಿಯಾಂಕ್ ಖರ್ಗೆ ರಾಜೀನಾಮೆ ಕೊಟ್ಟುಬಿಡಬೇಕೆ?” ಎಂದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | SBUDA ದಿಂದ ಅಪಾರ್ಟ್ಮೆಂಟ್, ನೂತನ ಕಚೇರಿ, ಮಾಲ್ ನಿರ್ಮಾಣಕ್ಕೆ ಹೆಜ್ಜೆ : ಸುಂದರೇಶ್

ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅಪಾರ್ಟ್ಮೆಂಟ್, ನೂತನ ಕಚೇರಿ, ಮಾಲ್ ನಿರ್ಮಾಣಕ್ಕೆ ಹೆಜ್ಜೆ...

ಮಾಲೂರು | ‘ಕೆಲಸ ನೀಡದಿದ್ದರೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ’!

ಮಾಲೂರಿನ ವರ್ಗಾ ಕಂಪನಿ ಮುಚ್ಚುವುದನ್ನು ವಿರೋಧಿಸಿ ಇಂದು ಮಾಲೂರಿನಲ್ಲಿ ಕಾರ್ಮಿಕರು ಬೃಹತ್...

ಗಣೇಶ ಚತುರ್ಥಿಗೆ ಬೆಂಗಳೂರು-ಮಂಗಳೂರು ನಡುವೆ ವಿಶೇಷ ರೈಲು

ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆ ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೆ ಇಲಾಖೆಯು ಬೆಂಗಳೂರು-ಮಂಗಳೂರು...

ಬೆಳ್ತಂಗಡಿ | ಸೌಜನ್ಯ ಪ್ರಕರಣ ಮರು ತನಿಖೆಗೆ ವಿವಿಧ ಸಂಘಟನೆಗಳ ಮುಖಂಡರ ಒತ್ತಾಯ

ಬೆಂಗಳೂರಿನಿಂದ ಅಂಬೇಡ್ಕರ್ ಸೇನೆ ರಾಜ್ಯಾಧ್ಯಕ್ಷ ತ್ರಿಮೂರ್ತಿ ಅವರ ನೇತೃತ್ವದಲ್ಲಿ ವಿವಿಧ ಸಂಘಟನೆಗಳ...

Download Eedina App Android / iOS

X