ರಾತ್ರೋರಾತ್ರಿ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಹೊಲದಲ್ಲಿ ಅಯ್ಯಪ್ಪಸ್ವಾಮಿ ಮೂರ್ತಿಯನ್ನು ಯಾರೋ ಅಪರಿಚಿತರು ತಂದಿಟ್ಟಿದ್ದಾರೆ. ದಿಢೀರನೆ ಪ್ರತ್ಯಕ್ಷವಾದ ಅಯ್ಯಪ್ಪ ಮೂರ್ತಿಯ ಬಗ್ಗೆ ಸ್ಥಳೀಯರಲ್ಲಿ ಗೊಂದಲ ಶುರುವಾಗಿದೆ.
ಕೃಷಿಗೆ ಸಂಬಂಧಿಸಿದ ಭೂಮಿಯಲ್ಲಿ ಯಾರಿಗೂ ತಿಳಿಯದಂತೆ ಉದ್ದೇಶಪೂರ್ವಕವಾಗಿ ಮೂರ್ತಿ ತಂದಿಟ್ಟಿದ್ದಾರೆ. ಈ ಕುರಿತು ಸರಿಯಾಗಿ ಪರಿಶೀಲನೆ ನಡೆಯಬೇಕು. ಮೂರ್ತಿ ಯಾರು ತಂದಿಟ್ಟಿದ್ದಾರೋ ಅವರ ಉದ್ದೇಶವೇನು ಎಂಬುದನ್ನು ಬಯಲಿಗೆಳೆಯಬೇಕು. ಅದರಲ್ಲೂ ಕೃಷಿ ವಿಶ್ವವಿದ್ಯಾಲಯದ ಮಾವಿನ ತೋಟದಲ್ಲಿ ಸರಿಯಾಗಿ ಕಾವಲೂ ಇರಲಿಲ್ಲ ಅನಿಸುತ್ತದೆ ಎಂದು ಜನರು ಮಾತನಾಡುತ್ತಿದ್ದಾರೆ.

ಮೂರ್ತಿಯನ್ನು ತಂದಿಟ್ಟಿರುವುದು ವ್ಯವಸ್ಥಿತವಾಗಿದ್ದು, ಯಾರು, ಯಾವಾಗ ಇಟ್ಟಿದ್ದಾರೋ ತಿಳಿದಿಲ್ಲ. ಈಗಾಗಲೇ ಕೃಷಿ ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕರು ಪೊಲೀಸರಿಗೆ ದೂರು ನೀಡಿದ್ದಾರೆ. ಯಾರೋ ಉದ್ದೇಶಪೂರ್ವಕವಾಗಿ ಮೂರ್ತಿ ತಂದಿಟ್ಟಿದ್ದಾರೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಪ್ರಸ್ತುತ ಪೊಲೀಸರು ಕಾವಲಾಗಿದ್ದಾರೆ.