ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ನಡೆದಿರುವ ನವಜಾತ ಶಿಶು ಹಾಗೂ ಬಾಣಂತಿ ಸಾವು ವೈದ್ಯರ ಬೇಜವಾಬ್ದಾರಿತನವನ್ನು ಎತ್ತಿ ತೋರಿಸುತ್ತಿದೆ ಎಂದು ಮಾಜಿ ಸಚಿವ ಹಾಲಪ್ಪ ಆಚಾರ್ ಆರೋಪಿಸಿದರು.
ಆಡೂರು ಗ್ರಾಮದ ಮೃತ ಬಾಣಂತಿ ರೇಣುಕಾ ಪ್ರಕಾಶ್ ಹಿರೇಮನಿ ಅವರ ಮನೆಗೆ ತೆರಳಿದ ಅವರು, “ಕುಕನೂರು ತಾಲೂಕಿನ ಆಡೂರು ಗ್ರಾಮದ ಬಾಣಂತಿ ಹಾಗೂ ನವಜಾತ ಶಿಶುವಿನ ಸಾವಿಗೆ ವೈದ್ಯರ ನಿರ್ಲಕ್ಷವೇ ಕಾರಣ. ಹಾಗಾಗಿ ಜಿಲ್ಲಾಸ್ಪತ್ರೆಯ ವೈದ್ಯರ ವಿರುದ್ಧ ಕಾನೂನಾತ್ಮಕ ಕ್ರಮ ಜರುಗಿಸಬೇಕು” ಎಂದು ಒತ್ತಾಯಿಸಿದರು.

“ಇಂಥ ಘಟನೆಗಳು ಮತ್ತೊಮ್ಮೆ ಆಗಬಾರದು. ಸಂಬಂಧಪಟ್ಟ ಮೇಲಧಿಕಾರಿಗಳು ಹಾಗೂ ಸಚಿವರು ವೈದ್ಯರ ಮೇಲೆ ಕೂಡಲೇ ಕ್ರಮ ಜರುಗಿಸಬೇಕು. ಜತೆಗೆ ಆಸ್ಪತ್ರೆಯಲ್ಲಿನ ಮೂಲ ಸಮಸ್ಯೆಯನ್ನು ಬಗೆಹರಿಸಬೇಕು” ಎಂದರು.
ಈ ಸುದ್ದಿ ಓದಿದ್ದೀರಾ? ಕೊಪ್ಪಳ | ಆರೆಸ್ಸೆಸ್, ಬಿಜೆಪಿಗರು ಸಂವಿಧಾನ ವಿರೋಧಿ ಚಾಳಿಯನ್ನು ಬಿಡಲಿ: ಕರ್ನಾಟಕ ಮಾದಿಗ ವೇದಿಕೆ
“ಬಾಣಂತಿಯರ ಸಾವುಗಳಾಗುತ್ತಿರುವುದು ನೋವಿನ ಸಂಗತಿ. ಕಣ್ಣು ತೆಗೆಯಬೇಕಿದ್ದ ಹಸುಗೂಸು ಭೂಮಿಗೆ ಬರುವ ಮುನ್ನವೇ ಕಣ್ಣು ಮುಚ್ಚಿದೆ. ವೈದ್ಯರು ತಮ್ಮ ಕರ್ತವ್ಯ ಮರೆತು ನಿರ್ಲಕ್ಷ್ಯ ತೋರಿರುವುದೇ ಇದಕ್ಕೆ ಮುಖ್ಯ ಕಾರಣ. ಬಾಣಂತಿಯರ ಸಾವುಗಳು ಕೊನೆಯಾಗಬೇಕು” ಎಂದರು.
ಮಾರುತಿ ಗಾವರಾಳ, ಬಸವರಾಜ್ ಹಾಳಕೇರಿ, ಶಿವಕುಮಾರ್ ನಾಗಲಾಪುರಮಠ ಸೇರಿದಂತೆ ಬಹುತೇಕರು ಇದ್ದರು.