ದಾವಣಗೆರೆ | ‘ಭೀಮಾ ಕೋರೆಗಾಂವ್ ವಿಜಯೋತ್ಸವ’ ಸಂಭ್ರಮ

Date:

Advertisements

ದಾವಣಗೆರೆಯ ಡಾ ಬಿ ಆರ್ ಅಂಬೇಡ್ಕರ್ ವೃತ್ತದಿಂದ ಜಯದೇವ ವೃತ್ತದವರೆಗೆ ಪಂಜಿನ ಮೆರವಣಿಗೆ ನಡೆಸಿದ ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರು, ಮುಖಂಡರು ‘ಭೀಮಾ ಕೋರೆಗಾಂವ್ ವಿಜಯೋತ್ಸವ’ವನ್ನು ಸಂಭ್ರಮಿಸಿದರು.

ದಲಿತ ಸಂಘರ್ಷ ಸಮಿತಿ(ಪ್ರೊ ಕೃಷ್ಣಪ್ಪ ಸ್ಥಾಪಿತ) ನೇತೃತ್ವದಲ್ಲಿ ಭೀಮಾ ಕೋರೆಗಾಂವ್ ವಿಜಯೋತ್ಸವದ ನೆನಪಿಗಾಗಿ ಹಮ್ಮಿಕೊಂಡಿದ್ದ ಪಂಜಿನ ಮೆರವಣಿಗೆ ಕಾರ್ಯಕ್ರಮದಲ್ಲಿ ಹಲವಾರು ಪ್ರಗತಿಪರ, ದಲಿತ ಸಂಘಟನೆಗಳ ಕಾರ್ಯಕರ್ತರು, ಮುಖಂಡರು ಭಾಗವಹಿಸಿ ಡಾ.ಅಂಬೇಡ್ಕರ್ ರವರ ಪುತ್ತಳಿಗೆ ಮಾಲಾರ್ಪಣೆ ಮಾಡಿ ಪಂಜಿನ ಮೆರವಣಿಗೆ ನಡೆಸಿ, ಸಾರ್ವಜನಿಕರಿಗೆ ಸಿಹಿ ಹಂಚಿ ಸಂಭ್ರಮಾಚರಿಸಿದರು.

ಈ ವೇಳೆ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಮಂಜುನಾಥ ಕುಂದುವಾಡ ಮಾತನಾಡಿ “ಭೀಮಾ ಕೋರೆಗಾಂವ್ ದಲಿತರ ಐತಿಹಾಸಿಕ ಗೆಲುವು. ಬಾಬಾ ಸಾಹೇಬ್ ಅಂಬೇಡ್ಕರ್ ಲಂಡನ್ನಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಗ ಇದರ ಬಗ್ಗೆ ತಿಳಿದು ಸಂಶೋಧನೆ ನಡೆಸಿ 1927ರಲ್ಲಿ ಭೇಟಿ ನೀಡಿ ಇತಿಹಾಸದ ಬಗ್ಗೆ ಬೆಳಕು ಚೆಲ್ಲಿದ್ದಾರೆ. 28,000ದಷ್ಟು ಪೇಶ್ವೆಗಳ ಸೈನಿಕರನ್ನು 500 ಜನ ಸೈನಿಕರ ಮಹರ್ ರೆಜಿಮೆಂಟ್ ಸೋಲಿಸಿದ ಮಹತ್ವದ ದಿನವಾಗಿದೆ” ಎಂದು ಹೇಳಿದರು.

Advertisements

“ಜಾತಿ ತಾರತಮ್ಯ, ಕನಿಷ್ಠ ಸೌಲಭ್ಯ ನೀಡದೇ ಅತ್ಯಂತ ನಿಕೃಷ್ಟವಾಗಿ ಕಾಣುವ ಮರಾಠ ಪೇಶ್ವೆಗಳನ್ನು ಸೋಲಿಸಲು ಸಾಧ್ಯವಿಲ್ಲದ ಪರಿಸ್ಥಿತಿಯಲ್ಲಿ ಬ್ರಿಟಿಷರು ಮಹರ್ ಸೈನಿಕರ ಸಹಾಯ ಪಡೆದು ಪೇಶ್ವೆಗಳನ್ನು ಸೋಲಿಸಿದರು, ‘ಅದಕ್ಕೂ ಮೊದಲು ಸಹಾಯ ಮಾಡುತ್ತೇವೆ’ ಎಂದು ಬಂದ ಸಿದ್ದನಾಕನ ನೇತೃತ್ವದ ಮಹರ್ ಸೈನಿಕರನ್ನು ಪೇಶ್ವೆಗಳು ಅವಮಾನ ಮಾಡಿ ಹೊರತಳ್ಳಿದ್ದರು. ಇದು ದಲಿತರನ್ನು ಅವಮಾನಿಸಿದ್ದ ಪೇಶ್ವೆಗಳ ವಿರುದ್ಧ ದಲಿತರು ಆತ್ಮಗೌರವ, ಹಕ್ಕುಗಳಿಗಾಗಿ ಹೋರಾಡಿದ ಐತಿಹಾಸಿಕ ದಿನ” ಎಂದು ಸ್ಮರಿಸಿದರು.

ವಕೀಲ ಅನಿಸ್ ಪಾಷಾ ಮಾತನಾಡಿ, “ಇದು ದಲಿತರ ವಿಜಯೋತ್ಸವದ ಬಗ್ಗೆ ಬೆಳಕು ಚೆಲ್ಲಿದ ದಿನವಾಗಿದ್ದು, ಈ ವಿಜಯೋತ್ಸವವನ್ನು ಹಿಂದಿನಿಂದಲೂ ಆಚರಿಸುತ್ತ ಬಂದಿದ್ದಾರೆ. ಆದರೆ 2018ರಲ್ಲಿ ಸರ್ಕಾರ ಮತ್ತು ಕೋಮುಶಕ್ತಿಗಳು ಸುಳ್ಳು ಆರೋಪಗಳನ್ನು ಮಾಡಿ ಈ ಆಚರಣೆ ತಡೆಗಟ್ಟಲು, ಹತ್ತಿಕ್ಕಲು ಅನೇಕರನ್ನು ಬಂಧಿಸಿ ಜೈಲಿಗೆ ಹಾಕಿದೆ. ಆದರೆ ಈ ವಿಜಯೋತ್ಸವ ಅಂಬೇಡ್ಕರ್ ಸ್ವತಃ ಶೋಧಿಸಿ ತಿಳಿಸಿದ ಇತಿಹಾಸವಾಗಿದ್ದು, ದಲಿತರ ಆತ್ಮಾಭಿಮಾನದ ಪ್ರತೀಕವಾಗಿದೆ” ಎಂದರು.

ನೆರಳು ಬೀಡಿ ಕಾರ್ಮಿಕ ಸಂಘಟನೆಯ ಜಬೀನ ಖಾನಂ ಮಾತನಾಡಿ, “ದಲಿತ ಸಂಘಟನೆಗಳು ಮತ್ತು ಪ್ರಗತಿಪರ ಘಟನೆಗಳು ಸೇರಿ ಭೀಮಾ ಕೋರೆಗಾವ್ ವಿಜಯೋತ್ಸವ ಆಚರಿಸುತ್ತಿದ್ದೇವೆ. ಇದು ದಲಿತರ ಪಾಲಿಗೆ ಮಹತ್ವದ್ದು, ಏಕೆಂದರೆ ಇದು ದಲಿತರ ಸ್ವಾಭಿಮಾನದ ಸಂಕೇತವಾಗಿದೆ” ಎಂದು ತಿಳಿಸಿದರು.

ದಲಿತ ಸಂಘರ್ಷ ಸಮಿತಿಯ ಮುಖಂಡ ಹೆಗ್ಗೆರೆ ರಂಗಪ್ಪ ಮಾತನಾಡಿ, “ಭೀಮಾ ಕೋರೆಗಾಂವ್ ವಿಜಯೋತ್ಸವ ಸ್ವಾಭಿಮಾನ, ಸ್ವಾತಂತ್ರ್ಯದ ಗೆಲುವಾಗಿದೆ. ಅಸ್ಪೃಶ್ಯತೆಯ ಆಚರಣೆ, ಅಸಮಾನತೆ ಮತ್ತು ದಲಿತರನ್ನು ಅತ್ಯಂತ ಹೀನ ಸ್ಥಿತಿಯಲ್ಲಿ ನಡೆಸಿಕೊಂಡು ಆಡಳಿತ ನಡೆಸುತ್ತಿದ್ದ ಪೇಶ್ವೆಗಳ ಬಾಜಿರಾಯನಿಗೆ ಕನಿಷ್ಠ ಸೌಲಭ್ಯ ಕೇಳಿದರೂ ನೀಡದೇ ಹೊರ ತಳ್ಳಿದ್ದರು. ಪೇಶ್ವೆಗಳ ಪರವಾಗಿ ಯುದ್ಧ ಮಾಡುತ್ತೇನೆಂದರೂ ಅಪಹಾಸ್ಯ ಮಾಡಿ ಹೊರತಳ್ಳಿದ ಪೇಶ್ವೆಗಳ ವಿರುದ್ಧ ಬ್ರಿಟಿಷ್ ಮಹರ್ ರೆಜಿಮೆಂಟಿನ ಕೇವಲ 500 ಮಂದಿ ಸೈನಿಕರು 28,000 ಮಂದಿ ಸೈನಿಕರನ್ನು ಸೋಲಿಸಿ ವಿಜಯ ದಾಖಲಿಸಿದ ದಿನವಾಗಿದೆ. ಅಂದು ಬ್ರಿಟಿಷರು ಯುದ್ಧದಲ್ಲಿ ಇವರು ಮಾಡಿದ ಸಹಾಯಕ್ಕಾಗಿ ಇವರು ಕೇಳಿದ ಸಾರ್ವತ್ರಿಕ ಶಿಕ್ಷಣವನ್ನು ಜಾರಿಗೊಳಿಸುತ್ತಾರೆ.‌ ಹಾಗಾಗಿ ಇದು ದಲಿತರ ಮೊದಲ ಗೆಲುವು, ಸ್ವಾಭಿಮಾನದ ಗೆಲುವಾಗಿದೆ” ಎಂದು ಅಭಿಪ್ರಾಯಪಟ್ಟರು.

ಈ ಸುದ್ದಿ ಓದಿದ್ದೀರಾ? ‌ಬೆಳಗಾವಿ | ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಹೈಕಮಾಂಡ್ ಹಂತದಲ್ಲಿ ಚರ್ಚೆಯಾಗಬೇಕು: ಸತೀಶ್ ಜಾರಕಿಹೊಳಿ

ಈ ಸಂಭ್ರಮಾಚರಣೆಯಲ್ಲಿ ದಲಿತ ಸಂಘರ್ಷ ಸಮಿತಿ ಮತ್ತು ದಲಿತ ಸಂಘಟನೆಗಳ ಮುಖಂಡರಾದ ಸಿದ್ದರಾಮಣ್ಣ, ರವಿ ನಾರಾಯಣ್, ರುದ್ರಮುನಿ, ವಿಜಯಮ್ಮ, ಪ್ರದೀಪ್, ಬೇತೂರು ಹನುಮಂತಪ್ಪ, ನಾಗರಾಜ್, ಮಹಾಂತೇಶ್, ಬಿ ಹನುಮಂತಪ್ಪ, ಚಿತ್ರಲಿಂಗಪ್ಪ, ತುರ್ಚಘಟ್ಟ ನಾಗರಾಜ್, ತುರ್ಚಘಟ್ಟ ಖಾಲಿದ್ ಅಲಿ, ಮಹಾಂತೇಶ್ ಹಾಲವರ್ತಿ, ಹಾಲೇಶ್ ಕುಂದುವಾಡ, ತ್ಯಾಗರಾಜ್ ಹುಚ್ಚವ್ವನಹಳ್ಳಿ, ಜೀವನ್ ಆಣಬೇರು, ಹನುಮಂತ ಕಡ್ಲೆಬಾಳು, ನಾಗರಾಜ್ ಆನೆಕೊಂಡ, ಮಂಜು ಮಾಗಾನಳ್ಳಿ ಹಾಗೂ ಕಾರ್ಯಕರ್ತರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

Download Eedina App Android / iOS

X