ಗದಗ | ಆತ್ಮಗೌರವ, ಸ್ವಾಭಿಮಾನಕ್ಕಾಗಿ ನಡೆದ ಏಕೈಕ ಯುದ್ದ ಭೀಮಾ ಕೋರೆಗಾಂವ್: ಕವಿ ವೀರಪ್ಪ ತಾಳದವರ

Date:

Advertisements

ಸಾಮ್ರಾಜ್ಯ ವಿಸ್ತರಣೆಗಾಗಿ ಜಗತ್ತಿನಲ್ಲಿ ಅನೇಕ ಕದನಗಳು ನಡೆದು ಹೋಗಿವೆ. ಆದರೆ ಅಸಮಾನ ವ್ಯವಸ್ಥೆಯ ವಿರುದ್ಧ ಸಿಡಿದು, ಆತ್ಮಗೌರವ, ಸ್ವಾಭಿಮಾನಕ್ಕಾಗಿ ನಡೆದ ಏಕೈಕ ಯುದ್ಧವೇ ಭೀಮಾ ಕೋರೆಗಾಂವ್ ವಿಜಯೋತ್ಸವ ಎಂದು ಕವಿ ವೀರಪ್ಪ ತಾಳದವರ ಹೇಳಿದರು.

ಗದಗ ಜಿಲ್ಲೆಯ ರೋಣ ತಾಲೂಕಿನ ಯಾವಗಲ್ಲ ಗ್ರಾಮದಲ್ಲಿ ಅಂಬೇಡ್ಕರ್ ಯುವ ತರುಣ ಸಂಘದಿಂದ ಹಮ್ಮಿಕೊಂಡಿದ್ದ ಕೋರೆಗಾಂವ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

“ಕೋರೆಗಾಂವ್ ಯುದ್ಧವು ವೀರರ ಸಾಹಸ, ಧೈರ್ಯ, ಶಿಸ್ತು ಸಕಲ ಭಾರತೀಯರಿಗೆ ದೊಡ್ಡ ಮಾದರಿ. ಆದ್ದರಿಂದ ಬದುಕಿನ ಸವಾಲುಗಳನ್ನು ಎದುರಿಸಲು ನಾವೂ ಕೂಡಾ ಶಿಸ್ತಿನ ಸಿಪಾಯಿಗಳಾಗುತ್ತಲೇ ಮಹರ್ ಕಲಿಗಳ ಸ್ಮರಣೆಯನ್ನು ಪ್ರತಿ ವರ್ಷ ನಾವು ಮಾಡಬೇಕು” ಎಂದು ಕವಿ ವೀರಪ್ಪ ತಾಳದವರ ಅನಿಸಿಕೆ ವ್ಯಕ್ತಪಡಿಸಿದರು.

Advertisements

ಸಂಜೆ ಮೇಣದ ಬೆಳಕಿನೊಂದಿಗೆ ಊರಿನ ಮುಖ್ಯ ಬೀದಿಗಳಲ್ಲಿ ಪಂಜಿನ ಮೆರವಣಿಗೆ ನಡೆಸಿದ ಗ್ರಾಮದ ಯುವಕರು, 1818ರ ಜನವರಿ 01ರ ರೋಚಕ ದಂಗೆಯನ್ನು ಮೆಲುಕು ಹಾಕುತ್ತಲೇ ಅಂಬೇಡ್ಕರರು ಕಟ್ಟಿಕೊಟ್ಟ ಇತಿಹಾಸವನ್ನು  ಉಳಿಸಲು ನಾವೆಲ್ಲರೂ ಸನ್ನದ್ದರಾಗೋಣ ಎಂದು ಪರಸ್ಪರ ಶಪಥ ಮಾಡಿಕೊಂಡರು.

ಈ ಸುದ್ದಿ ಓದಿದ್ದೀರಾ? ರಾಯಚೂರು | ಬಾಣಂತಿಯರ ಸಾವು ಪ್ರಕರಣ; ಸಚಿವ ದಿನೇಶ್ ಗುಂಡೂರಾವ್ ವಜಾಕ್ಕೆ ಬಿಜೆಪಿ ಪ್ರತಿಭಟನೆ

ಭರಮಪ್ಪ ಕೊಳ್ಳಪ್ಪನವರ, ನಿಂಗರಾಜ ಕಡಿ ಕಾರ್ಯಕ್ರಮದ ಗೌರವ ಉಪಸ್ಥಿತಿ ವಹಿಸಿದ್ದರು. ಯುವ ಮುಖಂಡರಾದ ರವಿ ಕಾಳಿ, ಅಶೋಕ ತಾಳದವರ, ನಿಂಗರಾಜ ಚಲವಾದಿ, ವಸಂತ ಹೆಬಸೂರು, ರಾಜು ಕೊಳ್ಳಪ್ಪನವರ, ವಿಶ್ವ ಕೊಳ್ಳಪ್ಪನವರ, ಹನುಮಂತ ಜೆ ಬಿ ದೇವಪ್ಪ ಕೊಳ್ಳಪ್ಪನವರ, ಮಂಜು ಹೆಬಸೂರು, ಮುತ್ತು ಕುರ್ತಕೋಟಿ, ಪುಂಡಲೀಕ ಕೆ, ಶರಣಪ್ಪ ಕೊಳ್ಳಪ್ಪನವರ, ಪ್ರಶಾಂತ ತಾಳದವರ ಸೇರಿದಂತೆ ಅನೇಕ ಸಂಘಟಕರಿದ್ದರು. ವಿದ್ಯಾರ್ಥಿಗಳು ಗೌರವ ವಂದನೆ ಸಲ್ಲಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X