ಇತ್ತೀಚಿನ ಆಹಾರ ಪದ್ಧತಿಯಿಂದ ಮನುಷ್ಯನ ಆರೋಗ್ಯ ಸ್ಥಿತಿ ಹಂತ ಹಂತವಾಗಿ ಹದಗೆಡುತ್ತಿದ್ದು, ಖಾಯಿಲೆಗಳು ಹೆಚ್ಚುತ್ತಿವೆ ಎಂದು ಡಾ ಸುಂದರ ಗೌಡ ಬೇಸರ ವ್ಯಕ್ತಪಡಿಸಿದರು.
ಚಿಕ್ಕಮಗಳೂರು ತಾಲೂಕಿನ ಹಿರೇಗೌಜ ಗ್ರಾಮಪಂಚಾಯಿತಿ ಸಭಾಂಗಣದಲ್ಲಿ ನೇಚರ್ ಕನ್ಸರ್‌ವೇಷನ್ ಟ್ರಸ್ಟ್, ವಿಜಯ ಡೆಂಟಲ್ ಇಂಟರ್‌ನ್ಯಾಷನಲ್, ಪ್ರಸಾದ್ ನೇತ್ರಾಲಯ ಸಹಯೋಗದಲ್ಲಿ ಆಯೋಜಿಸಿದ್ದ ಉಚಿತ ಕಣ್ಣಿನ ತಪಾಸಣಾ ಶಿಬಿರದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
“ಯುವಸಮೂಹ ಅಲ್ಪಾಯುಷ್ಯಕ್ಕೆ ಒಳಗಾಗುತ್ತಿದ್ದು, ಹೃದಯಘಾತ ಸೇರಿದಂತೆ ಬಹುತೇಕ ಅಕಾಲಿಕ ಸಾವು ಸಂಭವಿಸುತ್ತಿರುವುದನ್ನು ಕಾಣಬಹುದು. ಹೀಗಾಗಿ ಅನಾರೋಗ್ಯವಾದರೆ ಕೂಡಲೇ ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದು ಡಾ.ಸುಂದರ ಗೌಡ ತಿಳಿಸಿದರು.
ಇದನ್ನೂ ಓದಿದ್ದೀರಾ? ಚಿಕ್ಕಮಗಳೂರು | ಆ್ಯಂಬುಲೆನ್ಸ್‌ನಲ್ಲಿ ತಾಮ್ರ ಸಾಗಾಟ; ಮೂವರ ಬಂಧನ
“ಮಾನವನ ಶರೀರದಲ್ಲಿ ಕಣ್ಣು ಅತ್ಯಂತ ಅಮೂಲ್ಯವಾದ ಅಂಗ. ಸುರಕ್ಷತೆ, ಕಾಳಜಿಯಿಂದ ಕಾಪಾಡುವಲ್ಲಿ ನಿರ್ಲಕ್ಷ್ಯ ವಹಿಸಿದರೆ ಅಂಧತ್ವ ಸಂಭವಿಸಬಹುದು. ಹಾಗೆಯೇ, ಪೊರೆ ಅಥವಾ ದೃಷ್ಟಿ ದೋಷದ ಸಣ್ಣಪುಟ್ಟ ತೊಂದರೆಗೆ ಸಿಲುಕಿದರೆ ಶೀಘ್ರವೇ ಚಿಕಿತ್ಸೆ ಪಡೆದುಕೊಳ್ಳಬೇಕು” ಎಂದು ಸಲಹೆ ನೀಡಿದರು.