ಪ್ಯಾಲೆಸ್ತೀನ್ ಪ್ರದೇಶದಲ್ಲಿ ಅಲ್‌ ಜಝೀರಾ ಸುದ್ದಿವಾಹಿನಿ ಪ್ರಸಾರಕ್ಕೆ ತಡೆ

Date:

Advertisements

ಪ್ಯಾಲೆಸ್ತೀನ್ ಪ್ರದೇಶಗಳಲ್ಲಿ ಖತರ್ ಮೂಲದ ಅಲ್ ಜಝೀರಾ ಸುದ್ದಿವಾಹಿನಿಯ ಪ್ರಸಾರವನ್ನು ಅಮಾನತುಗೊಳಿಸಿ ಪ್ಯಾಲೆಸ್ತೀನ್ ಪ್ರಾಧಿಕಾರ ಗುರುವಾರ ಆದೇಶ ಹೊರಡಿಸಿದೆ.

ಅಲ್‌ ಜಝೀರಾ ಪ್ರಸಾರ ಮಾಡುವ ವಿಷಯಗಳು ಪ್ರಚೋದನಕಾರಿಯಾಗಿವೆೆ ಎಂದು ಹೇಳಿದೆ. ತಪ್ಪು ಮಾಹಿತಿ, ಪ್ರಚೋದಿಸುವಿಕೆ ಹಾಗೂ ದೇಶದ್ರೋಹವನ್ನು ಎಸಗಿದ್ದಕ್ಕಾಗಿ ಮತ್ತು ಪ್ಯಾಲೆಸ್ತೀನ್‌ನ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪಗಳನ್ನು ನಡೆಸಿದ್ದಕ್ಕಾಗಿ ಅಲ್‌ ಜಝೀರಾ ಸುದ್ದಿವಾಹಿನಿಯ ಪ್ರಸಾರವನ್ನು ಅಮಾನತಿನಲ್ಲಿರಿಸಲಾಗಿದೆಯೆಂದು ಪ್ಯಾಲೆಸ್ತೀನ್ ನ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪಗಳನ್ನು ನಡೆಸಿದ್ದಕ್ಕಾಗಿ ಅಲ್‌ ಜಝೀರಾ ಸುದ್ದಿವಾಹಿನಿಯ ಪ್ರಸಾರವನ್ನು ಅಮಾನತಿನಲ್ಲಿರಿಸಲಾಗಿದೆಯೆಂದು ಪ್ಯಾಲೆಸ್ತೀನ್ ನ ಅಧಿಕೃತ ಸುದ್ದಿಸಂಸ್ಥೆ ವಾಫಾ ಬುಧವಾರ ಸಂಜೆ ವರದಿ ಮಾಡಿದೆ.

ರಮಲ್ಲಾದಲ್ಲಿರುವ ಅಲ್‌ ಜಝೀರಾ ಉದ್ಯೋಗಿಯೊಬ್ಬರು ಕೂಡಾ ಪ್ಯಾಲೆಸ್ತೀನ್ ಪ್ರಾಧಿಕಾರವು ಸುದ್ದಿವಾಹಿನಿಯ ಪ್ರಸಾರವನ್ನು ಅಮಾನತುಗೊಳಿಸಿರುವುದನ್ನು ದೃಢಪಡಿಸಿದ್ದಾರೆ ಎಂದು ವಾಫಾ ವರದಿ ತಿಳಿಸಿದೆ. ಪ್ಯಾಲೆಸ್ತೀನ್ ಆಡಳಿತದ ನಿರ್ಧಾರವು ಎಲ್ಲ ಪತ್ರಕರ್ತರು, ಉದ್ಯೋಗಿಗಳು, ಸಿಬ್ಬಂದಿ ಹಾಗೂ ಅದರ ಸಹ ವಾಹಿನಿಗಳ ಕಾನೂನಾತ್ಮಕ ಸ್ಥಾನಮಾನವನ್ನು ಮುಂದಿನ ಆದೇಶದವರೆಗೆ ಅಮಾನತಿನಲ್ಲಿರಿಸಲಾಗಿದೆಯೆಂದು ವಾಫಾದ ಹೇಳಿಕೆ ತಿಳಿಸಿದೆ.

Advertisements

ಪ್ಯಾಲೆಸ್ತೀನ್ ಪ್ರಾಧಿಕಾರದ ನಿರ್ಧಾರವನ್ನು ಅಲ್‌ಜಝೀರಾ ಖಂಡಿಸಿದೆ. ಮಾಧ್ಯಮಗಳನ್ನು ಗುರಿಯಿರಿಸಲು ಇಸ್ರೇಲಿ ಅತಿಕ್ರಮಣಕಾರರ ಜೊತೆ ಪ್ಯಾಲೆಸ್ತೀನ್ ಆಡಳಿತವು ಕೈಜೋಡಿಸಿದೆಯೆಂದು ಅದು ಆಪಾದಿಸಿದೆ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಗ್ಯಾರಂಟಿ ಗೆಲುವನ್ನು ಮಾರ್ಕೆಟಿಂಗ್ ಮಾಡಿಕೊಳ್ಳಬೇಕೇ ಸರ್ಕಾರ?

ಪಶ್ಚಿಮದಂಡೆಯಲ್ಲಿ ಆಡಳಿತಾತ್ಮಕ ನಿಯಂತ್ರಣವನ್ನು ಹೊಂದಿರುವ ಪ್ಯಾಲೆಸ್ತೀನ್ ಪ್ರಾಧಿಕಾರವು, ಇಸ್ರೇಲ್‌ನ ಅತಿಕ್ರಮಣಕ್ಕೊಳಗಾದ ಪ್ಯಾಲೆಸ್ತೀನ್ ಪ್ರದೇಶಗಳಲ್ಲಿನ ಉದ್ವಿಗ್ನ ಘಟನಾವಳಿಗಳನ್ನು ವರದಿ ಮಾಡದಂತೆ ತನ್ನನ್ನು ಹಿಮ್ಮೆಟ್ಟಿಸಲು ಯತ್ನಿಸುತ್ತಿರುವುದಾಗಿ ಅಲ್‌ ಜಝೀರಾ ಆಪಾದಿಸಿದೆ.

ಗಾಝಾ ಸಂಘರ್ಷದ ಕುರಿತ ವರದಿಗಳಿಗಾಗಿ ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸರಕಾರದ ಕೆಂಗಣ್ಣಿಗೆ ಗುರಿಯಾಗಿದ್ದ ಅಲ್‌ ಜಝೀರಾ ವಾಹಿನಿಯ ಪ್ರಸಾರವನ್ನು ಈಗಾಗಲೇ ಇಸ್ರೇಲ್‌ನಲ್ಲಿ ನಿಷೇಧಿಸಲಾಗಿದೆ.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗಾಝಾದಲ್ಲಿ ನರಮೇಧ: ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ಮತ್ತು ಇಸ್ರೇಲ್ ರಾಯಭಾರಿ ನಡುವೆ ವಾಕ್ಸಮರ

ಗಾಝಾದಲ್ಲಿ 'ಅಲ್‌ಝಝೀರಾ' ಸಂಸ್ಥೆಯ ಪತ್ರಕರ್ತನನ್ನು ಇಸ್ರೇಲ್ ಹತ್ಯೆಗೈದಿದೆ. ಈ ಹತ್ಯೆಯನ್ನು ಕಾಂಗ್ರೆಸ್‌...

ಮೋದಿ-ಝೆಲೆನ್ಸ್ಕಿ ಫೋನ್ ಮಾತುಕತೆ: ರಷ್ಯಾ ತೈಲ ಖರೀದಿ ಕುರಿತು ಭಾರತದ ಮೇಲೆ ಉಕ್ರೇನ್‌ ಒತ್ತಡ

ರಷ್ಯಾ ಜೊತೆ ಸಂಘರ್ಷದಲ್ಲಿರುವ ಉಕ್ರೇನ್‌ನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಪ್ರಧಾನಿ...

ಗಾಝಾದಲ್ಲಿ ಹತ್ಯೆಯಾದ ಯುವ ಪತ್ರಕರ್ತರೊಬ್ಬರ ಭಿನ್ನ ಉಯಿಲು !

ನಾನು ಸಾಯುವುದಾದರೆ, ನನ್ನ ಸಿದ್ಧಾಂತಗಳ ಮೇಲೆ ದೃಢವಾಗಿರುವೆ. ದೇವರ ಮುಂದೆ ನಾನು...

ಗಾಝಾದಲ್ಲಿ ಇಸ್ರೇಲ್ ದಾಳಿ: ಐವರು ಅಲ್‌ಜಝೀರಾ ಪತ್ರಕರ್ತರು ಹತ

ಭಾನುವಾರ ಗಾಝಾ ನಗರದಲ್ಲಿ ಅಲ್‌ಜಝೀರಾ ಟೆಂಟ್ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ...

Download Eedina App Android / iOS

X