ಮಂಡ್ಯ ರೋಟರಿ ಅನನ್ಯ ಹಾರ್ಟ್ಸ್, ಶ್ರೀರಂಗಪಟ್ಟಣ ರಂಗನಾಯಕಿ ಇವರ ಸಂಯುಕ್ತಾಶ್ರಯದಲ್ಲಿ ಮಹಿಳೆಯರಿಗೆ ಉಚಿತ ಬ್ಯೂಟಿ ಪಾರ್ಲರ್ ಹಾಗೂ ಟೈಲರಿಂಗ್ ತರಬೇತಿಯ ಸಮಾರೋಪ ಸಮಾರಂಭ ಏರ್ಪಡಿಸಲಾಗಿತ್ತು.
ಶಿಬಿರದ ಅಭ್ಯರ್ಥಿಗಳಿಗೆ ಉಚಿತವಾಗಿ ರೆಕಾರ್ಡ್ ಬುಕ್‌ಗಳನ್ನು ಕೊಡುಗೆ ನೀಡಿ ಮಾತನಾಡಿದ ಸಮಿತಿಯ ಅಧ್ಯಕ್ಷ ಕೆ ವೈ ಶ್ರೀನಿವಾಸ್ ಅವರು, ” ವೆಂಕಟೇಗೌಡ ಸೇವಾ ಸಮಿತಿ ಸಂಸ್ಥೆಯಲ್ಲಿ ತರಬೇತಿ ಪಡೆದಿದ್ದನ್ನು ರೆಕಾರ್ಡ್ ಬುಕ್‌ಗಳಲ್ಲಿ ನಮೂದಿಸುವುದರಿಂದ ಮುಂದಿನ ದಿನಗಳಲ್ಲಿ ಈ ತರಬೇತಿ ಪಡೆಯುವವರಿಗೆ ಅನುಕೂಲವಾಗುತ್ತದೆ. ಜತೆಗೆ ಸ್ವಂತ ಉದ್ಯೋಗಕ್ಕೂ ಉಪಯುಕ್ತವಾಗುತ್ತದೆ” ಎಂದು ಹೇಳಿದರು.

ಈ ಸುದ್ದಿ ಓದಿದ್ದೀರಾ? ಯಾದಗಿರಿ| ರೈತ ಸಂಘಟನೆಯ ಪದಾಧಿಕಾರಿಗಳ ನೇಮಕ
ಆಶಾಲತಾ ಪುಟ್ಟೇಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಂಡ್ಯದ ಅನನ್ಯ ಹಾರ್ಟ್ ಸಂಸ್ಥೆ ಅಧ್ಯಕ್ಷೆ ಅನುಪಮಾ ಬಿ ಎಸ್, ಶ್ರೀರಂಗಪಟ್ಟಣ ನಗರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಸರಸ್ವತಮ್ಮ, ಸಮರ್ಪಣಾ ಟ್ರಸ್ಟ್ ಅಧ್ಯಕ್ಷ ಕೆ ಎಸ್ ಜಯಶಂಕರ್, ಮಾಜಿ ಪುರಸಭಾ ಅಧ್ಯಕ್ಷೆ ಶೀಲಾ ನಂಜುಂಡಯ್ಯ, ತರಬೇತುದಾರಾದ ಲತಾ ಪುಷ್ಪರಾಜ್ ಸೇರಿದಂತೆ ಮುಂತಾದವರು ಇದ್ದರು.