ಭಾರತೀಯ ತರುಣನನ್ನು ಪಾಕ್ ಜೈಲು ತಲುಪಿಸಿತು ಫೇಸ್ಬುಕ್ ಪ್ರೇಮ!

Date:

Advertisements

ಭಾರತ-ಪಾಕಿಸ್ತಾನವೆಂಬ ಅವಳಿ ದೇಶಗಳು ರಾಜಕೀಯವಾಗಿ ಪರಸ್ಪರ ಬದ್ಧ ವೈರಿಗಳು. ಆದರೆ ಎರಡೂ ದೇಶಗಳ ಯುವಕ-ಯುವತಿಯರ ಪ್ರೇಮ ಪ್ರಕರಣಗಳು ಸರಹದ್ದಿನ ಗೆರೆಗಳನ್ನು ಆಗಾಗ ಅಳಿಸಿ ಹಾಕಿ ಸುದ್ದಿ ಮಾಡುತ್ತಲೇ ಇರುತ್ತವೆ. ಯುವಕ-ಯುವತಿಯರು ಪಡಬಾರದ ಪಾಡು ಪಟ್ಟು ಉಭಯ ದೇಶಗಳ ಗಡಿಗಳನ್ನು ದಾಟಿ ಪ್ರೇಮಿಗಳನ್ನು ಅರಸುವ ನಿದರ್ಶನಗಳು ನೂರಾರು.

ತನ್ನ ನಾಲ್ಕು ಚಿಕ್ಕ ಮಕ್ಕಳ ಜೊತೆ ಗಡಿ ದಾಟಿ ಬಂದು ದೆಹಲಿಯ ಹೊರವಲಯದ ಸಚಿನ್ ಎಂಬ ತನ್ನ ಪ್ರೇಮಿಯನ್ನು ಕೂಡಿಕೊಂಡಿದ್ದ ಪಾಕಿಸ್ತಾನಿ ಯುವತಿಯೊಬ್ಬಳನ್ನು ಪೊಲೀಸರು 2023ರಲ್ಲಿ ಬಂಧಿಸಿದ್ದರು. ಪಾಕಿಸ್ತಾನದಿಂದ ನೇಪಾಳ ತಲುಪಿ ಅಲ್ಲಿಂದ ಭಾರತವನ್ನು ಪ್ರವೇಶಿಸಿದ್ದಳು ಈ ಯುವತಿ.

ಇದೀಗ ಇಂತಹುದೇ ಮಗದೊಂದು ಪ್ರೇಮಪ್ರಕರಣ ವರದಿಯಾಗಿದೆ. ಈ ಸಲದ ಸರದಿ ಉತ್ತರಪ್ರದೇಶದ ಅಲೀಗಢ ಜಿಲ್ಲೆಯ ತರುಣ ಬಾದಲ್ ಬಾಬುವಿನದು. ಪಾಕಿಸ್ತಾನದ ಪಂಜಾಬ್ ರಾಜ್ಯದ ಮಂಡಿ ಬಹಾವುದ್ದೀನ್ ಎಂಬ ಪಟ್ಟಣದ ಜೈಲು ಕಂಬಿ ಎಣಿಸುತ್ತಿದ್ದಾನೆ.

Advertisements

ಈ ಅಪರಿಚಿತ ತರುಣನ ಕುರಿತು ಸ್ಥಳೀಯರು ಶಂಕೆ ವ್ಯಕ್ತಪಡಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಾಬುವನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಮಂಡಿ ಬಹಾವುದ್ದೀನ್ ನ ಯುವತಿಯೊಬ್ಬಳ ಜೊತೆ ಭಾರತದ ಬಾದಲ್ ಬಾಬು ಫೇಸ್ಬುಕ್ ನಲ್ಲಿ ಗೆಳೆತನ ಬೆಳೆಸಿದ್ದಾನೆ. ಗೆಳೆತನ ಪ್ರೇಮದ ತಿರುವು ಪಡೆದಿದೆ. ಈ ಯುವತಿ ತೀವ್ರ ಧಾರ್ಮಿಕ ಕುಟುಂಬವೊಂದಕ್ಕೆ ಸೇರಿದವಳು. ಪಾಕಿಸ್ತಾನದ ಪೊಲೀಸರು ಈಕೆಯ ಕುಟುಂಬವನ್ನು ವಿಚಾರಣೆಗೆ ಕರೆದಿಲ್ಲ.

“ಬಟ್ಟೆ ಹೊಲಿಯುವ ಕೆಲಸಕ್ಕೆಂದು ದಿಲ್ಲಿಗೆ ಹೋಗಿದ್ದ ನಮ್ಮ ಮಗ. ದೀಪಾವಳಿಗೆ ಇನ್ನೂ 15 ದಿನ ಬಾಕಿ ಇರುವಂತೆಯೇ ಅಲ್ಲಿಂದ ಮತ್ತೆಲ್ಲಿಗೋ ಹೋಗಿದ್ದಾನೆ. ಒಮ್ಮೆ ಅವನೇ ಫೋನ್ ಮಾಡಿ ಗೆಳೆಯನ ಫೋನಿನಿಂದ ಮಾತಾಡುತ್ತಿರುವುದಾಗಿಯೂ, ತನ್ನ ಬಗ್ಗೆ ಚಿಂತೆ ಮಾಡಬಾರದೆಂದೂ ತಿಳಿಸಿದ್ದ. ಮತ್ತೊಮ್ಮೆ ವಿಡಿಯೋ ಕಾಲ್ ಮಾಡಿ ದುಬೈನಲ್ಲಿರುವುದಾಗಿ ಹೇಳಿದ್ದ” ಎನ್ನುತ್ತಾರೆ ಬಾದಲ್‌ನ ಪೋಷಕರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಯೋಧ್ಯೆ | ಆಸ್ಪತ್ರೆಗೆ ದಾಖಲಿಸಲು ನಿರಾಕರಣೆ, ತಂದೆಯ ತೋಳಿನಲ್ಲಿ ಮೃತಪಟ್ಟ ಬಾಲಕ

ತೀವ್ರವಾಗಿ ಅಸ್ಪಸ್ಥಗೊಂಡಿದ್ದ ತನ್ನ 12 ವರ್ಷದ ಪುತ್ರನನ್ನು ಸರ್ಕಾರಿ ಆಸ್ಪತ್ರೆಗೆ ಕರೆ...

ಹಿಂಸಾಚಾರ ಪ್ರಕರಣ: ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್‌ಗೆ ಜಾಮೀನು

ಪಾಕಿಸ್ತಾನದ ಮಾಜಿ ಪ್ರಧಾನಮಂತ್ರಿ ಇಮ್ರಾನ್ ಖಾನ್‌ಗೆ ಮೇ 9, 2023ರ ಹಿಂಸಾಚಾರ...

ನಟಿಗೆ ಕಿರುಕುಳ ಆರೋಪ: ಕೇರಳ ಯುವ ಕಾಂಗ್ರೆಸ್ ಅಧ್ಯಕ್ಷನ ಹುದ್ದೆ ತೊರೆದ ರಾಹುಲ್ ಮಾಂಕೂಟತ್ತಿಲ್

ಕೇರಳದ ರಾಜಕೀಯದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿರುವ ಅಶ್ಲೀಲ ಸಂದೇಶ ಹಾಗೂ ದುರ್ವರ್ತನೆ...

ನ್ಯಾಯದೇಗುಲಗಳಿಗೆ ಬಲು ಇಕ್ಕಟ್ಟಾದ ಬಾಗಿಲುಗಳ ಕಟ್ಟಿದ್ದೇವೆ- ಸಿಜೆಐ

‘ಹೈಕೋರ್ಟ್ ಜಡ್ಜ್ ಗಳ ಪೈಕಿ ಮೊಂಡರು, ಹಟಮಾರಿಗಳು, ಜಂಭದ ಕೋಳಿಗಳಿದ್ದಾರೆ...ಇನ್ನು ಕೆಲವರ...

Download Eedina App Android / iOS

X