ರಾಜ್ಯದಲ್ಲಿ ಸರ್ಕಾರಿ ಬಸ್‌ಗಳ ಟಿಕೆಟ್ ದರವನ್ನು 15% ಹೆಚ್ಚಿಸಲಾಗಿದೆ. ಜನವರಿ 5ರ ನಡುರಾತ್ರಿಯಿಂದಲೇ ಪರಿಷ್ಕೃತ ದರ ಜಾರಿಗೆ ಬಂದಿದೆ. ಈ ಬೆನ್ನಲ್ಲೇ, ಆಟೋರಿಕ್ಷಾಗಳ ಪ್ರಯಾಣ ದರವನ್ನೂ ಹೆಚ್ಚಿಸಬೇಕೆಂದು ಆಟೋ ಚಾಲಕರ ಸಂಘಟನೆಗಳು ಆಗ್ರಹಿಸಿವೆ.
ಬೆಂಗಳೂರಿನ ಆಟೋ ಚಾಲಕರ ಸಂಘಟನೆಗಳು ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ಶನಿವಾರ ಮನವಿ ಸಲ್ಲಿಸಿವೆ. ಪೆಟ್ರೋಲ್-ಡೀಸೆಲ್ ಬೆಲೆ ನಿರಂತರವಾಗಿ ಏರಿಕೆ ಆಗುತ್ತಿರುವ ಹಿನ್ನೆಲೆ ಆಟೋ ಪ್ರಯಾಣ ದರವನ್ನೂ ಹೆಚ್ಚಿಸಬೇಕೆಂದು ಒತ್ತಾಯಿಸಿವೆ.
ಸದ್ಯ, ಬೆಂಗಳೂರಿನಲ್ಲಿ ಅಟೋಗಳಲ್ಲಿನ ಕನಿಷ್ಠ ಪ್ರಯಾಣ ದರವು 30 ರೂ. ಇದೆ. ಅದರನ್ನು 40 ರೂ.ಗೆ ಏರಿಸಬೇಕು. ಜೊತೆಗೆ, ಪ್ರತಿ ಕಿ.ಮೀಗೆ 5 ರೂ. ಏರಿಕೆ ಮಾಡಬೇಕು ಎಂದು ಆಗ್ರಹಿಸಿವೆ.
ಆದರೆ, ಆಟೋ ಪ್ರಯಾಣ ದರ ಏರಿಕೆ ವಿಚಾರದಲ್ಲಿ ಆಟೋ ಸಂಘಟನೆಗಳಲ್ಲಿಯೇ ಒಮ್ಮತ ಇಲ್ಲ ಎಂದು ತಿಳಿದುಬಂದಿದೆ. ಕೆಲವು ಆಟೋ ಸಂಘಟನೆಗಳು ಬೈಕ್ ಟ್ಯಾಕ್ಸಿಗಳು ಬ್ಯಾನ್ ಆಗಬೇಕು. ಅಲ್ಲಿಯವರೆಗೆ ದರ ಏರಿಕೆ ಬೇಡವೆಂದು ಹೇಳುತ್ತಿದ್ದಾರೆ ಎಂದು ವರದಿಯಾಗಿದೆ.