ವಿರೋಧ ಪಕ್ಷಗಳು ಭ್ರಷ್ಟಾಚಾರ ನಡೆದಿದೆ ಎಂಬ ಆರೋಪವನ್ನು ಮಾಡುತ್ತಿದೆ. ಭ್ರಷ್ಟಾಚಾರ ನಡೆದಿದ್ದರೆ ಆಧಾರಸಹಿತವಾಗಿ ಸಾಬೀತುಪಡಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರಿಗೆ ಸವಾಲೆಸೆದಿದ್ದಾರೆ.
“ರಾಜ್ಯ ಸರ್ಕಾರದಲ್ಲಿ 60 ಪರ್ಸೆಂಟ್ ಭ್ರಷ್ಟಾಚಾರ ನಡೆಯುತ್ತಿದೆ” ಎಂದು ಇತ್ತೀಚೆಗೆ ಎಚ್ ಡಿ ಕುಮಾರಸ್ವಾಮಿ ಆರೋಪ ಮಾಡಿದ್ದರು. ಈ ಆರೋಪಕ್ಕೆ ದಾವಣಗೆರೆಯಲ್ಲಿ ಭಾನುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿರುಗೇಟು ನೀಡಿದ್ದಾರೆ.
ಇದನ್ನು ಓದಿದ್ದೀರಾ? ಮನೆಗೊಂದು ಕಲಾಕೃತಿ ಇರಲಿ: 22ನೇ ‘ಚಿತ್ರಸಂತೆ’ಗೆ ಚಾಲನೆ ನೀಡಿ ಸಿಎಂ ಸಿದ್ದರಾಮಯ್ಯ
“ವಿರೋಧ ಪಕ್ಷಗಳು ಯಾವುದೇ ಆರೋಪವನ್ನು ಮಾಡಲಿ. ಆದರೆ ಮೊದಲು ಆರೋಪವನ್ನು ಸಾಬೀತುಪಡಿಸುವ ದಾಖಲೆಯನ್ನು ಹೊಂದಿರಬೇಕು. ಆಧಾರವಿಲ್ಲದೆಯೇ ಆರೋಪವನ್ನು ಮಾಡುವುದು ಸರಿಯಲ್ಲ. ಭ್ರಷ್ಟಾಚಾರಕ್ಕೆ ಸಂಬಂಧಿಸಿದ ದಾಖಲೆ ಇದ್ದರೆ ಕುಮಾರಸ್ವಾಮಿ ಬಿಡುಗಡೆ ಮಾಡಲಿ” ಎಂದು ಹೇಳಿದರು.
“ಡೀಸೆಲ್, ವಾಹನ ದರ ಮತ್ತು ಹಣದುಬ್ಬರವನ್ನು ಸರಿದೂಗಿಸಲು ನಾವೀಗ ಸಾರಿಗೆ ಪ್ರಯಾಣ ದರವನ್ನು ಏರಿಸಿದ್ದೇವೆ. ಸಂಕಷ್ಟದಲ್ಲಿರುವ ಸಾರಿಗೆ ನಿಗಮಗಳ ಬಗ್ಗೆಯೂ ನಮಗೆ ಕಾಳಜಿ ಇರಲಿದೆ” ಎಂದರು.
