ತುಮಕೂರು | ತವರು ಜಿಲ್ಲೆಯ ಗೌರವ ಕಾರ್ಯಕ್ರಮ ನನಗೆ ಮತ್ತಷ್ಟು ವರ್ಷ ಬದುಕುವಂತಹ ಶಕ್ತಿ ನೀಡಿದೆ : ಬರಗೂರು ರಾಮಚಂದ್ರಪ್ಪ

Date:

Advertisements

ಭಿನ್ನಾಭಿಪ್ರಾಯದ ನಡುವೆ ಬದುಕುವುದೇ ನಿಜವಾದ ಪ್ರಜಾಪ್ರಭುತ್ವ. ಇಂದಿನ ಕಾರ್ಯಕ್ರಮ ನನಗೆ ಮತ್ತಷ್ಟು ವರ್ಷ ಬದುಕುವಂತಹ ಶಕ್ತಿಯನ್ನು ನೀಡಿದೆ. ನನ್ನನ್ನು ನಾನು ತಿರುಗಿ ನೋಡಿಕೊಳ್ಳುವಂತೆ ಮಾಡಿದೆ ಎಂದು ನಾಡೋಜ ಬರಗೂರು ರಾಮಚಂದ್ರಪ್ಪ ತಿಳಿಸಿದರು.

ತುಮಕೂರು ನಗರದ ಗ್ರಂಥಾಲಯ ಸಭಾಂಗಣದಲ್ಲಿ ನಾಡೋಜ ಪ್ರೊ.ಬರಗೂರು ರಾಮಚಂದ್ರಪ್ಪ ಸ್ನೇಹ ಬಳಗದವತಿಯಿಂದ ಹಮ್ಮಿಕೊಂಡಿದ್ದ ಬರಗೂರು ಮೀಮಾಂಸೆ ಮತ್ತು ಬರಗೂರರಿಗೆ ತವರು ಜಿಲ್ಲೆಯ ಗೌರವ ಕಾರ್ಯಕ್ರಮದಲ್ಲಿ ತುಮಕೂರು ನಾಗರಿಕರ ಗೌರವ ಸ್ವೀಕರಿಸಿ ಮಾತನಾಡುತಿದ್ದ ಅವರು, ನನ್ನ ಇಂದಿನ ಎಲ್ಲಾ ಗೌರವಕ್ಕೆ ಕಾರಣರು ನನ್ನಗೆ ಚಿಕ್ಕಂದಿನಲ್ಲಿ ಪಾಠ ಹೇಳಿಕೊಟ್ಟ ಟಿ.ವೈ.ನಾಗಭೂಷಣರಾವ್, ಎಂ.ಎಸ್.ರಾಮಲಿಂಗಪ್ಪ,ನನ್ನ ಸಾಹಿತ್ಯವನ್ನು ತಿದ್ದಿ ತೀಡಿ ಬರೆಯಲು ಪ್ರೇರೆಪಿಸಿದ ಸೀತಾರಾಮ್ ಅವರುಗಳು.ನಾನು ಜಾತ್ಯಾತೀತ ವ್ಯಕ್ತಿಯಾಗಿ ರೂಪುಗೊಳ್ಳಲು ಕಾರಣರು ಎಂದರು.

1000862677

ನಾನು ಮಹಾತ್ಮಗಾಂಧಿಯ ಸಹಿಷ್ಣತೆ,ಅಂಬೇಡ್ಕರ್ ಸಮಾಜಿಕ ಸಮಾನತೆ ಮತ್ತು ಕಾರ್ಲ್ಮಾರ್ಕ ಅವರ ಅರ್ಥಿಕ ಸಮಾನತೆಯಿಂದ ಸ್ಪೂರ್ತಿ ಪಡೆದವನು.ನೀಲಿ,ಹಸಿರು,ಕೆಂಪು ಒಂದಾದರೆ ಹೆಚ್ಚಿನ ಅನುಕೂಲ ಜನರಿಗೆ ಸಿಗಲಿದೆ ಎಂಬ ನಂಬಿಕೆ ನನ್ನದು.ಜನರ ಪ್ರೀತಿಗೆ ಗೌರವ ಕೊಡಬೇಕು ಎಂಬ ಕಾರಣಕ್ಕೆ ನಿಮ್ಮೆಲ್ಲಾ ಗೌರವಗಳನ್ನು ಸ್ವೀಕರಿಸಿದ್ದೇನೆ.ಭಾವುಕತೆ ಮತ್ತು ಬೌದ್ಧಿಕತೆ ಎರಡರ ನಡುವೆ ಸಮತೋಲನ ಕಂಡುಕೊಂಡವ.ಇಂದಿನ ಕಾರ್ಯಕ್ರಮ ಒಂದೆಡೆ ಸಂಭ್ರಮ ನೀಡಿದರೆ, ಎಚ್ಚರಿಕೆಯನ್ನು ನೀಡಿದೆ ಎಂದು ಡಾ.ಬರಗೂರು ರಾಮಚಂದ್ರಪ್ಪ ನುಡಿದರು.

Advertisements

ಬರಗೂರು ಪ್ರತಿಷ್ಠಾನದ ಕಾರ್ಯದರ್ಶಿ ಡಾ.ಸುಂದರಾಜ್ ಅರಸ್ ಮಾತನಾಡಿ, ಬರಗೂರು ದ್ವನಿ ಇಲ್ಲದವರ ದ್ವನಿಯಾಗಿ ಕೆಲಸ ಮಾಡಿದವರು.ಕಳೆದ 38 ವರ್ಷಗಳಿಂದ ಅವರ ಹೆಜ್ಜೆಗಳನ್ನು ಅನುಸರಿಸುತ್ತಾ ಬಂದಿದ್ದೇನೆ.ಎಲ್ಲರ ನೋವಿಗೆ ಬೆಲೆಯಿದೆ ಎಂದು ತಿಳಿದವರು ಬರಗೂರ ರಾಮಚಂದ್ರಪ್ಪ, ಕೈ, ಬಾಯಿ, ಮನಸ್ಸು ಎಲ್ಲವನ್ನು ಶುದ್ದವಾಗಿಟ್ಟುಕೊಂಡು ಸಂಸ್ಕಾರವಂತರು ಎಂದರು

1000862651

.

ಪತ್ರಕರ್ತ ಎಸ್.ನಾಗಣ್ಣ ಮಾತನಾಡಿ,ಬರಗೂರು ರಾಮಚಂದ್ರಪ್ಪ ಅವರು ಮೇಷ್ಟುç ಎಂಬ ಪದಕ್ಕೆ ಹೆಚ್ಚು ಗೌರವ ತಂದುಕೊಟ್ಟವರು.ಅವರ ಎಲ್ಲ ಬರಹಗಳ ಸತ್ವಪೂರ್ಣವಾಗಿವೆ.ಅವರಿಂದ ಇಡೀ ಊರಿಗೆ ಕೀರ್ತಿ ಬಂದಿದೆ ಎಂದರು.

ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಮಾತನಾಡಿ, ನನ್ನ ಗುರುಗಳಾಗಿ ನನ್ನನ್ನು ಸಾಕಷ್ಟು ತಿದ್ದಿ ತೀಡಿದವರು ರಾಮಚಂದ್ರಪ್ಪ ಅವರು,ವ್ಯವಸ್ಥೆ ಒಳಗೆ ಇರಲಿ,ಹೊರಗೆ ಇರಲಿ ತಾವು ನಂಬಿದ ಸಿದ್ದಾಂತದೊಂದಿಗೆ ರಾಜಿ ಮಾಡಿಕೊಂಡ ವರಲ್ಲ.ಅವರ ನೇತೃತ್ವದಲ್ಲಿ ನಡೆದ ಸಾಂಸ್ಕೃತಿಕ ನೀತಿ ಜಾರಿಗೆ ಬರಬೇಕು..ಹಾಗೆಯೇ ಶಾಸ್ತ್ರೀಯ ಸ್ಥಾನಮಾನದ ಅನುದಾನ ಬಳಕೆಗೆ ಸಂಬಂಧಿಸಿದಂತೆ ಸಮಿತಿ ರಚಿಸಿ, ಕೇಂದ್ರಕ್ಕೆ ಕಳುಹಿಸುವಂತೆ ಮನವಿ ಮಾಡಿದರು.

1000862665

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತುಮಕೂರು ವಿವಿ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಮಾತನಾಡಿ,ಬರಗೂರರ ಅಜ್ಞಾತ ಅಭಿಮಾನಿಗಳಲ್ಲಿ ನಾನು ಒಬ್ಬ.ಇಡೀ ರಾಜ್ಯದ ಶಿಕ್ಷಕ ಸಮೂಹಕ್ಕೆ ಮಾದರಿ.ಕೇವಲ ಕ್ಲಾಸ್ ರೂಂಗೆ ಸಿಮೀತವಾಗದೆ, ವೇತನಕ್ಕೆ ಲೆಕ್ಕ ಇಡದೆ, ಶಿಷ್ಯ ಬಳಗವನ್ನು ಹುಟ್ಟು ಹಾಕಿದವರು.ನಾವು ಕೂಡ ಅವರಂತೆ ಬದುಕುವುದೇ ಅವರಿಗೆ ನೀಡುವ ನಿಜವಾದ ಗೌರವ ಎಂದರು.

ಕಾರ್ಯಕ್ರಮದಲ್ಲಿ ಡಾ.ಲಕ್ಷ್ಮೀರಂಗಯ್ಯ,ಪ್ರೊ.ತಿಪ್ಪೇಸ್ವಾಮಿ,ಡಾ.ಪವನಗಂಗಾಧರ್,ನಾಡೋಜ ಪ್ರೊ.ಬರಗೂರು ರಾಮಚಂದ್ರಪ್ಪ ಸ್ನೇಹ ಬಳಗದ ಎ.ರಾಮಚಂದ್ರಪ್ಪ, ಹೆಚ್.ಗೋವಿಂದಯ್ಯ, ಆಶ್ವಥನಾರಾಯಣಗುಟ್ಟೆ, ಡಾ.ಶ್ರೀನಿವಾಸಪ್ಪ,ಡಾ.ಓ.ನಾಗರಾಜು, ಡಾ.ನಾಗಭೂಷಣ್ ಬಗ್ಗನಡು, ಡಾ.ಶಿವಣ್ಣ ತಿಮ್ಮಲಾಪುರ, ನಾಗೇಂದ್ರಪ್ಪ, ಆನಂತಮೂರ್ತಿ, ರಾಘವೇಂದ್ರ ಮತ್ತಿತರರು ಉಪಸ್ಥಿತರಿದ್ದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಾಗೇಪಲ್ಲಿ | ನೋಟಿಸ್ ನೀಡದೇ ಕೆಲಸದಿಂದ ತೆಗೆದ ಗಾರ್ಮೆಂಟ್ ಫ್ಯಾಕ್ಟರಿ; ಪ್ರತಿಭಟನೆಗಿಳಿದ ಮಹಿಳಾ ನೌಕರರು

ಬಾಗೇಪಲ್ಲಿ ತಾಲೂಕಿನ ಹೊರವಲಯದ ರಾಷ್ಟ್ರೀಯ ಹೆದ್ದಾರಿ ನಾರೇಪಲ್ಲಿ ಟೋಲ್ ಗೇಟ್ ಬಳಿ...

ಧಾರವಾಡ | ಹಾಳುಬಿದ್ದ ಸಂಶಿ ಎಪಿಎಂಸಿ; ವಾರದ ಸಂತೆ ಸ್ಥಳಾಂತರಿಸಲು ಒತ್ತಾಯ

ಸರ್ಕಾರದ ಮಟ್ಟದಲ್ಲಿ ಆಗುವ ಯೋಜನೆಗಳ ಅನುಷ್ಠಾನ ಮಾಡುವಲ್ಲಿ ನಿರ್ಲಕ್ಷ್ಯ ವಹಿಸುವುದರಿಂದ ಇತ್ತ...

ಹಾಸನ | ಕ್ಯೂಬಾ ದೇಶದ ಸಮಗ್ರ ಅಭಿವೃದ್ಧಿಯಲ್ಲಿ ಫಿಡೆಲ್ ಕ್ಯಾಸ್ಟ್ರೋ ಕೊಡುಗೆ ಅಪಾರ: ಬರಹಗಾರ ರವಿಕುಮಾರ್

ಕೃಷಿ ಪ್ರಧಾನವಾಗಿರುವ ಪುಟ್ಟ ಕ್ಯೂಬಾ ದೇಶವನ್ನು ಎಲ್ಲಾ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದುವಂತೆ...

ಕುಶಾಲನಗರ | ಕೊಡಗು ಪ್ರವೇಶ ನಿರ್ಬಂಧ; ಪುನೀತ್ ಕೆರೆಹಳ್ಳಿಯನ್ನು ಹೊರಹಾಕಿದ ಪೊಲೀಸರು

ಕೊಡಗು ಜಿಲ್ಲೆ, ಕುಶಾಲನಗರಕ್ಕೆ ಆಗಮಿಸಿದ್ದ ರಾಷ್ಟ್ರ ರಕ್ಷಣಾ ಪಡೆಯ ಸಂಸ್ಥಾಪಕ ಪುನೀತ್...

Download Eedina App Android / iOS

X