ಕೇರಳ ರಾಜ್ಯ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಬಸ್ ಒಂದು ಕಂದಕಕ್ಕೆ ಉರುಳಿದ ಪರಿಣಾಮ ನಾಲ್ವರು ಸಾವನ್ನಪ್ಪಿ, 32 ಮಂದಿ ಗಾಯಗೊಂಡ ಘಟನೆ ಕೇರಳದ ಪುಪ್ಪುಪರದಲ್ಲಿ ನಡೆದಿದೆ.
ತಮಿಳುನಾಡಿನ ತಂಜವೂರಿನಲ್ಲಿ ಪ್ರವಾಸದ ಬಳಿಕ ಬಸ್ ಮಾವೇಲಿಕ್ಕಾರಕ್ಕೆ ವಾಪಸ್ ಬರುತ್ತಿತ್ತು. ಇಡುಕ್ಕಿ ಜಿಲ್ಲೆಯ ಕಲ್ಲಿವಯಾಲ್ ಎಸ್ಟೇಟ್ ಬಳಿ 6:15ರ ಸುಮಾರಿಗೆ ಅಪಘಾತ ನಡೆದಿದೆ ಎಂದು ಹೇಳಲಾಗಿದೆ.
ಇದನ್ನು ಓದಿದ್ದೀರಾ? ಕೇರಳ | ವಿದ್ಯಾರ್ಥಿನಿ ಮೇಲೆ ಅತ್ಯಾಚಾರ; ಶಿಕ್ಷಕನಿಗೆ 111 ವರ್ಷ ಜೈಲು ಶಿಕ್ಷೆ
ಮೃತರನ್ನು ಅರುಣ್ ಹರಿ (55), ರಮ ಮೋಹನ್ (40), ಸಂಗೀತ್ (45) ಮತ್ತು ಬಿಂಧು ಉನ್ನಿತ್ತಾನ್ (59) ಎಂದು ಗುರುತಿಸಲಾಗಿದ್ದು, ಎಲ್ಲರೂ ಮಾವೇಲಿಕ್ಕಾರ ನಿವಾಸಿಗಳೆಂದು ಹೇಳಲಾಗಿದೆ.
ಪ್ರಾಥಮಿಕ ವರದಿ ಪ್ರಕಾರ ಬಸ್ ಬ್ರೇಕ್ ಫೇಲ್ ಆಗಿದೆ ಎಂದು ತಿಳಿದುಬಂದಿದೆ. ಬಸ್ ಸುಮಾರು 70 ಅಡಿ ಆಳದ ಕಂದರಕ್ಕೆ ಉರುಳಿದ್ದು ಮರದ ಮೇಲೆ ಬಿದ್ದಿದೆ. ಇದರಿಂದಾಗಿ ಹೆಚ್ಚಿನ ಸಾವುನೋವುಗಳ ಸಂಭವಿಸಿಲ್ಲ ಎಂದು ವರದಿಯಾಗಿದೆ.
ಇದನ್ನು ಓದಿದ್ದೀರಾ? ಪುರುಷ ಭಕ್ತರ ಮೇಲಂಗಿ ತೆಗೆಯುವ ಅನಿಷ್ಟ ಪದ್ಧತಿ ಕೈಬಿಡಲು ನಿರ್ಧಾರ: ಕೇರಳ ಸಿಎಂ
ಸ್ಥಳೀಯ ನಿವಾಸಿಗಳು, ಪೊಲೀಸರು ಮತ್ತು ಅಗ್ನಿಶಾಮಕ ಮತ್ತು ರಕ್ಷಣಾ ಸೇವೆಗಳ ಸಿಬ್ಬಂದಿ ಸೇರಿದಂತೆ ಹಲವು ಮಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದರು. ಗಾಯಾಳುಗಳನ್ನು ಮುಂಡಕಯಂ ಮೆಡಿಕಲ್ ಟ್ರಸ್ಟ್ ಆಸ್ಪತ್ರೆ ಮತ್ತು ಮಾರ್ ಸ್ಲೀವಾ ಮೆಡಿಸಿಟಿಗೆ ಚಿಕಿತ್ಸೆಗಾಗಿ ರವಾನಿಸಲಾಗಿದೆ.
ಭಾನುವಾರ ಬೆಳಗ್ಗೆ ಮಾವೇಲಿಕ್ಕಾರದಿಂದ ಬಸ್ ಹೊರಟಿದ್ದು, ಸೋಮವಾರ ಮುಂಜಾನೆ ಹಿಂತಿರುಗಬೇಕಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಪಘಾತಕ್ಕೆ ನಿಖರ ಕಾರಣದ ಬಗ್ಗೆ ತನಿಖೆ ನಡೆಯುತ್ತಿದೆ.
