ಜನೆವರಿ 7 ರಿಂದ ‘ಮಾಯಾಜಾಲ’ ಕಿರುಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದ್ದು, ಕಾರ್ತಿಕ ರೊಟ್ಟಿಮಠ ಹಾಗೂ ಪ್ರಶಾಂತ ಹಂಚಿನಾಳ ನೇತೃತ್ವದಲ್ಲಿ ಧಾರವಾಡಿಯನ್ಸ್ ತಂಡದ ವತಿಯಿಂದ ನಿರ್ಮಾಣವಾಗುತ್ತಿರುವ ಕಿರು ಚಿತ್ರ ಧಾರವಾಡ ಹಾಗೂ ಸುತ್ತ-ಮುತ್ತಲಿನ ಪ್ರದೇಶದಲ್ಲಿ ಎರಡು ಹಂತಗಳಲ್ಲಿ ಚಿತ್ರೀಕರಣವನ್ನು ಪೂರ್ಣಗೊಳಿಸಲಿದೆ ಎಂದು ಪ್ರಭು ಹಂಚಿನಾಳ ತಿಳಸಿದರು.
ಈ ಕುರಿತು ನಗರದಲ್ಲಿ ಎರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಚಿತ್ರವು ಕೇವಲ 6 ರಿಂದ 8 ಕಲಾವಿದರ ಸುತ್ತ ನಿಗೂಢ ಹಾಗೂ ರೋಮಾಚನಕಾರಿಯಾಗಿ ಹೆಣೆಯಲಾದ ಕಥೆಯಾಗಿದ್ದು, ಕಾರ್ತಿಕ ರೊಟ್ಟಿಮಠ ಕಲ್ಪನೆಯಲ್ಲಿ ಮೂಡಿ ಬರುತ್ತಿದೆ. ಈ ಕಿರುಚಿತ್ರದಲ್ಲಿ ಶಿಕ್ಷಕ ಎನ್. ಬಿ. ದ್ಯಾಪೂರ, ಆನಂದ ಜೋಶಿ, ಕುಮಾರ ಕಾರ್ತಿಕ ರೊಟ್ಟಿಮಠ, ಕುಮಾರ ಕಿರಣ ಕುರಿ ಇನ್ನಿತರರು ಅಭಿನಯಿಸಲಿದ್ದಾರೆ. ರಂಗಭೂಮಿ ಮತ್ತು ಚಲನಚಿತ್ರ ನಟ ಹಾಗೂ ಧಾರವಾಡ ರಂಗಾಯಣದ ನಿರ್ದೇಶಕ ಡಾ. ರಾಜು ತಾಳಿಕೋಟಿ ಕ್ಯಾಮೆರಾ ಚಾಲನೆಯನ್ನು ನೆರವೇರಿಸಲಿದ್ದಾರೆ ಎಂದರು.
ಈ ವರದಿ ಓದಿದ್ದೀರಾ? ಹುಬ್ಬಳ್ಳಿ | ಪೌರಕಾರ್ಮಿಕರ ಹಿತ ಕಾಯುವಲ್ಲಿ ಕಾಂಗ್ರೆಸ್ ವಿಫಲವಾಗಿದೆ: ವೀರಭದ್ರಪ್ಪ ಹಾಲಹರವಿ
ಪತ್ರಿಕಾ ಗೋಷ್ಠಿಯಲ್ಲಿ ಡಾ. ಕಲ್ಮಶ ಹಾವೇರಪೇಟ, ಕಾರ್ತಿಕ ರೊಟ್ಟಿಮಠ, ಪ್ರಶಾಂತ ಹಂಚಿನಾಳ, ಪ್ರವೀಣ ಬಡಿಗೇರ, ಅಕ್ಷಯ ಗಾಯಕರ ಇದ್ದರು.