2008ರಿಂದಲೂ ಬಾಂಗ್ಲಾದೇಶದ ಪ್ರಧಾನ ಮಂತ್ರಿಯಾಗಿ ಆಡಳಿತ ನಡೆಸುತ್ತಿದ್ದ ಆವಾಮಿ ಲೀಗ್ ಪಕ್ಷದ ನಾಯಕಿ ಷೇಕ್ ಹಸೀನಾ, ಆಗಸ್ಟ್ 5, 2024ರಂದು ರಾಜೀನಾಮೆ ನೀಡಿ, ದೇಶ ತೊರೆದಿದ್ದಾರೆ. 2024ರ ಜೂನ್ ತಿಂಗಳಲ್ಲಿ, ಷೇಕ್ ಹಸೀನಾ ಅವರ ಸರಕಾರವು, ದೇಶದ ನಾಗರಿಕ ಸೇವಾ ವಲಯದ ಹುದ್ದೆಗಳ ನೇಮಕಾತಿಯಲ್ಲಿ, 1971ರ ಬಾಂಗ್ಲಾ ವಿಮೋಚನಾ ಹೋರಾಟದಲ್ಲಿ ಭಾಗವಹಿಸಿದ್ದ ಕುಟುಂಬದವರಿಗೆ ಶೇ.30ರಷ್ಟು ಮೀಸಲಾತಿಯನ್ನು ಘೋಷಿಸಿತು. ತೀವ್ರ ನಿರುದ್ಯೋಗದ ಸ್ಥಿತಿ ಇರುವ ಹೊತ್ತಲ್ಲಿ ಈ ನಿರ್ಧಾರವು ಯುವಕರು ಮತ್ತು ವಿದ್ಯಾರ್ಥಿಗಳಲ್ಲಿ ತೀವ್ರ ಆಕ್ರೋಶವನ್ನು ಉಂಟು ಮಾಡಿತು….

ಕೆ. ಫಣಿರಾಜ್
ಫಣಿರಾಜ್ ಅವರು ಬಳ್ಳಾರಿ ಜಿಲ್ಲೆಯ ಕೊಟ್ಟೂರಿನವರು. 35 ವರ್ಷಗಳ ಕಾಲ ಮಣಿಪಾಲದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೇಷ್ಟ್ರಾಗಿದ್ದು ವೃತ್ತಿ ವಿಶ್ರಾಂತಿ ಪಡೆದಿದ್ದಾರೆ. ಕಳೆದ ನಾಲ್ಕು ದಶಕಗಳಿಂದ ಕರ್ನಾಟಕದ ಎಡ-ದಲಿತ ಚಳವಳಿಗಳ ಸಂಗಾತಿಯಾಗಿದ್ದಾರೆ