ರಾಜ್ಯದಲ್ಲಿ ಅಸ್ಥಿತ್ವದಲ್ಲಿರುವ ಅನರ್ಹ ಕಟ್ಟಡ ಕಾರ್ಮಿಕರ ಕಾರ್ಡ್ ಗಳನ್ನು ಗುರುತಿಸಿ ಕೂಡಲೇ ರದ್ದುಗೊಳಿಸಬೇಕು ಎಂದು ʼಅಸಂಘಟಿತ ಕಾರ್ಮಿಕರು, ಬೀದಿಬದಿ ವ್ಯಾಪಾರಸ್ಥರʼ ಜಿಲ್ಲಾಧ್ಯಕ್ಷ ಚನ್ನವೀರಪ್ಪ ನೇತೃತ್ವದಲ್ಲಿ ಕಾರ್ಮಿಕ ಇಲಾಖೆ ಸಚಿವ ಸಂತೋಷ್ ಲಾಡ್ ಅವರಿಗೆ ಮನವಿ ಸಲ್ಲಿಸಲಾಯಿತು.
ಶಿವಮೊಗ್ಗ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ, ಸರ್ಕಾರಿ ಕೆಲಸದಲ್ಲಿರುವರು ಹಾಗೂ ಸರ್ಕಾರಕ್ಕೆ ಐಟಿ ರಿಟರ್ನ್ ಸಲ್ಲಿಸುವರೂ ಸಹ ಕಟ್ಟಡ ಕಾರ್ಮಿಕರ ಕಾರ್ಡ್ ಪಡೆದು ಸರ್ಕಾರದ ಸೌಲಭ್ಯ ಪಡೆಯುತ್ತಿದ್ದಾರೆ. ಇದರಿಂದ ಅರ್ಹರಿಗೆ ಅನ್ಯಾಯವಾಗುವುದನ್ನು ತಡೆಯಬೇಕು ಎಂದು ಮನವಿ ಮಾಡಲಾಯಿತು. ಅಸಂಘಟಿತ ಕಾರ್ಮಿಕರು ಮತ್ತು ಕಟ್ಟಡ ಕಾರ್ಮಿಕರ ಕುಂದು ಕೊರತೆಯ ಸಮಸ್ಯೆಗಳನ್ನು ಆಲಿಸಿ ಸಚಿವ ಸಂತೋಷ್ ಲಾಡ್, ಮನವಿ ಸ್ವೀಕರಿಸಿದರು.

ಕಟ್ಟಡ ಕಾರ್ಮಿಕರಿಗೆ ರಾಷ್ಟ್ರೀಯ ವಿಪತ್ತು ಬಂದಾಗ, ಸಾವು ನೋವುಗಳಾದಾಗ ಸರ್ಕಾರದಿಂದ ಲಕ್ಷಗಟ್ಟಲೆ ಪರಿಹಾರ ನೀಡಲಾಗುತ್ತದೆ. ಅಪಘಾತ, ಅನಾಹುತಗಳಾದಾಗ ನೀಡುವ ಹಣವನ್ನು ಪರಿಹಾರವೆಂದು ಪರಿಗಣಿಸಿ ಇಡಿ ಗಂಟನ್ನು ಡಿಪಾಸಿಟ್ ಇಟ್ಟು ಅದರಲ್ಲಿ ಬರುವ ಆದಾಯದಿಂದ ಕಾರ್ಮಿಕರಿಗೆ ಸವಲತ್ತು ಒದಗಿಸಲಾಗುತ್ತದೆ. ಇದೇ ನಿಯಮಗಳ ಅನ್ವಯ ಅಸಂಘಟಿತ ಕಾರ್ಮಿಕರಿಗೂ ಸೌಲಭ್ಯಗಳನ್ನು ವಿಸ್ತರಿಸಿ ಎಂದು ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಸರ್ಕಾರಿ ಶಾಲೆ ಶಿಕ್ಷಕಿ ನಿವೃತ್ತಿ; ಅಂಬೇಡ್ಕರ್ ಫೋಟೋ ನೀಡಿ, ಹಳೆ ವಿದ್ಯಾರ್ಥಿಗಳಿಂದ ಬೀಳ್ಕೊಡುಗೆ
ಸಭೆಯಲ್ಲಿ ಸಂಬಂಧ ಪಟ್ಟ ಇಲಾಖಾ ಅಧಿಕಾರಿಗಳು, ಅಸಂಘಟಿತ ಕಾರ್ಮಿಕರು, ಕಟ್ಟಡ ಕಾರ್ಮಿಕರು ಉಪಸ್ಥಿತರಿದ್ದರು.
