ಶೋಷಿತ ಸಮುದಾಯದಿಂದ ಬಂದ ಸಚಿವ ಪ್ರಿಯಾಂಕ ಖರ್ಗೆ ಮತ್ತು ಜಿ ಪರಮೇಶ್ವರ್ ಅವರನ್ನು ಟಾರ್ಗೆಟ್ ಮಾಡಿ ನಾಶ ಮಾಡಲು ಹೋದರೆ, ನೀವೇ ನಾಶವಾಗಿ ಹೋಗುತ್ತೀರಿ ಎಂದು ವಿಜಯಪುರ ಜಿಲ್ಲಾ ದಲಿತ ಸಂಘರ್ಷ ಸಮಿತಿ ಮುಖಂಡ ಶರಣು ಸಿಂಧೆ ಆಕ್ರೋಶ ವ್ಯಕ್ತಪಡಿಸಿದರು.
ಸಚಿವ ಪ್ರಿಯಾಂಕ್ ಖರ್ಗೆ ಅವರ ವಿರುದ್ಧ ವಿಪಕ್ಷಗಳು ಮಾಡುತ್ತಿರುವ ಆರೋಪದ ಕುರಿತಾಗಿ ಪತ್ರಿಕಾ ಪ್ರಕಟಣೆ ಮೂಲಕ ಪ್ರತಿಕ್ರಿಯಿಸಿರುವ ಅವರು, “ದಲಿತರನ್ನು ಸಿಎಂ ಆಗೋಕೆ ಬಿಡ್ತಾ ಇಲ್ಲ. ಪ್ರಿಯಾಂಕಾ ಖರ್ಗೆ ಮನೆ ಮುತ್ತಿಗೆ ಹಾಕ್ತೀರಿ. ಮುತ್ತಿಗೆ ಹಾಕಿದ್ರೆ ನಾವು ಸುಮ್ನೆ ಇರಬೇಕಾ? ಅಂಬೇಡ್ಕರ್ ಅನ್ನೋ ಹೆಸರು ನಿಮಗೆ ಫ್ಯಾಷನ್ ಇರಬಹುದು ಆದರೆ ನಮಗೆ ಅಂಬೇಡ್ಕರ್ ಅನ್ನೋದು ಉಸಿರು. ಪ್ರಿಯಾಂಕ್ ಖರ್ಗೆ ಅವರ ಮೇಲೆ ಸಲ್ಲದ ಆರೋಪ ಮಾಡುತ್ತಿರುವುದು ಮೂರ್ಖತನದ ಪರಮಾವಧಿ. ಕಾನೂನು ಸುವ್ಯವಸ್ಥೆ ಕಾಪಾಡುವುದು ನಮ್ಮ ಕರ್ತವ್ಯ ಆಗಿರುವುದರಿಂದ ನಾವು ಸುಮ್ಮನಿದ್ದೇವೆ. ಬಿಜೆಪಿಗರ ಹಗರಣಗಳನ್ನು ಖರ್ಗೆ ಅವರು ಎಳೆ ಎಳೆಯಾಗಿ ಬಿಚ್ಚಿಡುತ್ತಿದ್ದಾರೆ. ಅದಕ್ಕಾಗಿಯೇ ಅವರ ವಿರುದ್ಧ ಸಂಚು ರೂಪಿಸಲಾಗುತ್ತಿದೆ. ಕೂಡಲೇ ಅವರ ಮೇಲೆ ಮಾಡುತ್ತಿರುವ ಆರೋಪಗಳನ್ನು ನಿಲ್ಲಿಸಬೇಕು ಇಲ್ಲವಾದಲ್ಲಿ ನಮ್ಮ ಸಮುದಾಯ ಸೇರಿದಂತೆ ಸಚಿವರ ಅಭಿಮಾನಿಗಳು ದಂಗೆ ಏಳುವುದು ಖಂಡಿತ” ಎಂದು ಬಿಜೆಪಿಗರಿಗೆ ಎಚ್ಚರಿಕೆ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ವಿಜಯಪುರ | ನಗರದಲ್ಲಿ ಚಿರತೆ ಪ್ರತ್ಯಕ್ಷ : ಜನರಲ್ಲಿ ಮನೆ ಮಾಡಿದ ಆತಂಕ!
