ಸುಮಾರು 19 ವರ್ಷಗಳ ಹಿಂದೆ ಕೇರಳದ ಕಣ್ಣೂರಿನಲ್ಲಿ ನಡೆದ ಸಿಪಿಐ(ಎಂ) ಕಾರ್ಯಕರ್ತನ ಹತ್ಯೆಗೆ ಸಂಬಂಧಿಸಿದಂತೆ ಒಂಬತ್ತು ಆರ್‌ಎಸ್‌ಎಸ್ ಕಾರ್ಯಕರ್ತರಿಗೆ ತಲಶೇರಿಯ ನ್ಯಾಯಾಲಯವು ಮಂಗಳವಾರ ಜೀವಾವಧಿ ಶಿಕ್ಷೆ ವಿಧಿಸಿದೆ.
ಕನ್ನಪುರಂ ಚುಂಡಾದ 25 ವರ್ಷದ ಸಿಪಿಐ(ಎಂ) ಕಾರ್ಯಕರ್ತ ರಿಜಿತ್ ಶಂಕರನ್ ಅವರನ್ನು 2005ರ ಅಕ್ಟೋಬರ್ 3ರಂದು ಹತ್ಯೆ ಮಾಡಲಾಗಿದೆ. ಸಿಪಿಐಎಂ ಮತ್ತು ಆರ್‌ಎಸ್‌ಎಸ್ ನಡುವೆ ರಾಜಕೀಯ ಉದ್ವಿಗ್ನತೆ ಹೆಚ್ಚಾಗಿದ್ದ ಅವಧಿಯಲ್ಲಿ ರಿಜಿತ್ ಶಂಕರನ್ ಅವರನ್ನು ಚುಂಡಾದ ದೇವಸ್ಥಾನ ಒಂದರ ಬಳಿ ದಾಳಿ ನಡೆಸಿ ಹತ್ಯೆ ಮಾಡಲಾಗಿದೆ.
ಇದನ್ನು ಓದಿದ್ದೀರಾ? ಉಡುಪಿ | ಸಾರಿಗೆ ದರ ಹೆಚ್ಚಳ ಜನ ವಿರೋಧಿ : ಸಿಪಿಐಎಂ ಖಂಡನೆ
ರಿಜಿತ್ ದೇವಾಲಯದ ಹಾದಿಯಲ್ಲಿ ಸಾಗುತ್ತಿದ್ದಾಗ ಆರೋಪಿಗಳು ಶಸ್ತ್ರಾಸ್ತ್ರಗಳನ್ನು ಹಿಡಿದು ಬಾವಿಯ ಸಮೀಪದಲ್ಲಿ ಹೊಂಚು ಹಾಕಿ ಕೂತು ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ರಿಜಿತ್‌ನ ಮೂವರು ಸ್ನೇಹಿತರು ಕೂಡಾ ಗಾಯಗೊಂಡಿದ್ದರು.
ಜನವರಿ 4ರಂದು ತಲಶೇರಿಯ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಆರೋಪಿಯನ್ನು ದೋಷಿಗಳೆಂದು ತೀರ್ಪು ನೀಡಿದೆ. ಮಂಗಳವಾರ ಜೀವಾವಧಿ ಶಿಕ್ಷೆ ವಿಧಿಸಿದೆ.
ಇನ್ನು ಪ್ರಕರಣದ ಒಟ್ಟು 10 ಆರೋಪಿಗಳ ಪೈಕಿ, ಓರ್ವ ಆರೋಪಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾನೆ. ಅಪರಾಧಿಗಳಲ್ಲಿ ಸುಧಾಕರನ್ (57), ಜಯೇಶ್ (41), ರಂಜಿತ್ (44), ಅಜೀಂದ್ರನ್ (51), ಅನಿಲ್‌ಕುಮಾರ್ (52), ರಾಜೇಶ್ (46), ಶ್ರೀಕಾಂತ್ (47), ಅವರ ಸಹೋದರ ಶ್ರೀಜಿತ್ (43), ಮತ್ತು ಭಾಸ್ಕರನ್‌ಗೆ (67) ಈಗ ಜೀವಾವಧಿ ಶಿಕ್ಷೆ ಲಭಿಸಿದೆ.
