ರಾಯಚೂರು ನಗರದಲ್ಲಿ ಅಕ್ರಮವಾಗಿ ಸೇಂದಿ ಮಾರಾಟ ಮಾಡುತ್ತಿದ್ದ ಮನೆ ಮೇಲೆ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದು, 630 ಲೀಟರ್ ಕಲಬೆರಕೆ ಸೇಂದಿ ವಶಪಡಿಸಿಕೊಂಡಿದ್ದಾರೆ.
ನಗರದ ಗದ್ವಾಲ ರಸ್ತೆಯಲ್ಲಿ ವೀರಾಂಜನೇಯ ದೇವಸ್ಥಾನದ ಬಳಿಯಿರುವ ಜಂಬಯ್ಯನ ಮಗ ಗೆಜ್ಜೆ ವೀರೇಶ ಎಂಬುವವನ ಮನೆಯ ಮೇಲೆ ಪೊಲೀಸರು ಶೋಧನೆ ಮಾಡಿದಾಗ ಅಕ್ರಮವಾಗಿ ಮಾರಾಟಮಾಡಲು ಸಂಗ್ರಹಿಸಿಟ್ಟಿದ್ದ 630 ಲೀಟರ್ ಸೇಂದಿ ಕಂಡುಬಂದಿದೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ಡಿಕೆಶಿ ಹೊರಗಿಟ್ಟು ಯಾವುದೇ ರಹಸ್ಯ ಸಭೆ ಮಾಡಿಲ್ಲ, ಸಿಎಂ ಬದಲಾವಣೆಯೂ ಇಲ್ಲ: ಸಚಿವ ಸತೀಶ್ ಜಾರಕಿಹೊಳಿ
ಅಬಕಾರಿ ಅಧಿಕಾರಿಗಳು ಒಟ್ಟು ₹22,520 ನಗದು ವಶಪಡಿಸಿಕೊಂಡಿದ್ದು, ಗೆಜ್ಜೆ ವೀರೇಶ, ಉರುಕುಂದಮ್ಮ ಹಾಗೂ ಮನೆಯ ಮಾಲೀಕನ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ರಾಯಚೂರು ಅಬಕಾರಿ ಇಲಾಖೆಯ ವಲಯ ಉಪ ನಿರೀಕ್ಷಕ ಸಣ್ಣ ಮಾರುತಿ, ಇತರೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.
