ದಾವಣಗೆರೆ | ʼಹಿಂದಿ ಹೇರಿಕೆʼ ಎಂಬುದು ಕೇವಲ ರಾಜಕೀಯ ದೊಂಬರಾಟವೇ?; ಕನ್ನಡಪರ ಹೋರಾಟಗಾರರ ಆಕ್ರೋಶ

Date:

Advertisements

ಕೇಂದ್ರ ಸರ್ಕಾರ ʼಹಿಂದಿ ಹೇರಿಕೆʼ ಮಾಡುತ್ತಿದೆಯೆಂದು ಬೊಬ್ಬೆಯಿಡುವ ರಾಜ್ಯ ಸರ್ಕಾರ ರಾಜಕೀಯ ಲಾಭಕ್ಕಾಗಿ ಹಿಂಬಾಗಿಲ ಮೂಲಕ ಹಿಂದಿ ಮತ್ತು ಇಂಗ್ಲಿಷ್‌ ಭಾಷೆಗಳನ್ನು ಹೇರಿಕೆ ಮಾಡುವ ಕೆಲಸ ಮಾಡುತ್ತಿದೆಯೇ? ಎನ್ನುವ ಅನುಮಾನಗಳು ಹುಟ್ಟಿಕೊಂಡಿವೆ.

ಯುವಜನೋತ್ಸವ ಕಾರ್ಯಕ್ರಮದಲ್ಲಿ ಆಯೋಜಿಸಿದ್ದ ʼಕಥೆ ಬರೆಯುವ ಸ್ಪರ್ಧೆʼಯಲ್ಲಿ ದೆಹಲಿ ಮಟ್ಟದ ಆಯ್ಕೆಗೆ ಹಿಂದಿ ಮತ್ತು ಇಂಗ್ಲಿಷ್ ಕಥೆಗಳನ್ನು ಪರಿಗಣಿಸಿರುವುದು ವಿವಾದಕ್ಕೆ ಕಾರಣವಾಗಿದ್ದು, ರಾಜ್ಯ ಸರ್ಕಾರ ಕನ್ನಡ ಭಾಷೆಯ ಕತ್ತು ಹಿಸುಕುವ ಕೆಲಸ ಮಾಡುತ್ತಿದೆ ಎನ್ನುವ ಆಕ್ರೋಶ ವ್ಯಕ್ತವಾಗುತ್ತಿದೆ.

“ದಾವಣಗೆರೆಯಲ್ಲಿ ಜನವರಿ 5 ಮತ್ತು 6ರಂದು ಆಯೋಜಿಸಿದ್ದ ರಾಜ್ಯಮಟ್ಟದ ಯುವಜನೋತ್ಸವ ಕಾರ್ಯಕ್ರಮದಲ್ಲಿ ಕಥೆ ಬರೆಯುವ ಸ್ಪರ್ಧೆಯಲ್ಲಿ ದೆಹಲಿ ಮಟ್ಟದ ಆಯ್ಕೆಗೆ ಕೇವಲ ಹಿಂದಿ ಮತ್ತು ಇಂಗ್ಲಿಷ್ ಸ್ಪರ್ಧೆಗೆ ಅವಕಾಶ ನೀಡಲಾಗಿದೆ. ಇದು ಕನ್ನಡಾಸಕ್ತರ, ಕನ್ನಡಾಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ಸರ್ಕಾರದ ಕನ್ನಡಪರ ಕಾಳಜಿಯ ಬಗ್ಗೆ ಅನುಮಾನಗಳು ಮೂಡುತ್ತಿವೆ. ಇದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸೇರಿ ಕನ್ನಡಕ್ಕೆ ಮಾಡಿರುವ ದ್ರೋಹವಾಗಿದೆ” ಎಂಬುದು ಕನ್ನಡಿಗರ ಆರೋಪ.

Advertisements

“ಕನ್ನಡದ ಪರವಾಗಿ ಸರ್ಕಾರ ಕೆಲಸ ಮಾಡುವಂತಿದ್ದರೆ, ‘ಹಿಂದಿ ಮತ್ತು ಇಂಗ್ಲಿಷ್ʼನಲ್ಲಿ ನಾವು ಸ್ಪರ್ಧಿಗಳನ್ನು ಕಳುಹಿಸುವುದಿಲ್ಲ, ಕನ್ನಡದ ಸ್ಪರ್ಧಿಗಳನ್ನು ಮಾತ್ರ ಕಳುಹಿಸುತ್ತೇವೆ. ಇದಕ್ಕೆ ಅವಕಾಶ ಕೊಡಿ’ಯೆಂದು ಕೇಳುವ ಅವಕಾಶವಿತ್ತು. ಇಂತಹ ಮುಕ್ತ ಅವಕಾಶವೊಂದನ್ನು ಕಳೆದುಕೊಂಡು ಸರ್ಕಾರ ಕನ್ನಡಕ್ಕೆ ಮೋಸ ಮಾಡಿ ಹಿಂದಿ ಮತ್ತು ಇಂಗ್ಲಿಷ್ ಸ್ಪರ್ಧೆಗೆ ಅವಕಾಶ ನೀಡಿದೆ. ಇಷ್ಟಾದರೂ ಕನ್ನಡಿಗರ ಮೇಲೆ ಅನ್ಯ ಭಾಷೆಗಳು ಹೇರಿಕೆಯಾಗುತ್ತಿವೆಯೆಂದು ದೂರುವುದು ಎಷ್ಟು ಸರಿ” ಎನ್ನುವುದು ಕನ್ನಡಪರ ಹೋರಾಟಗಾರರ ಮಾತು.

“ಯುವಜನೋತ್ಸವದಲ್ಲಿ ರಾಜ್ಯದ ಯುವಕ, ಯುವತಿಯರಿಗೆ ಕಥೆ ಮತ್ತು ಕವನ ಬರೆಯುವ ಸ್ಪರ್ಧೆ ಏರ್ಪಡಿಸಲಾಗಿತ್ತು. ಇದರಲ್ಲಿ ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಕಥೆ, ಕವನ ಬರೆಯಲು ಅವಕಾಶ ಕೊಡಲಾಗಿತ್ತು. ಈ ವಿಚಾರವಾಗಿ ಅಲ್ಲಿನ ಅಧಿಕಾರಿಗಳಿಗೆ ಕೇಳಿದಾಗ ಅವರು, ʼಹಿಂದಿ, ಇಂಗ್ಲಿಷ್ ಮತ್ತು ಕನ್ನಡದಲ್ಲಿ ಬರೆಸಿದ್ದೇವೆ. ನಮ್ಮ ರಾಜ್ಯದಲ್ಲಿ ಮಾತ್ರ ಕನ್ನಡದಲ್ಲಿ ಬರೆದವರಿಗೆ ಬಹುಮಾನ ನೀಡುತ್ತೇವೆ. ಆದರೆ ದೆಹಲಿಯಲ್ಲಿ ಬರೆಯುವ ಮುಖ್ಯ ಸ್ಪರ್ಧೆಗೆ ಹಿಂದಿ ಮತ್ತು ಇಂಗ್ಲಿಷ್‌ ಭಾಷೆಗಳಲ್ಲಿ ಮಾತ್ರ ಬರೆಯಬೇಕಾಗುತ್ತದೆ. ಹಾಗಾಗಿ ಅವರನ್ನು ಆಯ್ಕೆ ಮಾಡಲಾಗುತ್ತದೆʼಯೆಂದು ಹೇಳಿದ್ದಾರೆ” ಎಂದರು.

ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಧರ್ಮ-ಜಾತಿ ದುರ್ಬಳಕೆ ಮಾಡುವವರಿಂದ ಯುವಜನತೆ ದೂರವಿರಬೇಕು: ಸಿಎಂ ಸಿದ್ದರಾಮಯ್ಯ

ಕರವೇ ಜಿಲ್ಲಾಧ್ಯಕ್ಷ ರಾಮೇಗೌಡ ಮಾತನಾಡಿ, “ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಕಥೆ ಬರೆದವರು ಮಾತ್ರ ದೆಹಲಿ ಮಟ್ಟಕ್ಕೆ ಆಯ್ಕೆಯಾಗುವುದಕ್ಕೆ ನಮ್ಮ ವಿರೋಧವಿದೆ. ರಾಜ್ಯದಲ್ಲಿರುವ ಎಲ್ಲ ಕೇಂದ್ರ ಸರ್ಕಾರಕ್ಕೆ ಒಳಪಟ್ಟಿರುವ ಇಲಾಖೆಗಳು ತ್ರಿಭಾಷೆ ಸೂತ್ರ ಅನುಸರಿಸುತ್ತವೆಯೆಂದು ರಾಜ್ಯ ಸರ್ಕಾರ ಬೊಬ್ಬೆ ಹೊಡೆಯುತ್ತದೆ. ಆದರೆ ದೆಹಲಿಯಲ್ಲಿ ಮಾತ್ರ ಯಾವ ಸೂತ್ರವೂ ಇಲ್ಲ. ದೆಹಲಿಯಲ್ಲಿ ಇಂಗ್ಲಿಷ್ ಮತ್ತು ಹಿಂದಿ ಎನ್ನುವುದಾದರೆ ನಮ್ಮ ರಾಜ್ಯದಲ್ಲಿ ನಾವು ಹಿಂದಿಯನ್ನು ಹೇಗೆ ಒಪ್ಪಿಕೊಳ್ಳಬೇಕು” ಎಂದು ಆಕ್ರೋಶ ಹೊರಹಾಕಿದರು.

“ಕನ್ನಡದ ಸ್ಪರ್ಧಿಯೊಬ್ಬರು ದೆಹಲಿಯ ಸ್ಪರ್ಧೆಯಲ್ಲಿ ಭಾಗವಹಿಸಿ ಕನ್ನಡದಲ್ಲಿ ಪರೀಕ್ಷೆ ಬರೆದು ಗೆದ್ದರೆ, ಕನ್ನಡದ ಕೀರ್ತಿ ಹೆಚ್ಚಲಿದೆ. ಕರ್ನಾಟಕಕ್ಕೆ ಮತ್ತೊಂದು ಹೆಮ್ಮೆಯ ಗರಿ ಬರುತ್ತದೆ. ಆದರೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗಳು ಇಂಥ ಕನ್ನಡ ದ್ರೋಹದ ಕೆಲಸ ಮಾಡಿವೆ.‌ ಇದರ ಬಗ್ಗೆ ಜನಪ್ರತಿನಿಧಿಗಳು ಧ್ವನಿ ಎತ್ತಬೇಕು, ಕೇಂದ್ರ ಸರ್ಕಾರದ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕನ್ನಡ ಭಾಷೆಗೂ ಮಾನ್ಯತೆ ಸಿಗುವಂತೆ ಒತ್ತಡ ತಂದು ಕನ್ನಡದಲ್ಲಿ ಸ್ಪರ್ಧೆಯನ್ನು ಎದುರಿಸುವಂತೆ ಮಾಡಬೇಕು” ಎಂದು ಆಗ್ರಹಿಸಿದರು.

“ಕನ್ನಡದ ಬಹಳಷ್ಟು ಅಧಿಕಾರಿಗಳಿರುವ ಜಿಲ್ಲಾಡಳಿತದಲ್ಲೂ ಕೂಡ ಕನ್ನಡ ಪ್ರಜ್ಞೆ ಮತ್ತು ಕನ್ನಡ ಭಾಷಾಜ್ಞಾನ ತಿಳಿದಿಲ್ಲವೇ ಎನ್ನುವುದು ಮತ್ತೊಂದು ಪ್ರಶ್ನೆಯಾಗಿದೆ. ರಾಜ್ಯಮಟ್ಟದ ಯುವಜನೋತ್ಸವ ಕಾರ್ಯಕ್ರಮದ ಉದ್ಘಾಟನೆಗಾಗಿ ಏರ್ಪಡಿಸಿದ್ದ ವೇದಿಕೆಯಲ್ಲಿ ವಿವಿಐಪಿಗಳಿಗೆ ಮೀಸಲಾಗಿದ್ದ ಆಸನಕ್ಕೆ ಬರುವ ದ್ವಾರದಲ್ಲಿ ಕನ್ನಡ ತರ್ಜುಮೆಯಲ್ಲಿ ʼವಿಶೇಷ ಆಹ್ವಾನಿತರುʼ ಬದಲಿಗೆ ʼವಿಶೇಷ ಅವನೀತರುʼ ಎಂಬುದಾಗಿ ತರ್ಜುಮೆ ಮಾಡಿ ಕನ್ನಡಕ್ಕೆ ಅವಮಾನ ಮಾಡಿದೆ. ಇದರಿಂದ ನಮ್ಮ ಜಿಲ್ಲಾಡಳಿತ ಕನ್ನಡ ಭಾಷಾ ಜ್ಞಾನದಲ್ಲಿ ಎಷ್ಟು ಬಡವಾಗಿದೆ ಎಂಬುದನ್ನು ಎತ್ತಿ ತೋರಿಸಿದೆ” ಎಂದರು.

ಈ ಸುದ್ದಿ ಓದಿದ್ದೀರಾ? ಮಂಡ್ಯ | ಹಿಂದಿ ಹೇರಿಕೆಗೆ ವಿರೋಧ; ರಾಜ್ಯ ಪಠ್ಯಕ್ರಮದಲ್ಲಿ ಹಿಂದಿ ಪಾಠಗಳನ್ನು ಕೈಬಿಡಲು ಒತ್ತಾಯ

“ನಮ್ಮ ರಾಜ್ಯಾಡಳಿತವೇ ಪರಭಾಷೆಯನ್ನು ಕನ್ನಡಿಗರ ಮೇಲೆ ಹೇರಿದಂತಾಗಿದೆ. ಬೇರೆ ಯಾರೋ ಹೇರಿದ್ದಲ್ಲ. ಕನ್ನಡ ಭಾಷೆಯ ಸ್ಪರ್ಧೆಯನ್ನು ಮೇಲ್ಮಟ್ಟಕ್ಕೆ ನಿರಾಕರಿಸಿರುವುದು ಕನ್ನಡಿಗರ ಅವಗಣನೆ ಮಾಡಿದಂತಾಗಿದೆ. ಕನ್ನಡಿಗರಾದ ನಮಗೆಲ್ಲರಿಗೂ ನೋವು ಕೊಡುವ ವಿಷಯವಿದು” ಎಂದು ಅಸಮಾಧಾನ ವ್ಯಕ್ತಪಡಿಸಿದರು.

“ಒಟ್ಟಿನಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಹಾಗೂ ಇಲಾಖೆಗಳೂ ಕೂಡ ಈ ಬಗ್ಗೆ ಗಮನ ಹರಿಸದೆ ಕನ್ನಡಕ್ಕೆ ದ್ರೋಹ ಮಾಡಿವೆ. ಮೇಲ್ಮಟ್ಟದ ಸ್ಪರ್ಧೆಗೆ ಹಿಂದಿ ಮತ್ತು ಇಂಗ್ಲಿಷ್ ಮಾತ್ರ ಬೇಕಾದರೆ ಕನ್ನಡ ಯಾಕೆ ಬೇಕು? ಎಂದು ಯುವಜನರಲ್ಲಿ ಅನಿಸುವುದು ಸಾಮಾನ್ಯವಾಗುತ್ತದೆ. ಮೊದಲು ಈ ಕನ್ನಡ ವಿರೋಧಿ ಧೋರಣೆಯನ್ನು ಬಿಟ್ಟು ದೆಹಲಿಯಲ್ಲಿ ನಡೆಯುವ ಸ್ಪರ್ಧೆ ಮತ್ತು ವಿವಿಧ ಪರೀಕ್ಷಾ ಸ್ಪರ್ಧೆಗಳನ್ನು ಕನ್ನಡಿಗರು ಕನ್ನಡದಲ್ಲಿಯೇ ಬರೆಯುವಂತಾಗಬೇಕು. ಈ ಬಗ್ಗೆ ಸರ್ಕಾರಗಳು ಕ್ರಮವಹಿಸಬೇಕು” ಎಂದು ಸಾರ್ವಜನಿಕರು ಹಾಗೂ ವಿಶೇಷವಾಗಿ ಕನ್ನಡಿಗರು ಒತ್ತಾಯಿಸಿದರು.

ವಿನಾಯಕ್
ವಿನಾಯಕ್ ಚಿಕ್ಕಂದವಾಡಿ
+ posts

ದಾವಣಗೆರೆ, ಚಿತ್ರದುರ್ಗ ಜಿಲ್ಲಾ ಸಂಯೋಜಕರು

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ವಿನಾಯಕ್ ಚಿಕ್ಕಂದವಾಡಿ
ವಿನಾಯಕ್ ಚಿಕ್ಕಂದವಾಡಿ
ದಾವಣಗೆರೆ, ಚಿತ್ರದುರ್ಗ ಜಿಲ್ಲಾ ಸಂಯೋಜಕರು

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

Download Eedina App Android / iOS

X