ಮುಂಬೈನ ಖಾರ್‌ನಲ್ಲಿರುವ ಬಾಲಿವುಡ್ ನಟಿ ಪೂನಂ ಧಿಲ್ಲೋನ್ ಮನೆಯಿಂದ ಸುಮಾರು ಒಂದು ಲಕ್ಷ ರೂಪಾಯಿಗೂ ಅಧಿಕ ಮೌಲ್ಯದ ‘ಡೈಮಂಡ್ ನೆಕ್ಲೇಸ್’ ಕಳ್ಳತನವಾಗಿದೆ ಎಂದು ವರದಿಯಾಗಿದೆ. ಖದೀಮರು ನಟಿಯ ಮನೆಯಲ್ಲಿದ್ದ 35,000 ರೂಪಾಯಿ ನಗದು ಮತ್ತು ಕೆಲವು ಡಾಲರ್‌ಗಳನ್ನು ಕೂಡಾ ಎಗರಿಸಿದ್ದಾರೆ ಎಂದು ವರದಿಯಾಗಿದೆ.
ಆರೋಪಿ 37 ವರ್ಷದ ಸಮೀರ್ ಅನ್ಸಾರಿ ಡಿಸೆಂಬರ್ 28ರಿಂದ ಜನವರಿ 5ರವರೆಗೆ ನಟಿಯ ನಿವಾಸಕ್ಕೆ ಬಣ್ಣ ಬಳಿಯುವ ಕಾರ್ಯವನ್ನು ಮಾಡುತ್ತಿದ್ದ ಎಂದು ಹೇಳಲಾಗಿದೆ. ಪೇಟಿಂಗ್ ಕಾರ್ಯ ಮಾಡುವ ಸಂದರ್ಭದಲ್ಲಿ ಬೀರುಗೆ ಬೀಗ ಹಾಕಿರದ್ದನ್ನು ನೋಡಿ ಕಳ್ಳತನ ಮಾಡಿದ್ದಾನೆ ಎಂದು ಹೇಳಲಾಗಿದೆ.
ಇದನ್ನು ಓದಿದ್ದೀರಾ? ಗರ್ಭಕಂಠ ಕ್ಯಾನ್ಸರ್ ಜಾಗೃತಿಗಾಗಿ ತನ್ನದೇ ಸಾವಿನ ಸುದ್ದಿ ಹರಡಿದ ನಟಿ ಪೂನಂ ಪಾಂಡೆ!
ನಟಿ ಜುಹುನಲ್ಲಿರುವ ತನ್ನ ನಿವಾಸದಲ್ಲಿ ವಾಸವಿದ್ದು, ಆಕೆಯ ಮಗ ಅನ್ಮೋಲ್ ಖಾರ್‌ನಲ್ಲಿರುವ ಮನೆಯಲ್ಲಿ ವಾಸಿಸುತ್ತಾನೆ. ನಟಿ ಹೆಚ್ಚಾಗಿ ಈ ನಿವಾಸದಲ್ಲಿ ಇರುವುದಿಲ್ಲ ಎಂದು ವರದಿಯಾಗಿದೆ.
‘ಡೈಮೆಂಡ್ ನೆಕ್ಲೇಸ್’ ಕಳ್ಳತನವಾಗಿರುವ ಬಗ್ಗೆ ಗಮನಕ್ಕೆ ಬಂದ ಬಳಿಕ ದೂರು ನೀಡಲಾಗಿದ್ದು, ಪೊಲೀಸರ ತನಿಖೆಯಲ್ಲಿ ಅನ್ಸಾರಿ ಬೀರು ತೆರೆದಿರುವುದನ್ನು ನೋಡಿ ಕಳ್ಳತನ ಮಾಡಿದ್ದಾನೆ ಎಂಬುದು ತಿಳಿದುಬಂದಿರುವುದಾಗಿ ವರದಿಯಾಗಿದೆ. ಇನ್ನು ಆರೋಪಿಯು ಕೊಂಚ ಹಣವನ್ನು ಇತರೆಡೆ ಖರ್ಚು ಮಾಡಿದ್ದಾನೆ ಎಂದು ತಿಳಿದುಬಂದಿದೆ.
ಪೂನಂ ಧಿಲ್ಲೋನ್ ರೆಡ್ ರೋಸ್, ಪ್ಲ್ಯಾನ್ ಎ ಪ್ಲ್ಯಾನ್ ಬಿ, ಜೈ ಮಮ್ಮಿ ದೀ ಮೊದಲಾದ ಸಿನಿಮಾಗಳಲ್ಲಿ ನಟಿಸಿದ್ದಾರೆ.
