ರಾಯಚೂರು ಜಿಲ್ಲೆಯ ನೂರಕ್ಕಿಂತ ಹೆಚ್ಚು ಅಂಗನವಾಡಿ ಕೇಂದ್ರಗಳಲ್ಲಿ ಮೂಲ ಸೌಕರ್ಯಗಳ ಕೊರತೆಯಿದ್ದು, ರಕ್ತಹೀನತೆ ಹಾಗೂ ಅಪೌಷ್ಟಿಕತೆ ಮುಕ್ತಗೊಳಿಸಿ ಸರ್ಕಾರ ಅಂಗನವಾಡಿ ಕೇಂದ್ರಗಳನ್ನು ಬಲಪಡಿಸಬೇಕು ಎಂದು ಒತ್ತಾಯಿಸಿ ರಾಜ್ಯ ಮಹಿಳಾ ಒಕ್ಕೂಟದಿಂದ ಜಿಲ್ಲಾಡಳಿತಕ್ಕೆ ಹಕ್ಕೊತ್ತಾಯ ಸಲ್ಲಿಸಿದರು.
ʼರಾಜ್ಯ ಮಹಿಳಾ ಒಕ್ಕೂಟವು ರಾಯಚೂರು ಜಿಲ್ಲೆಯ ಸುಮಾರು 100ಕ್ಕಿಂತ ಹೆಚ್ಚು ಅಂಗನವಾಡಿ ಕೇಂದ್ರಗಳಲ್ಲಿ ಸಮೀಕ್ಷೆ ಮಾಡಿದೆ. ಈ ಜಿಲ್ಲೆಯನ್ನು ರಕ್ತಹೀನತೆ ಮತ್ತು ಅಪೌಷ್ಟಿಕತೆಯಿಂದ ಮುಕ್ತಗೊಳಿಸಲು ನಾವು ಕಳೆದ 3 ವರ್ಷಗಳಿಂದ ಅಭಿಯಾನ ನಡೆಸುತ್ತಿದ್ದೇವೆ. ಆದರೆ ಸರ್ಕಾರ ಮುಕ್ತಗೊಳಿಸಲು ಯಾರೂ ಸಹಕರಿಸುತ್ತಿಲ್ಲʼ ಎಂದು ಆರೋಪಿಸಿದರು.
ʼಅಂಗನವಾಡಿ ಕೇಂದ್ರಗಳಲ್ಲಿ ಸುಸಜ್ಜಿತ ಕಟ್ಟಡಗಳಿಲ್ಲ. ಹೆಚ್ಚು ಅಂಗನವಾಡಿ ಕೇಂದ್ರಗಳು ಖಾಸಗಿ ಕಟ್ಟಡದಲ್ಲಿ ನಡೆಯುತ್ತಿವೆ. ಶೌಚಾಲಯ ಹಾಗೂ ನೀರಿನ ವ್ಯವಸ್ಥೆಯಿಲ್ಲದೆ ಅಂಗನವಾಡಿ ಕೇಂದ್ರಗಳು ಅಶುಚಿತತೆಯಿಂದ ಕೂಡಿವೆ. ಮಕ್ಕಳಿಗೆ ಆಹಾರವಾಗಿ ಪೌಷ್ಟಿಕಪುಡಿ ನೀಡುವುದರಿಂದ ಮಕ್ಕಳು ಮತ್ತು ಪೋಷಕರು ತುಂಬಾ ಅತೃಪ್ತರಾಗಿದ್ದಾರೆ. ಮಕ್ಕಳಿಗೆ ಸರಿಯಾದ ಆಹಾರ ನೀಡಬೇಕುʼ ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ತುಮಕೂರು | ಜ.12ರಂದು ಈ ದಿನ ನ್ಯೂಸ್ ಆ್ಯಪ್, ವಿಶೇಷ ಸಂಚಿಕೆ ಬಿಡುಗಡೆ
ʼಕೆಲವು ಸ್ಥಳಗಳಲ್ಲಿ ಅಂಗನವಾಡಿ ಶಿಕ್ಷಕಿ ಮತ್ತು ಸಹಾಯಕಿಯರ ಸಿಬ್ಬಂದಿ ಕೊರತೆಯಿಂದ ಮುಚ್ಚಿಹೋಗುವ ದಃಸ್ಥಿತಿ ಎದುರಾಗಿದೆ. ಹಾಗಾಗಿ ಸರ್ಕಾರ ಕೂಡಲೇ ಅಂಗನವಾಡಿ ಕೇಂದ್ರಗಳನ್ನು ಬಲಪಡಿಸಬೇಕು ಹಾಗೂ ಮೂಲ ಸೌಕರ್ಯ ಒದಗಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಬೃಹತ್ ಹೋರಾಟ ಮಾಡಲಾಗುವುದುʼ ಎಂದು ಎಚ್ಚರಿಕೆ ನೀಡಿದರು.
ಈ ವೇಳೆ ಗುರುರಾಜ, ವಿದ್ಯಾ ಪಾಟೀಲ್, ಚಂದ್ರಕಲಾ, ಮಲ್ಲಮ್ಮ, ಹನುಮೇಶ್, ಸಾವಿತ್ರಮ್ಮ, ರೇಣುಕಾ, ರಾಧಾ, ಬಸಮ್ಮ ಉಡುಮ ಗಲ್ ಸೇರಿದಂತೆ ಇತರರು ಇದ್ದರು.
