ಸೌತ್ ಇಂಡಿಯನ್ ಅಕಾಡೆಮಿ ಸಂಸ್ಥೆಯ 18ನೇ ವಾರ್ಷಿಕೋತ್ಸವದ ಪ್ರಯುಕ್ತ ಶಿವಮೊಗ್ಗ ನಗರದ ಬಿ ಎಚ್ ರಸ್ತೆಯಲ್ಲಿರುವ ತಮಿಳು ಶಾಲೆಯ 1 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಹಲವು ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ನಗರದ ಅಂಬೇಡ್ಕರ್ ಭವನದಲ್ಲಿ ಜನವರಿ 12ರಂದು ಸಂಜೆ 5 ಗಂಟೆಗೆ ಉಳಿದ ಕಾರ್ಯಕ್ರಮಗಳು ನಡೆಯಲಿವೆ.
ಈಗಾಗಲೇ ತಮಿಳು ಶಾಲೆಯ 1 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಮಡಿಕೆ ಹೊಡೆಯುವ ಸ್ಪರ್ಧೆ, ಪಿ ಪಿ ಹೊಡೆಯುವ ಸ್ಪರ್ಧೆ ಮತ್ತು ಪೊಂಗಲ್ ಅಡುಗೆ ಮಾಡುವ ಸ್ಪರ್ಧೆ, ಕಂಠಪಾಠ, ಕ್ರೀಡೆ, ತಿರುಕುರುಳ್ ಅಧ್ಯಯನ ಸ್ಪರ್ಧೆ ಸೇರಿದಂತೆ ಇತರ ಸ್ಪರ್ಧೆಗಳನ್ನು ನಡೆಸಿದ್ದಾರೆ.
ಪ್ರತಿ ವರ್ಷ ಹೀಗೆ ಅನೇಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿರುವ ಸಂಸ್ಥೆ ಈ ವರ್ಷ ಅನೇಕ ಕಾರ್ಯಕ್ರಮ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಅದೇ ರೀತಿ ಜನವರಿ 11ರಂದು ಮಹಿಳೆಯರಿಗೆ ರಂಗೋಲಿ ಹಾಗೂ ಸಂಪ್ರದಾಯಿಕ ಪೊಂಗಲ್ ಸ್ಪರ್ಧೆ ಇಟ್ಟುಕೊಂಡಿದೆ. ಜನವರಿ 12ರ ಸಂಜೆ 5ಕ್ಕೆ ಶಿವಮೊಗ್ಗದ ಅಂಬೇಡ್ಕರ್ ಭವನದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ತಮಿಳು ಚಲನಚಿತ್ರದ ಹಿನ್ನೆಲೆ ಗಾಯಕಿ “ಅಡ್ರಡ್ರಾ ನಾಕುಮುಖ” ಹಾಡಿನ ಪ್ರಖ್ಯಾತಿ ಕಲೆ ಮಾಮನಿ ‘ಚಿನ್ನ ಪೊನ್ನು’ರವರು ಮತ್ತು ತಂಡದವರಿಂದ ಸಂಗೀತ ರಸದೌತಣ ಕಾರ್ಯಕ್ರಮ ಏರ್ಪಡಿಸಲಾಗಿದೆ. ತಮಿಳಿನ ಖ್ಯಾತ ಹಾಸ್ಯ ನಟರಾದ ಜ಼ೀ ತಮಿಳು ಚಾನೆಲ್‌ನ ಪುಗುಳ್ ಎಡ್ವಿನ್ ತಂಡದಿಂದ ಹಾಸ್ಯ ಮಂಜರಿ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಬೀದರ್ | ಸಚಿನ್ ಪಾಂಚಾಳ್ ಆತ್ಮಹತ್ಯೆ ಪ್ರಕರಣ : ರಾಜು ಕಪನೂರ್ ಸೇರಿ ಐವರ ಬಂಧನ
ಈ ಒಂದು ಕಾರ್ಯಕ್ರಮಕ್ಕೆ ಎಲ್ಲ ತಮಿಳು ಸಮುದಾಯದವರು ಭಾಗವಹಿಸುವಂತೆ ಕೋರಲಾಗಿದೆ. ಕಾರ್ಯಕ್ರಮಕ್ಕೆ ಉಚಿತ ಪ್ರವೇಶವಿರಲಿದೆ ಎಂದು ತಿಳಿಸಿದ್ದಾರೆ.
ಈ ಕಾರ್ಯಕ್ರಮದ ಆಯೋಜಕರು ಹಾಗೂ ತಮಿಳು ಸಮುದಾಯದ ಮುಖಂಡರು ಇಂದಿನ ಕಾರ್ಯಕ್ರಮದಲ್ಲಿ ಸೌತ್ ಇಂಡಿಯನ್ ಅಕಾಡೆಮಿ ಅಧ್ಯಕ್ಷ ದೊರೆ ಚಿನ್ನಪ್ಪ ಮತ್ತು ಪ್ರಧಾನ ಕಾರ್ಯದರ್ಶಿ ಆನಂದ್ ಎ ಎನ್ ನೇತೃತ್ವದಲ್ಲಿ ತಮಿಳು ಸಂಘದ ಸದಸ್ಯರು ಹಾಗೂ ಮುಖಂಡರುಗಳಾದ ಶಂಕರ್ ಭೂಪಾಲ್, ರವಿ ಆಚಾರ್, ಬುಲೆಟ್ ಮುರುಗನ್, ಮಸ್ತಾನ್, ಕುಮರೇಶ್, ಉದಯ್ ಇರಲಿದ್ದಾರೆ.