ಈ ಹಿಂದೆ, ‘ನಾನು ಜೈವಿಕವಾಗಿ ಹುಟ್ಟಿಲ್ಲ. ದೇವರ ಕೃಪೆಯಿಂದ ಜನಿಸಿದ್ದೇನೆ’ ಎಂದು ತಮ್ಮನ್ನು ತಾವು ದೇವಮಾನವನೆಂದು ಕರೆದುಕೊಂಡಿದ್ದ ಪ್ರಧಾನಿ ಮೋದಿ, ಈಗ ತಮ್ಮ ಮಾತು ಬದಲಿಸಿದ್ದಾರೆ. ತಾವೂ ಜೈವಿಕವಾಗಿಯೇ ಹುಟ್ಟಿರುವುದಾಗಿಯೂ, ತಮ್ಮಿಂದಲೂ ತಪ್ಪುಗಳಾಗುತ್ತವೆ ಎಂದೂ ಹೇಳಿದ್ದಾರೆ.
‘ಪೀಪಲ್ ಬೈ ಡಬ್ಲ್ಯೂಟಿಎಫ್’ ಚಾನೆಲ್‌ನ ಸಹ ಸಂಸ್ಥಾಪಕ ನಿಖಿಲ್ ಕಾಮತ್ ಅವರ ಜೊತೆ ಪಾಡ್‌ಕ್ಯಾಸ್ಟ್‌ನಲ್ಲಿ ಮೋದಿ ಮಾತನಾಡಿದ್ದಾರೆ.
ಸಂಭಾಷಣೆಯ ಸಮಯದಲ್ಲಿ, ಪ್ರಧಾನಿ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಮಾಡಿದ ಹಿಂದಿನ ಭಾಷಣವನ್ನು ನೆನಪಿಸಿಕೊಂಡರು, “ನಾನು ಮುಖ್ಯಮಂತ್ರಿ (ಗುಜರಾತ್) ಆಗಿದ್ದಾಗ, ನನ್ನ ಒಂದು ಭಾಷಣದಲ್ಲಿ ಹೇಳಿದ್ದೆ; ಮೊದಲನೆಯದಾಗಿ, ನನ್ನ ಪ್ರಯತ್ನಗಳಲ್ಲಿ ಯಾವುದೇ ಒಂದು ಸಣ್ಣ ಕಲ್ಲನ್ನು ಬಿಡುವುದಿಲ್ಲ. ಎರಡನೆಯದಾಗಿ, ನಾನು ನನಗಾಗಿ ಏನನ್ನೂ ಮಾಡಿಕೊಳ್ಳುವುದಿಲ್ಲ. ಮೂರನೆಯದಾಗಿ, ನಾನು ಮನುಷ್ಯ, ನಾನು ತಪ್ಪುಗಳನ್ನು ಮಾಡಬಹುದು. ಆದರೆ, ನಾನು ಕೆಟ್ಟ ಉದ್ದೇಶದಿಂದ ತಪ್ಪುಗಳನ್ನು ಮಾಡುವುದಿಲ್ಲ. ಇವುಗಳನ್ನು ನನ್ನ ಜೀವನದ ಮಂತ್ರಗಳನ್ನಾಗಿ ಮಾಡಿಕೊಂಡಿದ್ದೇನೆ” ಎಂದು ಹೇಳಿದ್ದಾರೆ.
Meri jo risk taking capacity hai, uska
— Mohit Chauhan (@mohitlaws) January 10, 2025
to abhi full utilisation huya hi nahi.💀
God save my nation from this man😭pic.twitter.com/nSyFvMGyS0
“ನಾನು ಅಸಂವೇದನಾಶೀಲವಾಗಿ ಏನೋ ಹೇಳಿದೆ. ತಪ್ಪುಗಳು ಸಂಭವಿಸುತ್ತವೆ. ನಾನು ಮನುಷ್ಯ, ದೇವರಲ್ಲ” ಎಂದು ಮೋದಿ ಹೇಳಿದ್ದಾರೆ.
ಇದೇ ಮೋದಿ ಅವರು ಲೋಕಸಭಾ ಚುನಾವಣೆಯ ಸಮಯದಲ್ಲಿ ನಡೆದಿದ್ದ ಸಂದರ್ಶನವೊಂದರಲ್ಲಿ, ತಾವು ಜೈವಿಕವಲ್ಲ, ದೇವರೇ ನನ್ನನ್ನು ಕಳುಹಿಸಿಕೊಟ್ಟಿದ್ದಾನೆಂದು ಭಾವಿಸಿದ್ದೇನೆ ಎಂದು ಹೇಳಿದ್ದರು. ಈಗ, ತಾವು ಜೈವಿಕವಾಗಿ ಹುಟ್ಟಿರುವುದಾಗಿಯೂ, ದೇವರಲ್ಲವೆಂದೂ, ತಾವವೂ ತಪ್ಪುಗಳನ್ನು ಮಾಡುವುದಾಗಿಯೂ ಹೇಳಿಕೊಂಡಿದ್ದಾರೆ.
This from a man who proclaimed his non-biological status just eight months back. This is clearly damage control pic.twitter.com/hBPp5QJl0Y
— Jairam Ramesh (@Jairam_Ramesh) January 10, 2025
ಮೋದಿ ಅವರ ಎರಡು ರೀತಿಯ ಹೇಳಿಕೆಗಳ ಬಗ್ಗೆ ಕಾಂಗ್ರೆಸ್ ವ್ಯಂಗ್ಯವಾಡಿದೆ. ಮೋದಿ ಅವರ ಹಳೆಯ ವಿಡಿಯೋ ಮತ್ತು ಈಗಿನ ವಿಡಿಯೋವನ್ನು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, “ಇದು ಕೇವಲ ಎಂಟು ತಿಂಗಳ ಹಿಂದೆ ತಮ್ಮ ಜೈವಿಕವಲ್ಲದ ಸ್ಥಿತಿಯನ್ನು ಘೋಷಿಸಿದ್ದ ವ್ಯಕ್ತಿಯ ವಿಡಿಯೋ. ಈಗ ಅವರು ತಾವು ಜೈವಿಕವಾಗಿ ಜನಿಸಿದ್ದಾಗಿ ಹೇಳುತ್ತಿದ್ದಾರೆ. ಅವರು ‘ಡ್ಯಾಮೆಜ್ ಕಂಟ್ರೋಲ್’ಗೆ ಯತ್ನಿಸುತ್ತಿದ್ದಾರೆ” ಎಂದು ಟೀಕಿಸಿದ್ದಾರೆ.