ಸ್ವಾಮಿ ವಿವೇಕಾನಂದ ಪ್ರೌಢಶಾಲೆಯ ವಾರ್ಷಿಕೋತ್ಸವ ಪ್ರಯುಕ್ತ ಶ್ರೀರಾಮನಗರದ ಸ್ವಾಮಿ ವಿವೇಕಾನಂದ ಆಂಗ್ಲ ಮಾದ್ಯಮ ಶಾಲೆಯ 31ನೇ ವಾರ್ಷಿಕೋತ್ಸವ ಹಾಗೂ ರಾಷ್ಟ್ರೀಯ ಯುವ ದಿನಾಚರಣೆಯ ಅಂಗಗವಾಗಿ ಯುವಜನ ರಕ್ಷಣೆ, ರಾಷ್ಟ್ರೀಯ ರಕ್ಷಣೆ ಅಡಿಯಲ್ಲಿ ಶಾಲೆಯ ಸಾವಿರಾರು ವಿದ್ಯಾರ್ಥಿಗಳು ಜಾಗೃತಿ ಜಾಥಾ ನಡೆಸಿದರು.
ಜಗನಾಥ್ ಆಲಂಪಲ್ಲಿ ಮಾತನಾಡಿ, “ಸ್ವಾಮಿ ವಿವೇಕಾನಂದರ ಆಶಯದಂತೆ ಸಮೃದ್ಧ ರಾಷ್ಟ್ರ ನಿರ್ಮಾಣದಲ್ಲಿ ಯುವಜನರ ಪಾತ್ರ ಅತ್ಯಂತ ಮಹತ್ವವಾದದ್ದು. ಈ ಹಿನ್ನೆಲೆಯಲ್ಲಿ ಪ್ರಸ್ತುತ ದಿನಮಾನಗಳಲ್ಲಿ ಯುವ ಜನತೆ ಧೂಮಪಾನ, ಮದ್ಯಪಾನ, ಮಾದಕ ವ್ಯಸನ, ತಂಬಾಕು ವ್ಯಸನ ಸೇರಿದಂತೆ ದುಶ್ಚಚಟಗಳಿಗೆ ಮಾರುಹೋಗುತ್ತಿರುವುದು ಅತ್ಯಂತ ಆತಂಕಕಾರಿ ಬೆಳವಣಿಯಾಗಿದೆ. ರಾಷ್ಟ್ರೀಯ ಯುವ ದಿನಾಚರಣೆ ಪ್ರಯುಕ್ತ ʼಯುವಜನ ರಕ್ಷಿಸಿ, ರಾಷ್ಟ್ರೀಯ ಯುವಕರನ್ನು ಎಚ್ಚರಿಸಿʼ ಎಂಬ ಸಂದೇಶದ ಅಡಿಯಲ್ಲಿ ಜಾಗೃತಿ ಜಾಥಾದ ಮೂಲಕ ಎಚ್ಚರಿಸಲಾಗುವುದು” ಎಂದು ತಿಳಿಸಿದರು.
ಪ್ರಿಯಾ ಕುಮಾರಿ ಮಾತನಾಡಿ, “ಸಮೃದ್ಧ ಭಾರತದ ನಿರ್ಮಾಣದಲ್ಲಿ ಯುವಜನರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಯುವಜನರು ದುಶ್ಚಟಗಳಿಗೆ ಬಲಿಯಾಗದೆ, ಉತ್ತಮ ಸಂಸ್ಕಾರಗಳನ್ನು ಬೆಳೆಸಿಕೊಂಡು ರಾಷ್ಟ್ರದ ಸರ್ವತೋಮುಖ ಅಭಿವೃದ್ಧಿಗೆ ಮುಂದಾಗಬೇಕು” ಎಂದು ಕರೆ ನೀಡಿದರು.
ಈ ಸುದ್ದಿ ಓದಿದ್ದೀರಾ? ತುರುವೇಕೆರೆ | ದಲಿತರ ಹೋರಾಟಕ್ಕೆ ಕೊನೆಗೂ ಜಯ: ಅಂಬೇಡ್ಕರ್ ಭವನದ ಒತ್ತುವರಿ ಜಾಗ ಕಬಳಿಸಿ ಕಟ್ಟಿದ್ದ ಕಟ್ಟಡ ತೆರವು
ಶಾಲೆಯ ವಿದ್ಯಾರ್ಥಿಗಳು ವಿವಿಧ ಘೋಷಣೆಗಳನ್ನು ಕೂಗುತ್ತ ಡಾ.ಪುನೀತ್ ರಾಜಕುಮಾರ್ ವೃತ್ತದ ಬಳಿ ಹಾಡು ನೃತ್ಯ ಮೂಲಕ ವಿಶೇಷ ಗಮನ ಸೆಳೆದರು.
ಜಗನ್ನಾಥ ಆಲಂಪಲ್ಲಿ, ಪಾರ್ಥ ಸಾರಥಿ, ಪ್ರಿಯಕುಮಾರಿ, ಪ್ರಭಾಕರ್ ಚಿನ್ನು ಪಾಟಿ, ಮಹಮ್ಮದ್ ರಫಿ, ಶಾರುಣ್ ಕುಮಾರಿ ಸೇರಿದಂತೆ ಮುಂತಾದವರು ಇದ್ದರು.