ಕೊಪ್ಪಳ ಜಿಲ್ಲೆಯ ಗಂಗಾವತಿ ಪಟ್ಟಣದ ಬಸ್ ನಿಲ್ದಾಣದಲ್ಲಿ ʼಶುದ್ಧ ಕುಡಿಯುವ ನೀರಿನ ಘಟಕʼ ನಿರ್ಮಾಣ ಮಾಡಲಾಗಿದ್ದು, ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ನಗರಸಭೆ, ಪೊಲೀಸ ಇಲಾಖೆ, ಕಲ್ಯಾಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಕೊಪ್ಪಳ ವಿಭಾಗ ಗಂಗಾವತಿ ಘಟಕದ ಸಂಯುಕ್ತಾಶ್ರಯದಲ್ಲಿ ಉದ್ಘಾಟನೆ ಮಾಡಲಾಯಿತು.
ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸದಾನಂದ ನಾಗಪ್ಪ ನಾಯ್ಕ ಮಾತನಾಡಿ, “ಭೂಮಿಯ ಆಳದಲ್ಲಿ ಅಂತರ್ಜಲ ಕುಸಿಯುತ್ತಿದ್ದು, ವಿಪರೀತ ಕೊಳವೆ ಬಾವಿ ಕೊರೆಸುತ್ತಿರುವುದು ಇದಕ್ಕೆ ಮುಖ್ಯ ಕಾರಣವಾಗಿದೆ. ಇದರಿಂದ ನೀರು ಪ್ಲೋರೈಡ್ ಯುಕ್ತವಾಗಿದ್ದು, ಇಂತಹ ನೀರು ಸೇವನೆಯಿಂದ ಆರೋಗ್ಯ ಸಮಸ್ಯೆ ಉಂಟಾಗುತ್ತದೆ. ಹೆಚ್ಚು ಸೋಸಿ ಕುಡಿಯುವದರಿಂದ ಆರೋಗ್ಯಕ್ಕೆ ಒಳ್ಳೆಯದು. ನಮ್ಮ ಹಿರಿಯರಲ್ಲಿ ಸುಳ್ಳು ನಂಬಿಕೆಯಿದೆ. ಸೋಸಿದ ನಿರು ಕುಡಿಯುವದರಿಂದಲೇ ಕೈ, ಕಾಲು ನೋವು ಬರುವುದು ಅಂತ. ಆದರೆ, ಅದು ಶುದ್ಧ ಸುಳ್ಳು ಇಂತಹ ಅವೈಜ್ಞಾನಿಕ ತಪ್ಪು ಕಲ್ಪನೆಯಿಂದ ಹೊರಬಂದು ಶುದ್ಧವಾದ ನೀರು ಸೇವಿಸಿ ಆರೋಗ್ಯ ಕಾಪಾಡಿಕೊಳ್ಳೊಣ್ಣ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಕೊಪ್ಪಳ | ಮೇಲಧಿಕಾರಿಗಳೊಂದಿಗೆ ದುರ್ನಡತೆ; ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವಿಜಯ ಪ್ರಸಾದ್ ಅಮಾನತು
ಗಂಗಾವತಿಯ ಹಿರಿಯ ಸಿವಿಲ್ ಅಧ್ಯಕ್ಷ ರಮೇಶ್ ಗಾಣಿಗೇರ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ನಾಗೇಶ ಪಾಟೀಲ, ಪೊಲೀಸ್ ಉಪ ವಿಭಾಗ ಅಧಿಕಾರಿ ಸಿದ್ಧಲಿಂಗಪ್ಪಗೌಡ ಪಾಟೀಲ್, ಕೊಪ್ಪಳ ಕೆಕೆಆರ್‌ಎಸ್ ವಿಭಾಗೀಯ ನಿಯಂತ್ರಣಾಧಿಕಾರಿ ವೆಂಕಟೇಶ ಎಂ, ನಗರಸಭೆ ಪೌರಯುಕ್ತ ಆರ್ ವಿರುಪಾಕ್ಷಮೂರ್ತಿ, ವಕೀಲರ ಸಂಘದ ಅಧ್ಯಕ್ಷ ಶರಣಬಸಪ್ಪ ನಾಯಕ, ಗಂಗಾವತಿ ಕೆಕೆಆರ್‌ಎಸ್ ಘಟಕ ವ್ಯವಸ್ಥಾಪಕ ರಾಜಶೇಖರ ಅಣ್ಣಿಗೇರಿ, ಪೊಲೀಸ್ ಇನ್‌ಸ್ಪೆಕ್ಟರ್ ಪ್ರಕಾಶ ಮಾಳೆ ಸೇರಿದಂತೆ ಬಹುತೇಕರು ಇದ್ದರು.