ಕೋಮು ದ್ವೇಷವನ್ನು ಪ್ರಚೋದಿಸುವ ಹೇಳಿಕೆಯನ್ನು ನೀಡಿದ ಕೇರಳ ಬಿಜೆಪಿ ನಾಯಕ ಪಿಸಿ ಜಾರ್ಜ್ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಶನಿವಾರ ಪೊಲೀಸರು ತಿಳಿಸಿದ್ದಾರೆ. ಈ ವಾರದ ಆರಂಭದಲ್ಲಿ ಮಾಧ್ಯಮವೊಂದರಲ್ಲಿ ನಡೆದ ಚರ್ಚೆ ವೇಳೆ ಪಿಸಿ ಜಾರ್ಜ್ ಅಲ್ಪಸಂಖ್ಯಾತ ಸಮುದಾಯದ ವಿರುದ್ಧ ದ್ವೇಷ ಭಾಷಣ ಮಾಡಿದ ಆರೋಪವನ್ನು ಹೊತ್ತಿದ್ದಾರೆ.
ಮುಸ್ಲಿಂ ಯೂತ್ ಲೀಗ್ ಮುನ್ಸಿಪಲ್ ಸಮಿತಿ ಈ ಬಗ್ಗೆ ದೂರು ಸಲ್ಲಿಸಿದ್ದು, ಇದರ ಆಧಾರದಲ್ಲಿ ಎರಟ್ಟುಪೆಟ್ಟ ಪೊಲೀಸರು ಶುಕ್ರವಾರ ಬಿಜೆಪಿ ನಾಯಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಬಿಎನ್‌ಎಸ್‌ನ ವಿವಿಧ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಶೀಘ್ರದಲ್ಲೇ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ‘ದ್ವೇಷ ಭಾಷಣ’ದ ಆಪಾದಿತರು ಹೈಕೋರ್ಟ್ ಜಡ್ಜ್ ಆಗಬಹುದೇ?
ಈ ನಡುವೆ ಜಾರ್ಜ್ ವಿರುದ್ಧದ ಪೊಲೀಸ್ ಪ್ರಕರಣವನ್ನು ಬಿಜೆಪಿ ಖಂಡಿಸಿದೆ. ಕೇರಳ ಬಿಜೆಪಿ ಉಸ್ತುವಾರಿ ಪ್ರಕಾಶ್ ಜಾವೇಡ್ಕರ್, “ಇದು ಎಲ್‌ಡಿಎಫ್ ಸರ್ಕಾರದ ರಾಜಕೀಯ ದ್ವೇಷ. ಸಿಪಿಐಎಂ ನೇತೃತ್ವದ ಎಡಪಂಥೀಯ ಸರ್ಕಾರ ಹಮಾಸ್ ವಿರುದ್ಧ ಒಂದು ಮಾತನ್ನೂ ಆಡುವುದಿಲ್ಲ” ಎಂದು ಆರೋಪಿಸಿದರು.
FIR against PC George is political vendetta by LDF government, which doesn’t say a word against Hamas and admits PDF followers into their fold.
— Prakash Javadekar (@PrakashJavdekar) January 11, 2025
UDF is also guilty of appeasement of extremist politics.
It never appreciated ban on PDF or condemned Hamas.
PC George has already…
ಇನ್ನು ಜಾರ್ಜ್ ಸಮರ್ಥನೆ ಮಾಡಿರುವ ಜಾವೇಡ್ಕರ್, “ಉಗ್ರವಾದಕ್ಕೆ ವಿರೋಧ ವ್ಯಕ್ತಪಡಿಸುವುದೇ ನಮ್ಮ ಉದ್ದೇಶವಾಗಿತ್ತು. ಯಾವುದೇ ಸಮುದಾಯವನ್ನು ಗುರಿಯಾಗಿಸುವುದು ಅಲ್ಲ ಎಂದು ಈಗಾಗಲೇ ಜಾರ್ಜ್ ಸ್ಪಷ್ಟಪಡಿಸಿದ್ದಾರೆ” ಎಂದು ಹೇಳಿದರು.
ಇನ್ನು ಪಿಸಿ ಜಾರ್ಜ್ ಇದೇ ಮೊದಲ ದ್ವೇಷ ಭಾಷಣ ಮಾಡಿರುವುದಲ್ಲ. ಈ ಹಿಂದೆಯೂ ಜಾರ್ಜ್ ವಿರುದ್ಧ ಪ್ರಕರಣಗಳು ದಾಖಲಾಗಿವೆ. 2022ರಲ್ಲಿ ಮುಸ್ಲಿಂ ಸಮುದಾಯದ ಬಗ್ಗೆ ದ್ವೇಷ ಭಾಷಣ ಮಾಡಿದ ಜಾರ್ಜ್ ಬಂಧನವಾಗಿತ್ತು. ಜಾಮೀನಿನಿಂದ ಹೊರಬಂದ ಬಳಿಕ ಮತ್ತೆ ದ್ವೇಷ ಭಾಷಣ ಮಾಡಿದ್ದರು.
