ಸರ್ಕಾರಿ ಆಸ್ಪತ್ರೆಗೆ ಬರುವವರ ಆರೋಗ್ಯದ ಬಗೆಗೆ ಗಂಭೀರವಾಗಿ ಪರಿಗಣಿಸಿದಿದ್ದರೆ ಅಂತಹ ಅಧಿಕಾರಿಗಳ ವಿರುದ್ದ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಕೆಡಿಪಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆರ್. ಬಿ. ತಿಮ್ಮಾಪುರ ಹೇಳಿದರು.
ಬಾಗಲಕೋಟೆ ಪಟ್ಟಣದ ಡಾ. ಬಿ. ಆರ್. ಅಂಬೇಡ್ಕರ್ ಹಾಗೂ ಡಾ. ಜಗಜೀವ್ನ್ ರಾಂ ಸಮುದಾಯ ಭವನದಲ್ಲಿ ಜರುಗಿದ ಕೆಡಿಪಿ ಸಭೆಯಲ್ಲಿ ಮಾತನಾಡಿದರು.
“ಸರ್ಕಾರಿ ಆಸ್ಪತ್ರೆಗಿಂತ ಖಾಸಗಿ ಆಸ್ಪತ್ರೆಯಲ್ಲಿಯೇ ಹೆಚ್ಚು ಹೆರಿಗೆಗಳಾಗುತ್ತಿವೆ. ಖಾಸಗಿ ಆಸ್ಪತ್ರೆಯಲ್ಲಿ ಸಹಜ ಹೆರಿಗೆಗಿಂತ ಶಸ್ತ್ರಚಿಕೆತ್ಸೇ ಮೂಲಕ ಹೆರಿಗೆ ಹೆಚ್ಚಾಗುತ್ತಿವೆ” ಎಂದು ತಾಲ್ಲೂಕು ವೈದ್ಯಧಿಕಾರಿ ಡಾ. ಅಶೋಕ ಸೋರ್ವವಂಶಿ ಅವರನ್ನು ಪ್ರಶ್ನಿಸಿದಾಗ ನಮಗೆ ಸಿಬ್ಬಂದಿ ಕೊರೆತೆಯಿಂದ ಹೀಗೆ ಆಗುತ್ತಿದೆ ಎಂದು ಸಭೆಗೆ ಮಾಹಿತಿ ನೀಡಿದರು.
“ನೀವು ನಿಷ್ಕಳಾಜಿಯಿಂದ ಕೆಲಸ ಮಾಡಿದರೆ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ. ನಿಮ್ಮ ಜವಾಬ್ದಾರಿಯಿಂದ ನಾವು ಜನರಿಗೆ ಏನೂ ಉತ್ತರ ನೀಡಬೇಕು” ಎಂದು ಸಚಿವ ತಿಮ್ಮಾಪುರ ಆಕ್ರೋಶ ಹೊರಹಾಕಿದರು.
ಆಹಾರ ಇಲಾಖೆ ಶಿರಸ್ತೇದಾರ ಡಿ. ಬಿ. ದೇಶಪಾಂಡೆ ಮಾತನಾಡಿ, “ತಾಲೂಕಿನಲ್ಲಿ ಬಿಪಿಎಲ್ ಕಾರ್ಡ್ ಐವತೈದು ಸಾವಿರ ಇವೆ. 2011 ರ ಜನಗಣತಿ ಪ್ರಕಾರ ಅರವತ್ತೇರಡು
ಸಾವಿರ ಕುಟುಂಬಗಳಿದ್ದು, ಎಪ್ಪತೊಂದು ಸಾವಿರ ಪಡಿತರ ಚೀಟಿಗಳಿವೆ ಎಂದಾಗ, ಮನೆಯಲ್ಲಿ ಹೆಚ್ಚುವರಿ ಜನರು ಕಾರ್ಡ್ ಮಾಡಿಕೊಂಡಿದ್ದರ ಪರಿಣಾಮ ಚೀಟಿಗಳು ಹೆಚ್ಚಾಗಿವೆ. ಅದನ್ನು ಸರಿಪಡಿಸಬೇಕು” ಎಂದು ಸೂಚಿಸದರು.
ತಹಶೀಲ್ದಾರ ಮಹಾದೇವ ಸಣಮರಿ ಮಾತನಾಡಿ, “ತಾಲೂಕಿನಲ್ಲಿ ಆರವತ್ತನಾಲ್ಕು ಎಕರೆ ಅತಿಕ್ರಮಣ ಜಾಗವಿದೆ. ನಗರಸಭೆ ವ್ಯಾಪ್ರಿಯಲ್ಲಿ ಮೂರು ಎಕರೆ ಕೆರೆಗಳ ಪೈಕಿ ಎರಡು ಕೆರೆ ಅತಿಕ್ರಮಣವಾಗಿವೆ. ಅತಿಕ್ರಮಣ ಜಾಗದಲ್ಲಿ ನೂರಾರು ಕುಟುಂಬಗಳು ವಾಸವಾಗಿವೆ. ಅದನ್ನು ಸರ್ವೆ ಮಾಡಿದ್ದೇವೆ” ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಉಪ ವಿಭಾಗಾಧಿಕಾರಿ ಶ್ವೇತಾ ಬೇಡಕರ, ತಾಲೂಕು ಪಂಚಾಯಿತಿ ಉಸ್ತುವಾರಿ ಅಧಿಕಾರಿ ಉಕ್ಕಲಿ, ಕೃಷ್ಣ ಮೇಲ್ದಂಡೆ ಯೋಜನೆ ಹೆಚ್ಚುವರಿ ಜಿಲ್ಲಾಧಿಕಾರಿ ರಜಪೂತ, ತಾಲೂಕು ಪಂಚಾಯಿತಿ ಇಓ ಉಮೇಶ್ ಸಿದ್ದಾಳ್, ಕೆಡಿಪಿ ನಾಮ ನಿರ್ದೇಶಕ ಸದಸ್ಯರಾದ ಮುತ್ತಪ್ಪ ಗಣಿ, ಬಸವರಾಜ ಹುಗ್ಗಿ, ಸುರೇಶ ಕುರಿ, ಅಮಜದ್ಖಾನ್ ಜಮಾದಾರ, ರೇಣುಕಾ ತುಬಾಕೆ ಉಪಸ್ಥಿತರಿದ್ದರು.