ಪಬ್ಲಿಕ್ ಟಿವಿಯ ಶಿವಮೊಗ್ಗ ಜಿಲ್ಲಾ ಪತ್ರಕರ್ತ ಶಶಿಧರ್ ನಿಧನರಾಗಿದ್ದು, ಕಳೆದ ಎರಡು ವರ್ಷದಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು. ಇಂದು ಮೆದುಳು ನಿಷ್ಕ್ರಿಯೆಗೆ ಒಳಗಾಗಿ ಮೃತಪಟ್ಟಿದ್ದಾರೆ.
ಮೃತ ಶಶಿಧರ್(39) ಮ್ಯಾಕ್ಸ್ ಆಸ್ಪತ್ರೆಯಲ್ಲಿ ಇಂದು 5:45ರ ಸುಮಾರಿಗೆ ನಿಧನರಾಗಿದ್ದು, ಪತ್ನಿ, ತಮ್ಮ, ತಂದೆ-ತಾಯಿಯನ್ನು ಅಗಲಿದ್ದಾರೆ. ಸರಳ ಸ್ನೇಹಜೀವಿಯಾಗಿದ್ದ ಶಾಂತ ಸ್ವಭಾವದ ಶಶಿಧರ್ ಅಗಲಿಕೆ ಇಡೀ ಶಿವಮೊಗ್ಗ ಜಿಲ್ಲಾ ಪತ್ರಕರ್ತ ಮಿತ್ರರಲ್ಲಿ ತೀವ್ರ ದುಃಖ ತರಿಸಿದೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ಭತ್ತದ ಹೊಟ್ಟು ಸಾಗಾಟ; ಚಾಲಕನ ನಿಯಂತ್ರಣ ತಪ್ಪಿ ಹೋಟೆಲ್‌ಗೆ ನುಗ್ಗಿದ ಲಾರಿ
ಅವರ ಪತ್ನಿ ಹಾಗೂ ಕುಟುಂಬಕ್ಕೆ ಶಶಿಧರ್ ಸಾವಿನ ನೋವನ್ನು ತಡೆದುಕೊಳ್ಳುವ ಶಕ್ತಿಯನ್ನು ಆ ಭಗವಂತ ನೀಡಲಿ ಎಂದು ಪತ್ರಕರ್ತ ಮಿತ್ರರು ಸಂತಾಪ ಸೂಚಿಸಿದ್ದಾರೆ.