ಕೊಪ್ಪಳ | ಕೋಮುವಾದ, ಜಾತಿವಾದದಿಂದ ದೇಶ ತತ್ತರಿಸಿದೆ: ರಾಜ ನಾಯ್ಕ

Date:

Advertisements

ಕೋಮುವಾದ, ಜಾತಿವಾದದಿಂದ ದೇಶ ತತ್ತರಿಸಿದೆ. ಯುವಜನ, ವಿದ್ಯಾರ್ಥಿ ಸಂಘಟನೆಗಳ ಕ್ರಿಯಾಶೀಲತೆಯಿಂದ ದೇಶದ ಗಂಡಾಂತರಗಳನ್ನು ಹೋಗಲಾಡಿಸಬೇಕಿದೆ ಎಂದು ಕರ್ನಾಟಕ ವಿದ್ಯಾರ್ಥಿ ಸಂಘಟನೆಯ ರಾಜ ನಾಯ್ಕ ಅಭಿಪ್ರಾಯಪಟ್ಟರು.

ವಿದ್ಯಾರ್ಥಿಗಳು ಸಂಘಟನಾತ್ಮಕವಾಗಿ ಬೆಳೆಯಲು, ತಾವರಗೆರೆಯ ಬುದ್ಧ ವಿಹಾರದಲ್ಲಿ ಕರ್ನಾಟಕ ವಿದ್ಯಾರ್ಥಿ ಸಂಘಟನೆಯಿಂದ ಹಮ್ಮಿಕೊಂಡಿದ್ದ ಎರಡು ದಿನದ ಕರ್ಯಾಗಾರದಲ್ಲಿ ಮಾತನಾಡಿದರು.

“ಭವಿಷ್ಯವನ್ನ ರೂಪಿಸಿಕೊಳ್ಳಬೇಕಾದ ಇಂದಿನ ಯುವಕರು ದ್ವೇಷ ದಳ್ಳುರಿಗೆ ಬಲಿಯಾಗುತ್ತಿರುವುದು ನೋವಿನ ಸಂಗತಿ. ಧಾರ್ಮಿಕವಾದಿಗಳು‌ ಶಾಲೆ-ಕಾಲೇಜು ವಿದ್ಯಾರ್ಥಿಗಳನ್ನು ಧರ್ಮದ ನಶೆಯಲ್ಲಿ ಮಿಂದೇಳಿಸುತ್ತಿದ್ದು, ಅವರ ಮನದಾಳಲ್ಲಿ ವಿಷದ ಬೀಜ ಬಿತ್ತಿ ವಿದ್ಯಾರ್ಥಿ ಜೀವನವನ್ನೇ ನರಕದ ಕೂಪಕ್ಕೆ ತಳ್ಳುತ್ತಿದ್ದಾರೆ. ಇದನ್ನು ಕೆವಿಎಸ್ ಸಂಘಟನೆ ಕೆಲವು ದ್ವೇಷ ಹರಡುವ ಸಂಘಟನೆಗಳಿಂದ‌ ಹೊರ ತಂದು ಸುಭದ್ರ ದೇಶ‌ ಕಟ್ಟುವಲ್ಲಿ ಭಾಗಿಯಾಗುವಂತೆ ಪ್ರೇರೇಪಿಸಬೇಕು. ಅಂತಹ ಕೂಪದಿಂದ‌ ಹೊರ ತರಬೇಕಾದದ್ದೂ ಕೂಡ ಇಂತಹ ಸಂಘಟನೆಗಳ ಪ್ರಮುಖ ಪಾತ್ರವಾಗಿದೆ” ಎಂದು ಹೇಳಿದರು.

Advertisements
ಕೆವಿಎಸ್ 1 1


ಸಿರಾಜ್ ಅಹ್ಮದ್ ಮಾತನಾಡಿ “ಕೆವಿಎಸ್‌ ಸಂಘಟನೆ ಚೊಕ್ಕಟವಾಗಿದ್ದು, ಬಹಳ ಕ್ರಿಯಾಶೀಲವಾಗಿದೆ. ಈ ಸಂಘಟನೆಗೆ ನಮ್ಮ ಎಲ್ಲ ಸಹಕಾರವನ್ನು ಕೊಡುತ್ತೇವೆ” ಎಂದು ಭರವಸೆ ಕೊಟ್ಟರು.

ಈ ಸುದ್ದಿ ಓದಿದ್ದೀರಾ? ರಾಯಚೂರು | ಬಾಣಂತಿಯರ ಸಾವಿನ ಪ್ರಕರಣ ತಡೆಯುವಲ್ಲಿ ಸಚಿವ ದಿನೇಶ್, ಶರಣಪ್ರಕಾಶ್ ವಿಫಲ; ರಾಜೀನಾಮೆಗೆ ಕೆಆರ್‌ಎಸ್‌ ಆಗ್ರಹ

ರಫಿ ಮಹ್ಮದ್ ಮಾತನಾಡಿ, “ಬಾಬಾ ಸಾಹೇಬರ ಆಶಯ ಸಾಕಾರಗೊಳಿಸಬೇಕಾಗಿದೆ. 2014ರಿಂದ ದೇಶದಲ್ಲಿ ಧರ್ಮ ಧರ್ಮಗಳ ಮಧ್ಯ, ಜಾತಿಗಳ ಮಧ್ಯ, ಭಾಷೆಗಳ ಹೆಸರಲ್ಲಿ ಬಹುದೊಡ್ಡ ಕಂದಕ ಸೃಷ್ಟಿಯಾಗಿದೆ. ದೇಶ ಆರ್ಥಿಕವಾಗಿ ದಿವಾಳಿಯಾಗಿದೆ, ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ, ಬಡತನ- ಹಸಿವಿನ ಹಾಹಾಕಾರ ಹೆಚ್ಚಾಗಿದೆ. ಇಷ್ಟೆಲ್ಲಾ ಸಮಸ್ಯಗಳು ಇದ್ದರೂ ವಿದ್ಯಾರ್ಥಿ ಯುವ ಜನತೆ ಧರ್ಮದ ಹೆಸರಲ್ಲಿ, ಹುಸಿ ದೇಶ ಪ್ರೇಮದ ಹೆಸರಲ್ಲಿ ಅನ್ಯಧರ್ಮೀಯರ ವಿರುದ್ಧ ದ್ವೇಷ ಕಾರುವ ಮನಸ್ಥಿತಿಯವರಾಗಿದ್ದಾರೆ” ಎಂದು ಕಳವಳ ವ್ಯಕ್ತಪಡಿಸಿದರು.

ಸರೋವರ ಬೆಂಕಿಕೆರೆ, ದುರ್ಗೇಶ ಬರಗೂರಿ, ಮರಿಸ್ವಾಮಿ ಬರಗೂರು, ನೀಲಕಂಠ ಬಡಿಗೇರ, ಮಮತಾ ಚಿತ್ರದುರ್ಗ, ದೀಪಾ, ಯಮುನಾ,‌ ಪ್ರಗತಿ, ಲಕ್ಷ್ಮೀ, ಶ್ರೀದೇವಿ ಬರಗೂರು ಸೇರಿದಂತೆ ಬಹುತೇಕರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಕಡಿಮೆ ದರದಲ್ಲಿ ಊಟ ಉಪಾಹಾರ ಒದಗಿಸುವ ಅಕ್ಕ ಕೆಫೆ ಪ್ರಾರಂಭ

ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ...

ಸಕಲೇಶಪುರ | ಸಮಾಜ ವ್ಯಸನಮುಕ್ತವಾದಾಗ ಮಾತ್ರ ನೆಮ್ಮದಿಯ ಬದುಕು ಸಾಧ್ಯ: ಅವಿನಾಶ್‌ ಕಾಕಡೆ

ಸಮಾಜ ವ್ಯಸನಮುಕ್ತವಾದಾಗ ಮಾತ್ರ ನೆಮ್ಮದಿಯ ಬದುಕು ಸಾಧಿಸಲು ಸಾಧ್ಯ. ಹಾಗಾಗಿ ಮನೆಯಿಂದಲೇ...

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

Download Eedina App Android / iOS

X