ಡಿ ಎಸ್ ಚೌಗಲೆಯವರು ನಾಟಕ, ಸಾಹಿತ್ಯ, ಕಲೆ ಮತ್ತು ಅನುವಾದ ಕ್ಷೇತ್ರದಲ್ಲಿ ಹೆಸರು ಮಾಡಿದವರು. ಈಗ ʼಮಾತಂಗಿ ದೀವಟಿಗೆʼ ಚಿತ್ರದ ಮೂಲಕ ಅಭಿನಯದ ಪ್ರತಿಭೆಯನ್ನೂ ತೋರಿದ್ದಾರೆ ಎಂದು ಸಾಹಿತಿ ಡಾ. ಸರಜೂ ಕಾಟ್ಕರ್ ಅಭಿಪ್ರಾಯಪಟ್ಟರು.
ಬೆಳಗಾವಿ ನಗರದ ಕನ್ನಡ ಭವನದಲ್ಲಿ ಡಾ. ಡಿ ಎಸ್ ಚೌಗಲೆ ಅಭಿನಯದ ಸಮತಾ ದೇಶಮಾನೆಯವರ ಆತ್ಮಕತೆ ಆಧರಿಸಿದ ‘ಮಾತಂಗಿ ದೀವಟಿಗೆ’ ಚಿತ್ರ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಚಿತ್ರ ಪ್ರದರ್ಶನದ ನಂತರದ ಸಂವಾದದಲ್ಲಿ ಪ್ರೊ.ಶಿವಪ್ಪ ದಳವಾಯಿ ಮಾತನಾಡಿ, “ಯಾವುದೇ ಸಿನಿಮಾ ಅಥವಾ ನಾಟಕ ವೀಕ್ಷಿಸಿದ ಕೊನೆಗೆ ಪ್ರೇಕ್ಷಕರಲ್ಲಿ ಸಂತೋಷ, ಸಂತೃಪ್ತಿ ಮತ್ತು ಸಮಾಧಾನ ಮೂಡಿಸಬೇಕು. ಈ ಗುಣ ಮಾತಂಗಿ ದೀವಟಿಗೆ ಚಲನಚಿತ್ರದಲ್ಲಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಗೌರಿಬಿದನೂರು | ದಲಿತ ವ್ಯಕ್ತಿಗೆ ದೇವಾಲಯ ಪ್ರವೇಶ ನಿರಾಕರಣೆ
ನಿರ್ದೇಶಕ ಮಂಜು ಪಾಂಡವಪುರ ಅನುಭವ ಹಂಚಿಕೊಂಡರು. ಡಾ. ಡಿ ಎಸ್ ಚೌಗಲೆ ಪ್ರಾಸ್ತಾವಿಕ ಮಾತನಾಡಿದರು. ಅನುರಾಧ ಕಾಪಸಿ, ಪ್ರೊ. ಟಿ ವೆಂಕಟೇಶ, ಪ್ರೊ. ಬಿ ಎಸ್ ಗವಿಮಠ, ಡಾ. ಪಿ ಜಿ ಕೆಂಪಣ್ಣವರ, ಬಟ್ಟಲ ಅವರು ಮಾತನಾಡಿದರು.
ಪ್ರೊ. ಜಯಶ್ರೀ ವೈ ಬಿ ಹಿಮ್ಮಡಿ, ಜಗಜಂಪಿ, ಹುಲೆಪ್ಪನವರಮಠ, ದೇಶಮಾನೆ, ಡಾ.ಬಸವರಾಜ ಡಾ.ಗುರುದೇವಿ ಯ ರು ಪಾಟೀಲ, ಪ್ರೊ. ರಾಮಕೃಷ್ಣ ಮರಾಠ, ಪ್ರೊ. ಎ ಬಿ ಘಾಟಗೆ, ಪ್ರೊ. ಎ ಎ ಘೋರ್ಪಡೆ, ಡಾ. ಎಂ ಎಂ. ಜಾಧವ, ಜಗದೀಶ ಪಾಟೀಲ, ಜಗದೀಶ ಹೊಸಮನಿ, ಶೈಲಜಾ ಭಿಂಗೆ, ಸರ್ವಮಂಗಳ ಅರಳಿಮಟ್ಟಿ, ಪಾರ್ವತಿ ಪಿಟಗಿ, ಹೇಮಾ ಸೋನವಳಕರ, ಜ್ಯೋತಿ ಬದಾಮಿ ಸೇರಿದಂತೆ ಇತರರು ಇದ್ದರು.