- ತನಿಖೆ ನಡೆಸುವ ವೇಳೆ ಮೃತಳ ಗಂಡನ ಅಸಲಿ ಕಥೆ ಬಯಲು
- ಯಶವಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಎರಡನೇ ಪತ್ನಿಯನ್ನು ತಾನೇ ಕೊಂದು, ಅವಳು ಮಾತನಾಡುತ್ತಿಲ್ಲ ಎಂದು ಗೋಳಾಡುತ್ತ ಆಸ್ಪತ್ರೆಗೆ ಸೇರಿಸಿದ್ದ ದುರುಳ ಪತಿಯನ್ನು ತನಿಖೆ ಬಳಿಕ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ಯಶವಂತಪುರದಲ್ಲಿ ಈ ಘಟನೆ ನಡೆದಿದೆ. ಶರತ್ ಎಂಬುವವನು ಈ ಹಿಂದೆ ಮದುವೆ ಆಗಿದ್ದರೂ ಕೂಡಾ ಪ್ರೀಯಾ ಎಂಬುವವರನ್ನು ಎರಡನೇ ಮದುವೆಯಾಗಿದ್ದನು. ಮೊದಲನೇ ಹೆಂಡತಿಯ ಮನೆಗೆ ಹೋಗುತ್ತೀಯಾ ಎಂಬ ವಿಚಾರಕ್ಕೆ ದಂಪತಿ ಮಧ್ಯೆ ಪದೇಪದೆ ಜಗಳವಾಗುತ್ತಿತ್ತು. ಪ್ರಿಯಾ ಸಾವಿನ ಎರಡು ದಿನಗಳ ಹಿಂದೆ ಕೂಡ ದಂಪತಿಯ ಮಧ್ಯೆ ಜಗಳವಾಗಿತ್ತು.
ಜಗಳದ ಸಮಯದಲ್ಲಿ ಶರತ್ ತನ್ನ ಎರಡನೇ ಪತ್ನಿ ಪ್ರೀಯಾಳಿಗೆ ಥಳಿಸಿದ್ದನು. ಗಲಾಟೆ ವೇಳೆ ಪ್ರೀಯಾ ಕೆಳಗೆ ಬಿದ್ದು, ಅಲ್ಲೇ ಸಾವನ್ನಪ್ಪಿದ್ದಳು. ಪತ್ನಿ ಸಾವನ್ನಪ್ಪಿರುವುದನ್ನು ಕಂಡು ಭಯಬೀತನಾದ ಶರತ್ ಈ ಕೊಲೆಯನ್ನು ಮರೆಮಾಚಲು ಅವಳು ಮಾತನಾಡುತ್ತಿಲ್ಲ ಎಂದು ಗೋಳಾಡುತ್ತ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದನು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ನಿರೂದ್ಯೋಗವನ್ನು ಬಂಡವಾಳ ಮಾಡಿಕೊಂಡ ಆರೋಪಿಯ ಬಂಧನ
ಗಂಡ ಶರತ್ನ ಗೋಳಾಟ ನೋಡಲಾಗದೆ ವೈದ್ಯರು ಪ್ರೀಯಾಳಿಗೆ ಚಿಕಿತ್ಸೆ ನೀಡಲು ಕರೆದುಕೊಂಡು ಹೋಗಿದ್ದಾರೆ. ಚಿಕಿತ್ಸೆ ನೀಡುವ ವೇಳೆ ಪ್ರೀಯಾ ಮೃತಳಾಗಿರುವುದು ಬೆಳಕಿಗೆ ಬಂದಿದೆ. ಬಳಿಕ ಪೊಲೀಸರು ಇದು ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸುವ ವೇಳೆ ಮೃತಳ ಗಂಡನ ಅಸಲಿ ಕಥೆ ಬೆಳಕಿಗೆ ಬಂದಿದೆ. ಯಶವಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಶರತ್ನನ್ನ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ತನಿಖೆ ವೇಳೆ ನಡೆದ ಘಟನೆ ಬಗ್ಗೆ ಬಾಯಿ ಬಿಟ್ಟಿದ್ದಾನೆ.