ಕಾಲುವೆಗೆ ಈಜಲು ಹೋಗಿ ಕಾಲುವೆಯ ನೀರಿನ ರಭಸಕ್ಕೆ ಸಿಲುಕಿ ಯುವಕನೊಬ್ಬ ಸಾವನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಹನುಮಸಾಗರದಲ್ಲಿ ನಡೆದಿದೆ. ಹನಮಸಾಗರ ಗ್ರಾಮದ ನಿವಾಸಿ ಶೃದ್ಧಾನಂದ ಮೈಲಾರಿ (19) ಮೃತ ಯುವಕ.
ಶ್ರದ್ಧಾನಂದ ಮತ್ತು ಸ್ನೇಹಿತರು ಸಂಕ್ರಾತಿ ನಿಮಿತ್ತ ಹನುಮಸಾಗರ ಕಾಲುವೆಯಲ್ಲಿ ಈಜಲು ಹೋಗಿದ್ದರು. ಕಾಲುವೆಯಲ್ಲಿ ನೀರಿನ ಹರಿವು ಹೆಚ್ಚಿದ್ದು, ರಭಸಕ್ಕೆ ಶ್ರದ್ಧಾನಂದ ಸಿಲುಕಿ ಸಾವನಪ್ಪಿದ್ದಾರೆ. ಗೊಡಚಿ ಕಾಲುವೆಯಲ್ಲಿ ಮೃತದೇಹ ಪತ್ತೇಯಾಗಿದೆ.
ಈ ಸುದ್ದಿ ಓದಿದ್ದೀರಾ?: ಬೆಳಗಾವಿ | ಸಂಕ್ರಾತಿ ಹಬ್ಬಕ್ಕೆ ಬುತ್ತಿ ಕೊಡಲು ಮನೆಗೆ ಬಂದ ಅತ್ತೆಯನ್ನು ಕೊಲೆ ಮಾಡಿದ ಅಳಿಯ
ಸ್ಥಳದಲ್ಲಿ ರಾಮದುರ್ಗ ಪೋಲೀಸರು ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
