ಗದಗ ಜಿಲ್ಲೆ ಹಾಗೂ ತಾಲೂಕು ನಿರ್ವಹಣಾ ಘಟಕಗಳಲ್ಲಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 13 ವಿವಿಧ ಹುದ್ದೆ ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಜನವರಿ 15, ಅಂದರೆ ಇಂದೇ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ಆಫ್‌ಲೈನ್/ ಪೋಸ್ಟ್ ಮೂಲಕ ಅರ್ಜಿ ಸಲ್ಲಿಸಬೇಕು.
ಖಾಲಿ ಇರುವ ಹುದ್ದೆಗಳು ಎಷ್ಟು?
ವಿವಿಧ ವಿಭಾಗಗಳಲ್ಲಿ ಒಟ್ಟು 13 ಹುದ್ದೆಗಳ ಭರ್ತಿಗೆ ನೇಮಕಾತಿ ಪ್ರಕ್ರಿಯೆ ನಡೆಯಲಿದ್ದು, ಜಿಲ್ಲಾ ಕಚೇರಿ ಸಹಾಯಕ ವಿಭಾಗದಲ್ಲಿ 1 ಹುದ್ದೆ, ಬ್ಲಾಕ್ ಮ್ಯಾನೇಜರ್ ಫಾರಂ ಲೈವ್ಲಿಹುಡ್ ವಿಭಾಗದಲ್ಲಿ 4 ಹುದ್ದೆಗಳು, ಬ್ಲಾಕ್ ಮ್ಯಾನೇಜರ್ ನಾನ್ ಫಾರಂ ಲೈವ್ಲಿಹುಡ್ ವಿಭಾಗದಲ್ಲಿ 1 ಹುದ್ದೆ, ಕ್ಲಸ್ಟರ್ ಸೂಪರ್ ವೈಸರ್ ವಿಭಾಗದಲ್ಲಿ 2 ಹುದ್ದೆ ಹಾಗೂ ಕ್ಲಸ್ಟರ್ ಸೂಪರ್ವೈಸರ್ ಸ್ಕಿಲ್ ವಿಭಾಗದಲ್ಲಿ 5 ಹುದ್ದೆಗಳು ಖಾಲಿ ಇದೆ.
ವಿದ್ಯಾರ್ಹತೆ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪದವಿ ಮತ್ತು ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರಬೇಕು ಜೊತೆಗೆ ಅಭ್ಯರ್ಥಿಗಳು ಕಂಪ್ಯೂಟರ್ ಜ್ಞಾನ ಮತ್ತು ಟೈಪಿಂಗ್ನಲ್ಲಿ ಪರಿಣತಿ ಹೊಂದಿರಬೇಕು.
ಈ ಸುದ್ದಿ ಓದಿದ್ದೀರಾ? ಬೆಳಗಾವಿ | ಕಾಲುವೆಯಲ್ಲಿ ಈಜಲು ಹೋದ ಯುವಕ ನೀರುಪಾಲು
ವಯೋಮಿತಿ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಗರಿಷ್ಠ ವಯೋಮಿತಿ 45 ವರ್ಷ ಮೀರಿರಬಾರದು.