ಒಳ್ಳೆಯ ದಿನಗಳ ಕನಸಿನೊಂದಿಗೆ ಪ್ರಾರಂಭವಾದ ಕಳೆದ 2014- 24ರ ದಶಕದಲ್ಲಿ ದೇಶವು ಸಾಧಿಸಿದ ಆರ್ಥಿಕ ಅಭಿವೃದ್ಧಿಯೆಷ್ಟು ಎಂಬ ಚರ್ಚೆಯು 2025ಕ್ಕೆ ಕಾಲಿಟ್ಟ ಈ ಸಂದರ್ಭದಲ್ಲಿ ಅತ್ಯಂತ ಪ್ರಸ್ತುತ. ಬಿಜೆಪಿಯ ಚುನಾವಣಾ ಭರವಸೆ ಮತ್ತವರ ಸರ್ಕಾರದ ಆಕರ್ಷಕ ಹೆಸರಿನ ಯೋಜನೆಗಳು ಪ್ರಾರಂಭದಲ್ಲಿ ಭರವಸೆ ಮೂಡಿಸಿತ್ತು. ಮೊದಲೆರಡು ವರ್ಷಗಳು ಮಾನ್ಯ ಪ್ರಧಾನಿಯವರ ವಿನಮ್ರತೆಯ ಮಾತು, ಭಾಷಣ, ಎಲ್ಲರೊಡಗೂಡಿ ಸಾಗುವ (ಟೀಮ್ ಇಂಡಿಯಾ) ಇರಾದೆ ಮತ್ತವರ ಮನದಾಳದ ಮಾತುಗಳು ಜನಮನವನ್ನು ಸೆಳೆದಿತ್ತು. ನೋಟು ಅಮಾನ್ಯೀಕರಣದ ಅವಾಂತರಗಳ ನಡುವೆಯೂ ಒಳ್ಳೆಯ ದಿನಗಳ ನಿರೀಕ್ಷೆಯಲ್ಲಿ…

ಲತಾಮಾಲ
ಗ್ರಾಮೀಣಾಭಿವೃದ್ಧಿ ತಜ್ಞರು ಮತ್ತು ಲೇಖಕರು