ಭಾರತ ಮತ್ತು ಐರ್ಲೆಂಡ್ ನಡುವೆ ನಡೆಯುತ್ತಿರುವ ಏಕದಿನ ಸರಣಿಯಲ್ಲಿ ಮಹಿಳಾ ಟೀಮ್-ಇಂಡಿಯಾ ನಾಯಕಿ ಸ್ಮೃತಿ ಮಂದಾನಾ ವೇಗವಾಗಿ ಶತಕ ಬಾರಿಸಿದ್ದಾರೆ. ಹೊಸ ದಾಖಲೆ ಬರೆದಿದ್ದಾರೆ. ಮಹಿಳಾ ಕ್ರಿಕೆಟ್‌ನಲ್ಲಿ ಕಡಿಮೆ ಬಾಲ್‌ಗಳಿಗೆ ಶತಕ ಸಿಡಿಸಿದ ಆಟಗಾರ್ತಿ ಎಂಬ ಹೆಗ್ಗಳಿಕೆಗೂ ಭಾಜನರಾಗಿದ್ದಾರೆ.
ಗುಜರಾತ್‌ನ ರಾಜ್‌ಕೋರ್ಟ್‌ನಲ್ಲಿರುವ ನಿರಂಜನ್ ಶಾ ಕ್ರೀಡಾಂಗಣದಲ್ಲಿ ಭಾರತ ಮತ್ತು ಐರ್ಲೆಂಡ್ ನಡುವೆ ಏಕದಿನ ಪಂದ್ಯ ನಡೆದಿದೆ. ಪಂದ್ಯದಲ್ಲಿ 70 ಎಸೆತಗಳಲ್ಲಿ ಶತಕ ಬಾರಿಸಿದ ಸ್ಮೃತಿ ಮಂದಾನಾ ದಾಖಲೆ ಬರೆದಿದ್ದಾರೆ.
ಈ ಹಿಂದೆ, ಭಾರತದ ತಂಡದ ಹರ್ಮನ್‌ಪ್ರೀತ್ ಕೌರ್ ಅವರು ಅತೀ ವೇಗವಾಗಿ ಶತಕ ಬಾರಿಸಿದ ಕ್ರಿಕೆಟ್ ಆಟಗಾರ್ತಿ ಎಂಬ ಹೆಗ್ಗಳಿಕೆ ಹೊಂದಿದ್ದರು. ಅವರು 87 ಎಸೆತಗಳಲ್ಲಿ ಶತಕ ಬಾರಿಸಿದ್ದರು. ಈಗ, ಅವರ ದಾಖಲೆಯನ್ನು ಸ್ಮೃತಿ ಮಂದಾನಾ ಮುರಿದಿದ್ದಾರೆ.
ಈವರೆಗೆ, ಏಕದಿನ ಪಂದ್ಯಗಳಲ್ಲಿ ಮಂದಾನಾ ಅವರು 10 ಶತಕಗಳನ್ನು ಬಾರಿಸಿದ್ದಾರೆ. ಮಹಿಳಾ ಏಕದಿನ ಪಂದ್ಯಗಳಲ್ಲಿ ಆಸ್ಟ್ರೇಲಿಯಾದ ಮೇಗ್ ಲ್ಯಾನಿಂಗ್ 15 ಶತಕಗಳನ್ನು ಸಿಡಿಸಿದ್ದು, ಮೊದಲ ಸ್ಥಾನದಲ್ಲಿದ್ದಾರೆ. ನ್ಯೂಜಿಲ್ಯಾಂಡ್‌ನ ಬೇಟ್ಸ್ 13 ಶತಕ ಬಾರಿಸಿ ಎರಡನೇ ಸ್ಥಾನದಲ್ಲಿದ್ದಾರೆ. ಭಾರತದ ಮಂದಾನಾ ಮತ್ತು ಇಂಗ್ಲೆಂಡ್‌ನ ಟ್ಯಾಮಿ ಅವರು ತಲಾ 10 ಶತಕಗಳನ್ನು ಸಿಡಿಸಿ ಮೂರನೇ ಸ್ಥಾನದಲ್ಲಿದ್ದಾರೆ.