ಛತ್ತೀಸ್‌ಗಢ ಮದ್ಯ ಹಗರಣ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ, ಮಾಜಿ ಸಚಿವ ಕವಾಸಿ ಲಖ್ಮಾ ಅವರನ್ನು ಬುಧವಾರ ಜಾರಿ ನಿರ್ದೆಶನಾಲಯ (ಇಡಿ) ಅಧಿಕಾರಿಗಳು ಬಂಧಿಸಿದ್ದಾರೆ.
ಮದ್ಯ ಹಗರಣ ಪ್ರಕರಣದಲ್ಲಿ ತನಿಖಾ ಸಂಸ್ಥೆಯು ಡಿಸೆಂಬರ್ 28ರಂದು ಕವಾಸಿ ಲಖ್ಮಾ ಅವರ ಆಸ್ತಿ ಮತ್ತು ಅವರ ಪುತ್ರ ಹರೀಶ್ ಲಖ್ಮಾ ಅವರ ರಾಯ್‌ಪುರದಲ್ಲಿರುವ ಆಸ್ತಿಯ ಮೇಲೆ ದಾಳಿ ನಡೆಸಿ ಶೋಧ ನಡೆಸಿದ್ದರು. ಇಬ್ಬರ ವಿಚಾರಣೆಯನ್ನೂ ಕೂಡಾ ಮಾಡಿದ್ದರು.
ಇದನ್ನು ಓದಿದ್ದೀರಾ? ದೆಹಲಿ ಮದ್ಯ ಹಗರಣ | ನಾನು ದೋಷಮುಕ್ತವಾಗಿ ಹೊರಬರುತ್ತೇನೆ: ಎಂಎಲ್‌ಸಿ ಕವಿತಾ
ಬುಧವಾರ ಕವಾಸಿ ಲಖ್ಮಾ ಅವರನ್ನು ಇಡಿ ಕಚೇರಿಗೆ ಕರೆಸಿ ವಿಚಾರಣೆ ನಡೆಸಲಾಗಿದ್ದು, ಅದಾದ ಬಳಿಕ ಇಡಿ ಬಂಧಿಸಿದೆ. ವೈದ್ಯಕೀಯ ಪರೀಕ್ಷೆ ನಡೆಸಿದ ಬಳಿಕ ಕವಾಸಿ ಅವರನ್ನು ಕೋರ್ಟ್ ಮುಂದೆ ಹಾಜರುಪಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮದ್ಯ ಹಗರಣ ಪ್ರಕರಣದಲ್ಲಿ ಲಖ್ಮಾ ಪ್ರಮುಖ ಆರೋಪಿ ಎಂದು ಈ ಹಿಂದೆ ಇಡಿ ಆರೋಪಿಸಿದೆ. ಅಬಕಾರಿ ಸಚಿವರಾಗಿದ್ದ ಸಂದರ್ಭದಲ್ಲಿ ಅಕ್ರಮ ನಡೆಸಿದ್ದರು. ಮಾಸಿಕವಾಗಿ ಹಣ ಪಡೆಯುತ್ತಿದ್ದರು. 2019-2022ರ ನಡುವೆ ಈ ಅಕ್ರಮ ನಡೆದಿದೆ ಎಂದು ದೂರಲಾಗಿದೆ.
