ದೆಹಲಿಯಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲು ದೆಹಲಿ ಗಲಭೆ ಆರೋಪಿ ತಾಹಿರ್ ಹುಸೇನ್ ಗುರುವಾರ ಬೆಳಿಗ್ಗೆ ತಿಹಾರ್ ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ದೆಹಲಿ ಹೈಕೋರ್ಟ್ ಕಸ್ಟಡಿ ಪೆರೋಲ್ ನೀಡಿದ್ದು ದೆಹಲಿ ಪೊಲೀಸರ ಭದ್ರತೆಯೊಂದಿಗೆ ತಾಹಿರ್ ಅವರನ್ನು ತಿಹಾರ್ ಜೈಲಿನಿಂದ ಬಿಡುಗಡೆ ಮಾಡಲಾಗಿದೆ. ಬೆಳಿಗ್ಗೆ ಸುಮಾರು 9:15ರ ಸುಮಾರಿಗೆ ಅವರನ್ನು ಜೈಲಿನಿಂದ ಹೊರಬಂದಿದ್ದಾರೆ ಎಂದು ವರದಿಯಾಗಿದೆ.
ಇದನ್ನು ಓದಿದ್ದೀರಾ? ದೆಹಲಿ ಗಲಭೆ ಪ್ರಕರಣ | ನನ್ನನ್ನು ಆರೋಪಿ ಎನ್ನಲು ಆಧಾರ ಏನಿದೆ: ಉಮರ್ ಖಾಲಿದ್ ಪ್ರಶ್ನೆ
ಆಮ್ ಆದ್ಮಿ ಪಕ್ಷ (ಎಎಪಿ) ಮಾಜಿ ಕೌನ್ಸಿಲರ್ ಹುಸೇನ್ ಅವರಿಗೆ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ದೆಹಲಿಯ ಮುಸ್ತಾಬಾದ್ ಕ್ಷೇತ್ರದ ಟಿಕೆಟ್ ಅನ್ನು ನೀಡಿದೆ. ಗಲಭೆ ಸಂಬಂಧಿತ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ಹುಸೇನ್ ಅವರಿಗೆ ಮುಸ್ತಾಬಾದ್ ಕ್ಷೇತ್ರದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲು ದೆಹಲಿ ಹೈಕೋರ್ಟ್ ಮಂಗಳವಾರ ಕಸ್ಟಡಿ ಪೆರೋಲ್ ನೀಡಿದೆ.
2020ರ ಫೆಬ್ರವರಿ 24ರಂದು ಈಶಾನ್ಯ ದೆಹಲಿಯಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, ಸುಮಾರು 53 ಜನರು ಸಾವನ್ನಪ್ಪಿದ್ದಾರೆ. ಹಲವು ಮಂದಿ ಗಾಯಗೊಂಡಿದ್ದಾರೆ.
ಇನ್ನು ದೆಹಲಿಯ 70 ವಿಧಾನಸಭೆ ಕ್ಷೇತ್ರಗಳಿಗೆ ಫೆಬ್ರವರಿ 5ರಂದು ಚುನಾವಣೆ ನಡೆಯಲಿದ್ದು, ಫೆಬ್ರವರಿ 8ರಂದು ಫಲಿತಾಂಶ ಹೊರಬೀಳಲಿದೆ.
