ಶಿವಮೊಗ್ಗ ನಗರದ ಸಾಗರ ರಸ್ತೆಯಲ್ಲಿರುವ ಮದ್ಯದಂಗಡಿ(ಬಾರ್) ಬಳಿ 6 ಮಂದಿ ಸ್ನೇಹಿತರು ಜೊತೆಗೂಡಿ ಮದ್ಯ ಸೇವನೆ ಮಾಡಿದ್ದರು. ಈ ವೇಳೆ ಮಾತಿಗೆ ಮಾತು ಬೆಳೆದು ಗಲಾಟೆಯಾಗಿದ್ದು, ಮಾರಕಸ್ತ್ರದಿಂದ ಹಲ್ಲೆ ಮಾಡಿರುವ ಘಟನೆ ನಡೆದಿದೆ.
6 ಮಂದಿ ಸ್ನೇಹಿತರ ನಡುವೆ ಜಗಳವಾಗಿದ್ದು, ಕಿರಣ್ ಎಂಬಾತ ತನ್ನ ಇನ್ನೊಬ್ಬ ಸ್ನೇಹಿತನಾದ ಸದಾನಂದ ಎರಂಬುವವನನ್ನು ಗಾಡಿಕೊಪ್ಪ ಬಾರ್ ಒಂದರ ಪಕ್ಕ ಬರಲು ತಿಳಿಸಿದ್ದಾನೆ. ಸದಾನಂದರವರು ಬಂದ ನಂತರ ಪುನಃ ಜಗಳ ಪ್ರಾರಂಭವಾಗಿ ಆರು ಜನರ ಪೈಕಿ ಮೂವರು ಚಾಕುವಿನಿಂದ ಹಲ್ಲೆ ಮಾಡಿದ್ದು, ಹಲ್ಲೆಗೊಳಗಾದ ಸದಾನಂದ ಎಂಬಾತ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕೊಡಗು | ಆದಿವಾಸಿಗಳ ಕುರಿತು ವರದಿಗೆ ಬಂದ ಪತ್ರಕರ್ತನನ್ನು ವಶಕ್ಕೆ ಪಡೆದ ಪೊಲೀಸರು
ಘಟನೆಯಲ್ಲಿ ಗಾಯಗೊಂಡ ವ್ಯಕ್ತಿಯನ್ನು ಶಿವಮೊಗ್ಗದ ಜಿಲ್ಲಾ ಮೆಗ್ಗಾನ್ ಅಸ್ಪತ್ರೆಗೆ ದಾಖಲಿಸಿದ್ದು, ಕಿರಣ್ ಎಂಬುವವರು ಜ.13ರ ಮಧ್ಯ ರಾತ್ರಿ 1:30ರ ವೇಳೆಯಲ್ಲಿ ಶಿವಮೊಗ್ಗ ನಗರದ ವಿನೋಬನಗರದ ಪೊಲೀಸ್ ಠಾಣೆಗೆ ಅಗಮಿಸಿ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಘಟನೆ ಕುರಿತು ವಿನೋಬ ನಗರ ಪೊಲೀಸ್ ಠಾಣೆಯಲ್ಲಿ ಆನಂದ್, ನಿತಿನ್, ಮೋಹನ್, ಮಾಲತೇಶ್ ಮತ್ತು ರಾಕೇಶ್ ಅಡ್ಡು ಎಂಬುವವರ ವಿರುದ್ದ ಪ್ರಕರಣ ದಾಖಲಾಗಿದೆ.