ಯುವಕರು ಜನಪದದತ್ತ ಆಸಕ್ತಿ ವಹಿಸಬೇಕು, ಜನಪದ ಉಳಿಸಿ ಬೆಳೆಸುವ ಕಾರ್ಯದಲ್ಲಿ ತೊಡಗಬೇಕು. ಜನಪದ ಸಂರಕ್ಷಣೆ ಯುವಕರ ಹೊಣೆಯಾಗಿದೆ ಎಂದು ಕನ್ನಡ ಜಾನಪದ ಪರಿಷತ್ ಹಾಗೂ ಜಾನಪದ ಯುವ ಬ್ರಿಗೇಡ್ ರಾಜ್ಯಾಧ್ಯಕ್ಷ ಹಾಗೂ ಐಸಿಸಿಆರ್ ಸದಸ್ಯ ಡಾ. ಎಸ್ ಬಾಲಾಜಿ ಹೇಳಿದರು.
ನಗರದ ಸರಕಾರಿ ಪ್ರೌಢಶಾಲೆ ಆರ್ ಎನ್ ಶೆಟ್ಟಿ ಕ್ರೀಡಾಂಗಣದಲ್ಲಿ ನಡೆದ, ಕನ್ನಡ ಜಾನಪದ ಪರಿಷತ್ ಅಂಗಸಂಸ್ಥೆ ಜಾನಪದ ಯುವ ಬ್ರಿಗೇಡ್ ಜಿಲ್ಲಾ ಘಟಕದ ಉದ್ಘಾಟನಾ ಸಮಾರಂಭ ಮತ್ತು ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಯುವಕರು ಜನಪದದತ್ತ ಆಸಕ್ತಿ ವಹಿಸಬೇಕು, ಜನಪದ ಉಳಿಸಿ ಬೆಳೆಸುವಂತ ಕಾರ್ಯದಲ್ಲಿ ತೊಡಗಿಕೊಳ್ಳಬೇಕು. ಜಾನಪದದ ವ್ಯಾಪ್ತಿ ಬಹು ವಿಸ್ತಾರವಾಗಿದ್ದು ಅದರ ಬಗ್ಗೆ ಅಧ್ಯಯನ ಮತ್ತು ಸಂಶೋಧನೆ ಅಗತ್ಯವಿದೆ. ಮತ್ತು ನೂತನ ಪದಪತ್ರ ಪಡೆದ ಜಿಲ್ಲಾ ಮತ್ತು ತಾಲೂಕ ಸಂಚಾಲಕ, ಸಹ ಸಂಚಾಲಕರು ಜನಪದ ಸಂರಕ್ಷಣೆ ಮತ್ತು ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿಕೊಳ್ಳಲ್ಲಿ ಎಂದು ಹಾರೈಸಿದರು.
ಶಾಲೆಯ ಮುಖ್ಯೋಪಾಧ್ಯಾಯ ಶ್ರೀದೇವಿ ಲದ್ದಿಮಠ ಅಧ್ಯಕ್ಷತೆ ವಹಿಸಿದ್ದರು, ಪ್ರಾಸ್ತಾವಿಕವಾಗಿ ಕನ್ನಡ ಜಾನಪದ ಪರಿಷತ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ ಎಸ್ ಕೌಜಲಗಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಧಾರವಾಡ ಕಸಾಪ ಅಧ್ಯಕ್ಷ ಲಿಂಗರಾಜ ಅಂಗಡಿ ಇದ್ದರು. ಕುಂದಗೋಳ ಸರ್ಕಾರಿ ಡಿಗ್ರಿ ಕಾಲೇಜಿನ ಪ್ರಾಂಶುಪಾಲ ಬಿ ಎಸ್ ಶಿರಿಯಪ್ಪಗೌಡರ ಮತ್ತು ಧಾರವಾಡ ಕಜಾಪ ಅಧ್ಯಕ್ಷ ಈರಪ್ಪ ಕ ಎಮ್ಮಿ ಮಾತನಾಡಿದರು.
ಈ ವರದಿ ಓದಿದ್ದೀರಾ? ಧಾರವಾಡ | ಆಕಾಶವಾಣಿ ಎದುರು ಮರಕ್ಕೆ ಡಿಕ್ಕಿ ಹೊಡೆದ ಕಾರು: ಗಾಯಾಳು ಆಸ್ಪತ್ರೆಗೆ ದಾಖಲು
ಧಾರವಾಡ ಜಿಲ್ಲಾ ಸಂಚಾಲಕರಾಗಿ ಮಹೇಶ ಎಸ್ ತಳವಾರ, ಜಿಲ್ಲಾ ಸಹ ಸಂಚಾಲಕರಾಗಿ ರಾ.ಹ.ಕೊಂಡಕೇರ, ಕುಂದಗೋಳ ತಾಲೂಕ ಸಂಚಾಲಕರಾಗಿ ಮಾರುತಿ ಗೊಲ್ಲರ, ಧಾರವಾಡ ತಾಲೂಕ ಸಂಚಾಲಕರಾಗಿ ದೇವರಾಜ ಅರ್ಟಗಲ್ಲ, ಸಹ ಸಂಚಾಲಕರಾಗಿ ಜಂಗಪ್ಪ ಜೋಗಿ, ನವಲಗುಂದ ಸಂಚಾಲಕರಾಗಿ ಪ್ರಶಾಂತ ನಾಯ್ಕರ ಪದಗ್ರಹಣ ಮಾಡಿದರು.